ಆಗಲ್ಲ ಅಂದದ್ದು ಯಾರು
ಎಲ್ಲವೂ ಸಾದ್ಯ.
ಅದಕ್ಕೆ ಈ ಕನಸು..!?
ನಿನ್ನೆ ಚಂದ್ರನ ನೋಡಿ ಊಟ ಮಾಡಿದವನು
ಇವತ್ತು ಅವನ ಮೇಲೆ ಕಾಲಿಟ್ಟದ್ದು.,
ಅವಾಗ ಚಂದ ಮಾಮ
ಈಗ ಉಪಗ್ರಹ
ಅವಳಿಗೆ ಮಾತು ಕೊಟ್ಟಿದ್ದೆ..!?
ಚಂದ್ರನನ್ನು ನಿನ್ನ ಮುಂದಿರಿಸುತ್ತೇನೆ,
ಇಟ್ಟದ್ದು ಮಾತ್ರ ಅವಳನ್ನು..!
ಅದಕ್ಕೆ ಒಂದಷ್ಟು ಕೋಟಿ ಖರ್ಚಾಗಿದೆ..
ಕೆಲವು ದಿನಗಳ ನಿದ್ದೆ ಹೋಗಿದೆ ಅಷ್ಟೇ..
ಭೂಮಿಯಿಂದ ಹೊರಟ ರಾಕೆಟ್,
ಭೂಮಿಗೆ ಸುತ್ತಿ ಚಂದ್ರನ ತಲುಪಿದ್ದು..
ಕಂಡ ನಕ್ಷತ್ರಗಳೆಲ್ಲ ಅಲ್ಲಿ ಬಂಡೆಗಳು..
ಭೂಮಿಯೊಳಗಿದ್ದಷ್ಟು ಶಾಂತವಾಗಿರಲಿಲ್ಲ ಸೂರ್ಯ..
ಚಂದ್ರನೂ ಅಷ್ಟೇ ಇಲ್ಲಿಂದ ಸೆಳೆದಷ್ಟು
ಸೆಳೆದಿಲ್ಲ
ಅಲ್ಲಿ ಸೆಳೆತವೇ ಇರಲಿಲ್ಲ..!
ನಿಜ ಏನೆಂದರೆ…,
ಇಷ್ಟೆಲ್ಲ ನಡೆದದ್ದು ಕನಸಿನಲ್ಲಿ
ಕನಸಿಗೆ ಇದೆಲ್ಲಾ ಕಷ್ಟವೇ ಅಲ್ಲ
ಏಕೆಂದರೆ ಕನಸು
ಬಯಕೆ ಈಡೇರಿಸುವ ಸುಲಭ ದಾರಿ..
ಕನಸಿಗೆ,
ಸೂರ್ಯನು ದೂರ ಅಲ್ಲ ಬಿಡಿ..!
ಕನಸು ನನಸಾಗಿಸಿದರೆ
ಚಂದ್ರ ಇಂದ್ರ..
ಯಾವುದಕ್ಕೂ ಒಂದು ಕನಸು ಕಾಣು..!
✍ಯತೀಶ್ ಕಾಮಾಜೆ