ಕಟೀಲು: ಧಾರ್ಮಿಕ ಆಚಾರ ವಿಚಾರ ಪರಿಸರ ಕಾಳಜಿಗಳು ದೇವಸ್ಥಾನಗಳಿಂದ ಪ್ರಾರಂಭವಾಗಬೇಕು ಎಂದು ಮೈಸೂರು ಸಂಸ್ಥಾನದ ಶ್ರೀ ಯದುವೀರ ಕೃಷ್ಣ ದತ್ತ ಚಾಮರಾಜ ಒಡೆಯರ್ ಹೇಳಿದರು.
ಅವರು ಕಟೀಲು ಬ್ರಹ್ಮಕಲಶೋತ್ಸವದ ಉಗ್ರಾಣ ಮುಹೂರ್ತ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡಿದರು.
ದಕ್ಷಿಣ ಕನ್ನಡದ ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮಕ್ಕೆ ಎಷ್ಟು ಒತ್ತು ನೀಡುತ್ತಾರೋ ಆಷ್ಟೇ ಪ್ರಕೃತಿಯ ಬಗ್ಗೆ ಕಾಳಜಿಯುಳ್ಳವರು ಹಾಗು ಜೀವ ವೈವಿದ್ಯ ಜೋತೆಗೆ ತುಂಬಾ ಹೋಂದಾಣಿಕೆ ಇರುವವರು. ಧಾರ್ಮಿಕ ಆಚಾರ ವಿಚಾರ ಪರಿಸರ ಕಾಳಜಿಗಳು ದೇವಸ್ಥಾನಗಳಿಂದ ಪ್ರಾರಂಭವಾಗಬೇಕು. ದೇಸೀ ತಳಿಗಳನ್ನು ನಾವು ಉಪಯೋಗಿಸಬೇಕು. ದೇಸಿ ತಳಿಗಳಾದ ಅಕ್ಕಿ, ಹಸು, ಬಟ್ಟೆ ಮೊದಲಾದ ನಾವು ತಯಾರಿಸಿದ ವಸ್ತುಗಳನ್ನು ಬಳಸಬೇಕು. ಇದರಿಂದ ನಮಗೂ ಒಳ್ಳೆಯದು ಹಾಗು ಪರಿಸರನು ಉಳಿಯುತ್ತೆ ಎಂದರು.
ನಮ್ಮ ಮೈಸೂರು ಅರಮನೆ ಎಂದಿಗೂ ಧಾರ್ಮಿಕ ಆಚರಣೆಗೆ ಪ್ರೋತ್ಸಾವನ್ನು ಹಾಗು ಸಹಾಯವನ್ನು ಯಾವಾಗಲು ಮಾಡುತ್ತೇವೆ ಎಂದರು.


ಕಾರ್ಯಕ್ರಮದಲ್ಲಿ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ, ಬಲ್ಯೊಟ್ಟು ಶ್ರೀ ಗುರುಕೃಪಾ ಸೇವಾಶ್ರಮದ ವಿಖ್ಯಾತ ನಂದ ಸ್ವಾಮೀಜಿ, ಕೇಮಾರು ಸಾಂದೀಪನಿ ಮಠದ ಈಶ ವಿಠಲದಾಸ ಸ್ವಾಮೀಜಿ , ಸಂಸದ ನಳಿನ್ ಕುಮಾರ್ ಕಟೀಲು, ದೇವಳದ ಅನುವಂಶಿಕ ಅರ್ಚಕ ವಾಸುದೇವ ಆಸ್ರಣ್ಣ, ವೇದವ್ಯಾಸ ಉಡುಪ, ಮತ್ತಿತರರು ಇದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here