ಕಟೀಲು: ದೇವಸ್ಥಾನದ ಬಳಿ ಇದ್ದ ಮೂರು ಅಶ್ವಥ ಮರಗಳನ್ನು ಯಶಸ್ವಿಯಾಗಿ ಶಿಫ್ಟ್ ಮಾಡಲಾಯಿತು. ಕಟೀಲು ದೇವಸ್ಥಾನದ ಬ್ರಹ್ಮಕಲಶೋತ್ಸವ ಹಿನ್ನೆಲೆಯಲ್ಲಿ ಈ ಮರಗಳ ಶಿಪ್ಟಿಂಗ್ ಕಾರ್ಯ ನಡೆಯುತ್ತಿದೆ.
ಶತಮಾನದ ಒಂದೊಂದು ಮರಗಳು 70ಟನ್ ಗಿಂತ ಹೆಚ್ಚು ತೂಕವಿರುವ ಈ ಮರಗಳನ್ನು ಮತ್ತೊಂದು ಜಾಗಕ್ಕೆ ಶಿಫ್ಟ್ ಮಾಡುವ ಮೂಲಕ ಮರಗಳನ್ನು ಉಳಿಸುವ ಕೆಲಸವನ್ನು ಕುಡ್ಲದ ಜೀತ್ ಮಿಲಾನ್ ರೋಚ್ ಅವರ ತಂಡ ಮಾಡಿದೆ. ಇದಕ್ಕಾಗಿ ತಂಡ 24 ಗಂಟೆಗಳ ಕಾಲ ನಿರಂತರ ಕೆಲಸದಲ್ಲಿ ತೊಡಗಿಸಿಕೊಂಡಿತು. ಈಗಾಗಲೇ ಇಂತಹ ಸಾಕಷ್ಟು ಮರಗಳನ್ನು ಶಿಫ್ಟ್ ಮಾಡಿ ನಂತರ ಅದನ್ನು ಅಷ್ಟೇ ಚೆನ್ನಾಗಿ ಬದುಕಿಸಿದ ಕೀರ್ತಿ ಜೀತ್ ಅವರಿಗೆ ಸಲ್ಲುತ್ತದೆ.