ಕಲ್ಲಡ್ಕ: ಪ್ರತಿಭೆ ಎನ್ನುವುದು ಪ್ರತಿಯೊಬ್ಬ ವಿದ್ಯಾರ್ಥಿಗಳಲ್ಲಿ ಇರುತ್ತದೆ. ಇದನ್ನು ಉದ್ದೀಪನಗೊಳಿಸುವವರು ಶಿಕ್ಷಕರು. ಇಲ್ಲಿರುವ ಪ್ರತಿಭೆಗಳು ರಾಷ್ಟ್ರಮಟ್ಟದಲ್ಲಿ ಗುರುತಿಸುವಂತಾಗಲಿ. ಶ್ರೀರಾಮ ಶಾಲೆಯಲ್ಲಿನ ಶಿಸ್ತಿನ ಪಾಠ, ಸಂಸ್ಕೃತಿ – ಸಂಸ್ಕಾರ, ಪ್ರಾರ್ಥನೆ ಕಣ್ತುಂಬಿಕೊಳ್ಳಲು ಸಂತೋಷವಾಯಿತು ಎಂದು ಗೋಳ್ತಮಜಲು ಗ್ರಾ. ಪಂ. ಪಿ.ಡಿ.ಓ ಶಿವಾನಂದ ಪೂಜಾರಿ ಹೇಳಿದರು.
ಗೋಳ್ತಮಜಲು ಗ್ರಾಮ ಲೆಕ್ಕಾಧಿಕಾರಿ ಜನಾರ್ಧನ್ ಮಾತನಾಡುತ್ತಾ, ಇಂದಿನ ಸಂಸ್ಕೃತಿ – ಪರಂಪರೆಯನ್ನು ಉಳಿಸಿಕೊಳ್ಳುವ ಕಾರ್ಯ ಈ ಸಂಸ್ಥೆ ಮಾಡುತ್ತಿದೆ. ತಮ್ಮ ಪ್ರತಿಭೆಯ ಮೂಲಕ ಉನ್ನತ ಮಟ್ಟಕೆ ಏರಿ, ಉತ್ತಮ ಪ್ರಜೆಯಾಗಿ, ಸಮಾಜದಲ್ಲಿ ಒಳ್ಳೆಯ ಸ್ಥಾನಮಾನ ಪಡೆಯಿರಿ ಎಂದು ಶುಭ ಹಾರೈಸಿದರು.
ನೃತ್ಯ ಭಜನೆ, ನಾಟಕ, ಪೂಕಳಂ, ಶಂಖನಾದ, ಕಸದಿಂದ ರಸ, ಆಶುಭಾಷಣ, ಏಕಪಾತ್ರಾಭಿನಯ, ಕವನ ರಚನೆ ಇತ್ಯಾದಿ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿದರು. ಅಧ್ಯಾಪಕರಾದ ಲಕ್ಷ್ಮೀ ಹಾಗೂ ನವ್ಯಶ್ರೀ ಬಹುಮಾನ ವಾಚಿಸಿದರು. ನಂತರ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು. ಇದನ್ನು ಶಿಕ್ಷಕಿಯಾದ ಸೌಮ್ಯ ವಾಚಿಸಿದರು.
ವೇದಿಕೆಯಲ್ಲಿ ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕ ವಸಂತ ಮಾಧವ, ಸಹಸಂಚಾಲಕ ರಮೇಶ್ ಎನ್., ಮಾಜಿ ಜಿ. ಪಂ.ಸದಸ್ಯ ಚೆನ್ನಪ್ಪ ಕೋಟ್ಯಾನ್, ಬಾಳ್ತಿಲ ಗ್ರಾ. ಪಂ. ಪಿ.ಡಿ.ಓ. ಸಂದ್ಯಾ ಕೋಡಿಕಲ್, ಗೋಳ್ತಮಜಲು ಗ್ರಾಮ ಸಹಾಯಕ ಮೋಹನ್‌ದಾಸ್ ಕೊಟ್ಟಾರಿ, ಕಲ್ಲಡ್ಕ ಕ್ವಾಲಿಟಿ ಸ್ವೀಟ್ಸ್‌ನ ಮಾಲಕ ವಿಶ್ವನಾಥ, ಭಾರತೀಯ ಜೀವವಿಮಾ ನಿಗಮದ ಗಂಗಾಧರ್ ಹಾಗೂ ಶಾಲಾ ಮುಖ್ಯಶಿಕ್ಷಕ ರವಿರಾಜ್ ಕಣಂತೂರು ಉಪಸ್ಥಿತರಿದ್ದರು. ಸುಮಂತ್ ಆಳ್ವ ಸ್ವಾಗತಿಸಿ, ಅನ್ನಪೂರ್ಣ ವಂದಿಸಿದರು. ಶಿಕ್ಷಕಿ ರಕ್ಷಿತಾ ಕಾರ್ಯಕ್ರಮ ನಿರೂಪಿಸಿದರು.