Monday, October 23, 2023

ಅಣ್ಣ ತಂಗಿಯ ಸಾಧನೆ ಐರಿಸ್ ರಾಷ್ಟ್ರೀಯ ವಿಜ್ಞಾನ ಮೇಳದಲ್ಲಿ ಪ್ರಬಂದ ಮಂಡನೆ

Must read

ಬಂಟ್ವಾಳ : ಬಂಟ್ವಾಳ ತಾಲೂಕಿನ ಬಿ.ಸಿ.ರೋಡ್ ಸಂಚಯಗಿರಿಯ ಅಣ್ಣ-ತಂಗಿ ವಿದ್ಯಾರ್ಥಿಗಳಿಬ್ಬರು ಐರಿಸ್ ರಾಷ್ಟ್ರೀಯ ವಿಜ್ಞಾನ ಮೇಳ ೨೦೨೦ ಇದರಲ್ಲಿ ಭಾಗವಹಿಸಿ ಪ್ರಶಂಸಾ ಪತ್ರ ಪಡೆದಿದ್ದಾರೆ.
ಮೊಡಂಕಾಪು ಇನೆಂಟ್ ಜೀಸಸ್ ಆಂಗ್ಲ ಮಾಧ್ಯಮ ಶಾಲೆಯ ೯ನೇ ತರಗತಿ ವಿದ್ಯಾರ್ಥಿನಿ
ವರ್ಷಾ ಡಿ. ಗೌಡ ಹಾಗೂ ಮಂಗಳೂರು, ಕೋಡಿಯಾಲ್‌ಬಲ್ ಶಾರದಾ ಪಿ. ಯು. ಕಾಲೇಜ್‌ನಲ್ಲಿ
ಪ್ರಥಮ ಪಿ.ಯು. ಸಿ. ವಿಜ್ಞಾನ ವಿಭಾಗದ ವಿದ್ಯಾರ್ಥಿ ವೈಶಾಖ್ ಡಿ. ಗೌಡ ಅವರು ಬೆಂಗಳೂರು ಪಾಲನಾ ಭವನದಲ್ಲಿ ಜ.೨೨ರಿಂದ ಜ.೨೪ ರವರೆಗೆ ನಡೆದ ವಿಜ್ಞಾನ ಮೇಳದಲ್ಲಿ ಭಾಗವಹಿಸಿ ಪ್ರಬಂಧ ಮಂಡಿಸಿದ್ದರು. ಇವರು ಮಂಡಿಸಿದ ಇರಾಡಿಕೇಟ್ ಒಬೇಸಿಟಿ (ಬೊಜ್ಜುತನ ನಿವಾರಣೆ) ವಿಷಯದ ಪ್ರಬಂಧ ನಿರ್ಣಾಯಕರ ಪ್ರಶಂಸೆಗೆ ಪಾತ್ರವಾಗಿದೆ.
ಇವರಿಗೆ ಇನೆಂಟ್ ಜೀಸಸ್ ಆಂಗ್ಲ ಮಾಧ್ಯಮ ಶಾಲೆಯ ವಿಜ್ಞಾನ ಶಿಕ್ಷಕ ಕಿಶೋರ್ ಸುವರ್ಣ ಅವರು ಮಾರ್ಗದರ್ಶನ ನೀಡಿದ್ದಾರೆ. ಇವರು ಕೆ.ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿಯ ಶರೀರ ಕ್ರಿಯಾ ಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ದಾಮೋದರ ಗೌಡ ಕೆ. ಎಂ. ಮತ್ತು ಕೊಯಿಲ ಸರಕಾರಿ ಪ್ರೌಢ ಶಾಲಾ ಶಿಕ್ಷಕಿ ನಿವೇದಿತಾ ಕೆ.ಕೆ.ಅವರ ಮಕ್ಕಳು.

More articles

Latest article