ಭಾರತ: ತಿಂಗಳು ತುಂಬುತ್ತಿದ್ದಂತೇ ಡೆಲಿವರಿಗೆ ಫ್ಯಾನ್ಸಿ ಡೇಟ್, ಮುಹೂರ್ತ ನೋಡೋದು ಈಗ ಕಾಮನ್ ಆಗಿಬಿಟ್ಟಿದೆ. ಅದ್ರಲ್ಲೂ ಹೊಸ ವರ್ಷದ ಮೊದಲ ದಿನದಂದು ತಮ್ಮ ಮಗು ಜನಿಸಬೇಕು ಅನ್ನೋದು ಬಹುತೇಕ ಪೋಷಕರ ಆಸೆ. ಅದಕ್ಕಾಗಿ ಆ ದಿನವೇ ಹೆರಿಗೆ ಮಾಡಿಸಿಕೊಳ್ಳೋರಿಗೇನು ಕಮ್ಮಿಯಿಲ್ಲ. ಈ ವರ್ಷ ಜನವರಿ 1 ರಂದು ವಿಶ್ವದಲ್ಲಿ ಒಟ್ಟು, 3,92,078 ಮಕ್ಕಳು ಜನಿಸಿದ್ದು, ಅದರಲ್ಲೂ ಭಾರತದಲ್ಲಿ ಸುಮಾರು 67,385 ಮಕ್ಕಳ ಜನನವಾಗಿದೆ ಎಂದು ವರದಿಯಾಗಿದೆ. ಈ ಮೂಲಕ ಭಾರತ, ವಿಶ್ವದಲ್ಲೇ ಅತ್ಯಧಿಕ ಮಕ್ಕಳ ಜನನ ದಾಖಲೆ ನಿರ್ಮಿಸಿದೆ. ಚೀನಾ 2ನೇ ಸ್ಥಾನದಲ್ಲಿದ್ದು, 46,299 ಮಕ್ಕಳ ಜನನವಾಗಿದೆ ಹಾಗೂ ನೈಜೀರಿಯಾ 3ನೇ ಸ್ಥಾನದಲ್ಲಿದೆ. ಇಲ್ಲಿ 26,039 ಮಕ್ಕಳ ಜನನವಾಗಿದೆ.

 

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here