ಉಜಿರೆ: ಶ್ರೀ ಕ್ಷೇತ್ರ ಧರ್ಮಸ್ಥಳದ ಆತ್ಮೀಯರಾದ ಶ್ರೀ ಕೆ.ಅಮರನಾಥ ಶೆಟ್ಟಿ ಅವರ ನಿಧನದ ವಾರ್ತೆ ಕೇಳಿ, ಆತ್ಮೀಯರೊಬ್ಬರನ್ನು ಕಳೆದುಕೊಂಡಂತಾಗಿದೆ. ಅವರು ನೇರ ನಡೆ-ನುಡಿಯ ಹಾಗೂ ಸತ್ಯ, ನ್ಯಾಯಕ್ಕಾಗಿ ಶಿಸ್ತು ಪಾಲನೆಯ ಅಪೂರ್ವ ವ್ಯಕ್ತಿತ್ವವನ್ನು ಹೊಂದಿದವರು ಎಂದು ಡಾ.ಡಿ.ವಿರೇಂದ್ರ ಹೆಗ್ದೆ ಸಂತಾಪ ಸೂಚಿಸಿದರು.
ಮೂಡಬಿದ್ರೆಯಲ್ಲಿ ಸಹಕಾರಿ ರಂಗವನ್ನು ಅಖಂಡವಾಗಿ ಮುನ್ನಡೆಸಿ ಅನೇಕ ಜನ ಸ್ನೇಹಿ ಕಾರ್ಯಕ್ರಮಗಳನ್ನು ಅವರು ಯಶಸ್ವಿಯಾಗಿ ರೂಪಿಸಿದರು. ರಾಜಕೀಯ ಕ್ಷೇತ್ರದಲ್ಲಿ ಅವಿರತವಾಗಿ ದುಡಿದು, ಕೆಲವೇ ಕಾಲ ಸಚಿವ ಸ್ಥಾನದಲ್ಲಿದ್ದರು. ಅಂದಿನ ಮುಖ್ಯಮಂತ್ರಿಯಾಗಿದ್ದ ರಾಮಕೃಷ್ಣ ಹೆಗ್ಡೆ ಅವರ ಒಮ್ಮೆ ಮೂಡಬಿದ್ರೆಗೆ ಬಂದಿದ್ದಾಗ, ಕ್ರಿಕೆಟ್‌ನಲ್ಲಿ ಟಿ-20 ಪಂದ್ಯದಲ್ಲಿ ಆಡಿದಂತೆ ವೇಗವಾಗಿ ಆಟ ಪ್ರದರ್ಶಿಸಿ ಅಮರನಾಥ ಶೆಟ್ಟಿ ಅವರ ಹಿಂದೆ ಬಂದರು. ಅವರಂತಹ ಸಜ್ಜನರಿಗೆ ಇನ್ನೊಮ್ಮೆ ಮಂತ್ರಿ ಸ್ಥಾನ ಕೊಡಿ ಎಂದು ಮುಖ್ಯಮಂತ್ರಿ ಅವರಲ್ಲಿ ನಾನು ಕೇಳಿಕೊಂಡಿದ್ದೆ. ರಾಜಕೀಯ ಅಧಿಕಾರ, ಸ್ಥಾನವಿಲ್ಲದಿದ್ದರೂ ಅವರು ಸದಾ ಜನಪರ ಕಾರ್ಯಗಳ ಮೂಲಕ ಜನತೆಗೆ ಆತ್ಮೀಯರಾಗಿದ್ದರು. ಅವರ ಆದರ್ಶ ಸದಾ ಜಾಗೃತವಾಗಿರಲಿ ಎಂದು ಆಶಿಸುತ್ತಾ, ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರುತ್ತೇನೆ. ಅವರ ಅಗಲುವಿಕೆಯಿಂದ ಕುಟುಂಬದವರಿಗೆ ಉಂಟಾದ ದುಃಖವನ್ನು ಸಹಿಸುವ ಶಕ್ತಿ-ತಾಳ್ಮೆಯನ್ನಿತ್ತು ಶ್ರೀ ಮಂಜುನಾಥ ಸ್ವಾಮಿ ಹರಸಲೆಂದು ಪ್ರಾರ್ಥಿಸುತ್ತೇನೆ  ಎಂದು ಡಾ.ಡಿ.ವಿರೇಂದ್ರ ಹೆಗ್ದೆ ಹೇಳಿದರು.

 

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here