Saturday, April 6, 2024

” ಹ್ಯಾಪಿ ನ್ಯೂ ಇಯರ್”

2019ನೇ ಇಸವಿ ಕಳೆದು ಇದೀಗ 2020ಕ್ಕೆ ಕಾಲಿರಿಸಿದ್ದೇವೆ. ಕಳೆದೊಂದು ದಶಕದಿಂದ 2020 ಬರಲಿ ಎಂಬ ನಿರೀಕ್ಷೆ ನಮ್ಮದಾಗಿತ್ತು. ಜೊತೆಗೆ ಈ 20-20 ತಲುಪುವ ಹೊತ್ತಿಗೆ ನಮ್ಮ ಸುತ್ತಮುತ್ತಲೂ ಮಹತ್ತರ ಬದಲಾವಣೆಗಳಾಗಬೇಕು, ಸುಧಾರಣೆಗಳಾಗಬೇಕು ಎಂಬ ಕನಸು ಕಂಡಿದ್ದೆವು. ನಮ್ಮ ದೇಶದ ರಾಷ್ಟ್ರಪತಿ ಗಳಾಗಿದ್ದ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ರವರು 2020ರ ಹೊತ್ತಿಗೆ ದೇಶವನ್ನು ಸೂಪರ್ ಪವರ್ ದೇಶವನ್ನಾಗಿಸಿ, ಅದಕ್ಕಾಗಿ ಕನಸು ಕಾಣಿರಿ, ಆದರೆ “ನಿದ್ದೆಯಲ್ಲಿ ಕಾಣುವಂಥದ್ದು ಕನಸಲ್ಲ ನಿದ್ದೆಗೆಡುವಂತೆ ಮಾಡುವುದು ಇದೆಯಲ್ಲಾ ಅದೇ ನಿಜವಾದ ಕನಸು” ಎಂದೂ ಸ್ಪಷ್ಟವಾಗಿ ಹೇಳಿದ್ದರು . ಅದರಂತೆ ಎಲ್ಲರೂ ದೇಶ ಸುಧಾರಣೆಯಾಗಲಿ ಎಂದು ಕನಸು ಕಂಡರೇ ವಿನಃ ನಮ್ಮೊಳಗಿನ ಸುಧಾರಣೆ ಮಾಡಿಕೊಳ್ಳಲೇ ಇಲ್ಲ. ಹೀಗಾಗಿಯೇ ಇಷ್ಟೊಂದು ಮಾನವ ಸಂಪನ್ಮೂಲ ಹೊಂದಿರುವ ಭಾರತ ನಿರೀಕ್ಷಿತ ಮಟ್ಟದಲ್ಲಿ ಬೆಳೆದು ನಿಂತಿಲ್ಲ. ಆದರೂ ಹೊಸ ಕನಸು ಆಶಯಗಳೊಂದಿಗೆ ವಿಶ್ವಗುರು ಆಗಲು ಹೊರಟಿರುವ ಭಾರತದಲ್ಲಿನ ಆಂತರಿಕ ಸಮಸ್ಯೆಗಳು ನಾನಾ ಸಮಸ್ಯೆಗಳ ಸೃಷ್ಟಿಸಿತ್ತಾ , ಭಾರತದ ನಾಗಲೋಟಕ್ಕೆ ತೊಡಕಾಗುತ್ತಿದೆ. ಈ‌ ನಿಟ್ಟಿನಲ್ಲಿ ಪರಿವರ್ತನೆ ಆಗಬೇಕಿರುವುದು ನಮ್ಮ ನಮ್ಮಲ್ಲೇ ಎನ್ನುವುದು ನಮ್ಮ‌ಅರಿವಿಗೆ ಬಂದಾಗಲಷ್ಟೇ ದೇಶ ಸುಧಾರಣೆ ಸಾಧ್ಯವಿದೆ. ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುತ್ತಾ, ಅದರ ಪಾಲಕರಾಗಿ ಭಾರತವನ್ನು 2020 ರಲ್ಲಿಯೇ ಸೂಪರ್ ಪವರ್ ಮಾಡುವಲ್ಲಿ ನಮ್ಮ‌ನಮ್ಮ‌ಜವಬ್ದಾರಿಗಳನ್ನು ಪ್ರಾಮಾಣಿಕವಾಗಿ ‌ನಿಭಾಯಿಸೋಣ. ಎನ್ನುವ ಆಶಯದೊಂದಿಗೆ 2020 ಸರ್ವರ ಬಾಳಿನಲ್ಲಿ ಸುಖ-ಸಂತೋಷ-ಸಮೃದ್ಧಿ-ಸಂಭ್ರಮವನ್ನೇ ತರಲಿ.. ಎನ್ನುವ ಆಶಯ ನಮ್ಮದು –

ಪ್ರಶಾಂತ್ ಪೂಂಜಾಲಕಟ್ಟೆ ಸಂಪಾದಕರು ನಮ್ಮ ಬಂಟ್ವಾಳ ವೆಬ್ ನ್ಯೂಸ್

More from the blog

ನೀತಿ ಸಂಹಿತೆ ಇರುವಾಗ ಆಶ್ಲೇಷ ಬಲಿ ಮಂಟಪ ಕಾಮಗಾರಿ ಆರಂಭ ಸಮರ್ಪಕವಲ್ಲ- ಹರೀಶ್ ಇಂಜಾಡಿ

ಸುಬ್ರಹ್ಮಣ್ಯ: ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಈ ಹಿಂದಿನ ಆಡಳಿತ ಮಂಡಳಿಯ ಕೊನೇ ದಿನಗಳಲ್ಲಿ ದಾನಿಗಳು ಕ್ಷೇತ್ರದಲ್ಲಿ ಆಶ್ಲೇಷ ಬಲಿ ಮಂಟಪ ನಿರ್ಮಿಸಲು ಮುಂದೆ ಬಂದರು. ಇದು ಸ್ವಾಗತಾರ್ಹ ಬೆಳವಣಿಗೆ. ಆದರೆ...

ಪ್ರಧಾನಿ ಮೋದಿ ಕರೆ : ಪ್ರತಿಯೊಬ್ಬರ ಕೈ ಮೇಲೆ ಕಮಲದ ಹಚ್ಚೆ ಹಾಕಿ

ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ  ಬಿಜೆಪಿ ಕಾರ್ಯಕರ್ತರಿಗೆ ಕರೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಪ್ರತಿಯೊಬ್ಬರ ಕೈ ಮೇಲೆ ಕಮಲದ ಹಚ್ಚೆ ಹಾಕಿ “ಮೆಹಂದಿ ಅಭಿಯಾನ" ನಡೆಸುವಂತೆ ಸೂಚನೆ ನೀಡಿದ್ದಾರೆ. ಜತೆಗೆ ಮೋದಿ...

ದಿನದಿಂದ ದಿನಕ್ಕೆ ಏರುತ್ತಿದೆ ತಾಪಮಾನ : ಕಡಬ, ಅಜೆಕಾರಿನಲ್ಲಿ ದಾಖಲೆಯ ಉಷ್ಣಾಂಶ

ಮಂಗಳೂರು: ಮುಂದಿನ ಎರಡು ದಿನಗಳ ಕಾಲ ಬಿಸಿಲಿನ ಶಾಕ ಮತ್ತಷ್ಟು ಹೆಚ್ಚಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ ಕರಾವಳಿ ಭಾಗದಲ್ಲಿ ತಾಪಮಾನ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದ್ದು, ಎ. 4ರಿಂದ 5ರ...

ಕಡಬ: ಚೇರು ಪ್ರದೇಶದ ಮನೆಗೆ ಶಂಕಿತರ ಭೇಟಿ : ಊಟ ಮಾಡಿ, ಸಾಮಗ್ರಿ ಪಡೆದು ತೆರಳಿದ ಶಂಕಿತರು

ಸುಬ್ರಹ್ಮಣ್ಯ: ಕಡಬ ಪೊಲೀಸ್‌ ಠಾಣಾ ವ್ಯಾಪ್ತಿಯ ಮನೆಯೊಂದಕ್ಕೆ ಗುರುವಾರ ರಾತ್ರಿ ವೇಳೆ ಶಂಕಿತರ ತಂಡ ಆಗಮಿಸಿ ಊಟ, ಮಾಡಿ ದಿನಸಿ ಸಾಮಾಗ್ರಿಗಳನ್ನು ಪಡೆದು ತೆರಳಿರುವ ವಿಷಯ ಶುಕ್ರವಾರ ಸಂಜೆ ವೇಳೆಗೆ ಬೆಳಕಿಗೆ ಬಂದಿದೆ. ತಾಲೂಕಿನ...