ಬಂಟ್ವಾಳ: ಇಂಧನ ಉಳಿತಾಯ ಹಾಗೂ ಗುಣಮಟ್ಟದ ವಿದ್ಯುತ್ ಉಪಕರಣಗಳನ್ನು ಕೃಷಿ ಮತ್ತು ಇತರ ಕ್ಷೇತ್ರಕ್ಕೆ ಬಳಸುವ ಕುರಿತಾಗಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸಮೀಕ್ಷೆಗಾಗಿ ಬಂಟ್ವಾಳ ತಾಲೂಕಿನ ಇರಾಗ್ರಾಮವನ್ನು ಆಯ್ಕೆಮಾಡಲಾಗಿದೆ ಎಂದು ಬಂಟ್ವಾಳ ಮೆಸ್ಕಾಂನ ಕಾರ್ಯನಿರ್ವಾಹಕ ಇಂಜಿನಿಯರ್ ಅವರ ಪ್ರಕಟಣೆ ತಿಳಿಸಿದೆ. ಹಾಗಾಗಿ ಜ.20 ರಿಂದ 30 ರವರೆಗೆ ಈ ಗ್ರಾಮದ ಪ್ರತಿ ಗ್ರಾಹಕರ ಸ್ಥಾವರಗಳಿಗೆ ಮೆಸ್ಕಾಂ ಸಿಬ್ಬಂದಿಗಳು ಭೇಟಿ ನೀಡಲಿದ್ದು,ಗ್ರಾಹಕರು ಸಹಕರಿಸುವಂತೆ ಅವರು ಕೋರಿದ್ದಾರೆ.