ದೇರಳಕಟ್ಟೆ: ದೇರಳಕಟ್ಟೆಯ ಅಟೋ ಮೊಬೈಲ್ ಅಂಗಡಿ ಒಂದಕ್ಕೆ ಬೆಂಕಿ ತಗುಲಿದ ಘಟನೆ ಇಂದು ಮುಂಜಾನೆ ಸಂಭವಿಸಿದೆ. ಇದು ಕಿಡಿಗೇಡಿಗಳು ಬೆಂಕಿ ಹಚ್ಚಿರಬಹುದು ಎಂದು ಶಂಕಿಸಲಾಗಿದೆ.
ದೇರಳಕಟ್ಟೆಯ ವಿದ್ಯಾರತ್ನ ಕ್ರಾಸ್‌ನಲ್ಲಿರುವ ಭಾರತ್ ಅಟೋ ಮೊಬೈಲ್ ಅಂಗಡಿಗೆ ಬೆಂಕಿ ಹಚ್ಚಲಾಗಿದ್ದು ಲಕ್ಷಾಂತರ ರೂ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಸ್ಥಳಕ್ಕೆ ಪೊಲೀಸರು ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ. ಇತ್ತಿಚ್ಚಿಗೆ ಎರಡು ದಿನಗಳ ಹಿಂದೆ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆದ ಪ್ರತಿಭಟನೆಗೆ ತರಲಾಗಿದ್ದ ಲಾರಿ ಮತ್ತು ಅದರಲ್ಲಿದ್ದ ಕುರ್ಚಿಗಳಿಗೆ ಬೆಂಕಿ ಹಚ್ಚಲಾಗಿತ್ತು. ಈ ಘಟನೆಯಿಂದಾಗಿ ಕುರ್ಚಿಯೊಂದಿಗೆ ಲಾರಿ ಕೂಡಾ ಸುಟ್ಟು ಹೋದ ಘಟನೆ ಇತ್ತಿಚ್ಚಿಗಷ್ಟೆ ನಡೆದಿತ್ತು.