Saturday, April 6, 2024

ಕ್ರೈಂ ಪೊಲೀಸರು ಎಂದು ನಂಬಿಸಿ ಲಕ್ಷಾಂತರ ರೂ ಮೌಲ್ಯದ ಬಂಗಾರ ದೋಚಿದ ನಕಲಿ ಪೊಲೀಸರು

ಬಂಟ್ವಾಳ: ಕ್ರೈಂ‌ಬ್ರಾಂಚ್ ಪೊಲೀಸ್ ಎಂದು ನಂಬಿಸಿ ವ್ಯಕ್ತಿಯೊರ್ವರ ಕೈಯಿಂದ ಲಕ್ಷಾಂತರ ರೂ ಮೌಲ್ಯದ ಬಂಗಾರ ವಸ್ತುಗಳನ್ನು ದೋಚಿಕೊಂಡು ಹೋದ ಘಟನೆ ಶನಿವಾರ ಮಧ್ಯಾಹ್ನ 12 ಗಂಟೆಯ ವೇಳೆ ಕೈಕಂಬ ಎಂಬಲ್ಲಿ ನಡೆದಿದೆ.
ಪುರಸಭಾ ವ್ಯಾಪ್ತಿಯ ಬಿಸಿರೋಡಿನ ಕೈಕಂಬ ಸಮೀಪದ ಮಿತ್ತಬೈಲು ಕೊಡಂಗೆ ನಿವಾಸಿ ಶಿವರಾಮ್ ಪ್ರಸಾದ್ ಶರ್ಮ ಎಂಬವರ ಕೈಯಿಂದ ಲಕ್ಷಾಂತರ ರೂ ಮೌಲ್ಯದ ಬಂಗಾರ ದೋಚಿಕೊಂಡು ಹೋಗಿದ್ದಾರೆ.
ನಿವೃತ್ತ ಬ್ಯಾಂಕ್ ಉದ್ಯೋಗಿ ಶಿವರಾಮ್ ಪ್ರಸಾದ್ ಶರ್ಮ ಅವರು ಕೊಡಂಗೆ ಅವರ ಮನೆಯಿಂದ ಸುಮಾರು 12 ಗಂಟೆಯ ವೇಳೆ ಕೈಕಂಬ ಸೆಲೂನ್ ಗೆ ದಾರಿಯಲ್ಲಿ ನಡೆದುಕೊಂದು ಹೋಗುವ ವೇಳೆ ಬೈಕಿನಲ್ಲಿ ಬಂದ ವ್ಯಕ್ತಿಯೋರ್ವ ತಾನು ಆಶೋಕ್ ಕ್ರೈ ಬ್ರಾಂಚ್ ಪೊಲೀಸ್ ಎಂದು ಪರಿಚಯ ಮಾಡಿಕೊಂಡು, ನೀವು ಮೈಯಲ್ಲಿ ಈ ರೀತಿಯಾಗಿ ಬಂಗಾರವನ್ನು ಹಾಕಿಕೊಂಡು ತಿರುಗಬಾರದು , ಕಳ್ಳರಿದ್ದಾರೆ ಎಂದು ಹೇಳಿದ.
ಅದೇ ಹೊತ್ತಿಗೆ ಅಲ್ಲಿಗೆ ಇನ್ನೋರ್ವ ವ್ಯಕ್ತಿ ಅಲ್ಲಿಗೆ ಅಗಮಿಸಿದ, ಅ ವ್ಯಕ್ತಿಯಲ್ಲಿಯೂ ಆಶೋಕ್ ನಾನು ಕ್ರೈ ಬ್ರಾಂಚ್ ಪೊಲೀಸ್ ಎಂದು ಪರಿಚಯ ಮಾಡಿಸಿಕೊಂಡು ಬಂಗಾರ ಹಾಕಿಕೊಂಡು ಈ ರೀತಿಯಲ್ಲಿ ತಿರುಬಾರದು ಕಳ್ಳರಿದ್ದಾರೆ ಎಂದು ಅವನಲ್ಲಿಯೂ ಅದೇ ರೀತಿಯಲ್ಲಿ ಮಾತನಾಡಿದ. ಅ ಸಂದರ್ಭದಲ್ಲಿ ಎದುರಿರುವ ವ್ಯಕ್ತಿ ನಿಮ್ಮ ಐಡಿ ಕಾರ್ಡ್ ತೋರಿಸುವಂತೆ ತಿಳಿಸಿದಾಗ ಅತ ಪೊಲೀಸ್ ಐಡಿ ಕಾರ್ಡ್ ತೋರಿಸಿದ ಬಳಿಕ ಅತನ ಕೈಯಲ್ಲಿದ್ದ ಬಂಗಾರವನ್ನು ತೆಗೆದುಕೊಂಡು ಕೊಂಡು ಕರ್ಚೀಪ್ ನಲ್ಲಿ ಕಟ್ಟಿಕೊಟ್ಟ.
ಬಳಿಕ ಶಿವರಾಮ್ ಪ್ರಸಾದ್ ಶರ್ಮ ಅವರ ಕೈಯಲ್ಲಿದ್ದ ಉಂಗುರ ಹಾಗೂ ಕುತ್ತಿಗೆಯಲ್ಲಿದ್ದ ಲಕ್ಷಾಂತರ ರೂ ಮೌಲ್ಯದ ಬಂಗಾರವನ್ನು ತೆಗೆದುಕೊಡಿ ಕಟ್ಟಿಕೊಡುತ್ತೇನೆ ಎಂದು ಕೇಳಿದ , ಎಲ್ಲಾ ಬಂಗಾರವನ್ನು ಪೊಲೀಸ್ ಎಂದು ಹೇಳಿದ ಆಶೋಕ್ ಎಂಬ ವ್ಯಕ್ತಿಗೆ ನೀಡಿದರು.
ಆಶೋಕ್ ಬಂಗಾರವನ್ನು ಹಾಗೂ ಮೊಬೈಲ್ ನಲ್ಲಿಬ ಕರ್ಚೀಪ್ ನಲ್ಲಿ ಕಟ್ಟಿ ಕೊಟ್ಟು ಬೈಕಿನಲ್ಲಿ ಅಶೋಕ್ ಅವನ ಜೊತೆ ಇನ್ನೊರ್ವ ವ್ಯಕ್ತಿಯೂ ತೆರಳಿದ.
ಬಂಗಾರ ಮೊಬೈಲ್ ಫೋನ್ ನ್ನು ಕಟ್ಟಿದ ಲಕೋಟೆಯನ್ನು ಬಿಚ್ಚಿ ನೋಡಿದಾಗ ಅದರಲ್ಲಿ ಮೊಬೈಲ್ ಮಾತ್ರ ಉಳಿದ್ದಿದ್ದು ಬಂಗಾರವನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಶಿವರಾಮ್ ಪ್ರಸಾದ್ ಶರ್ಮ ದೂರು ನೀಡಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸ್ಥಳಕ್ಕೆ ಬಂಟ್ವಾಳ ಡಿ.ವೈ.ಎಸ್.ಪಿ.ವೆಲೆಂಟೈನ್ ಡಿ.ಸೋಜ, ವೃತ್ತ ನಿರೀಕ್ಷಕ ಟಿ. ಡಿ.ನಾಗರಾಜ್, ಎಸ್.ಐ.ಅವಿನಾಶ್ , ಎ್.ಎಸ್. ಐ ಸಂಜೀವ, ಹೆಚ್.ಸಿ.ಸುರೇಶ್ ಬೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆ ಮುಂದುವರಿಸಿದ್ದಾರೆ

More from the blog

ಗ್ರಾಮೀಣ ಪುನರ್ವಸತಿ ಕಾರ್ಯಕತರಿಗೆ ಮತದಾನ ಜಾಗೃತಿ

ಬಂಟ್ವಾಳ ತಾಲೂಕು ಪಂಚಾಯತ್, ತಾಲೂಕು ಕಚೇರಿ ಹಾಗೂ ತಾಲೂಕು ಸ್ವೀಪ್ ಸಮಿತಿಯಿಂದ ಗ್ರಾಮೀಣ ಪುನರ್ವಸತಿ ಕಾರ್ಯಕತರಿಗೆ ಮತದಾನ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ತಾಲೂಕು ಆಡಳಿತ ಸೌಧದಿಂದ ಹಮ್ಮಿಕೊಂಡ ಜಾಥಾ ಬಿ.ಸಿ.ರೋಡ್ ಖಾಸಗಿ ಬಸ್ ನಿಲ್ದಾಣ...

ಭಾರತೀಯ ಜನತಾ ಪಾರ್ಟಿ ಸ್ಥಾಪನಾ ದಿನದ ಅಂಗವಾಗಿ ಬಂಟ್ವಾಳ ಮಂಡಲ ಬಿಜೆಪಿ ಕಾರ್ಯಾಲಯದಲ್ಲಿ ಧ್ವಜಾರೋಹಣ

ಭಾರತೀಯ ಜನತಾ ಪಾರ್ಟಿ ಸ್ಥಾಪನಾ ದಿನದ ಅಂಗವಾಗಿ ಬಂಟ್ವಾಳ ಮಂಡಲದ ಅಧ್ಯಕ್ಷರಾದ ಆರ್ ಚೆನ್ನಪ್ಪ ಕೋಟ್ಯಾನ್ ಅವರು ಮಂಡಲ ಬಿಜೆಪಿ ಕಾರ್ಯಾಲಯದಲ್ಲಿ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಪ್ರಮುಖರಾದ ದೇವಪ್ಪ ಪೂಜಾರಿ,ರವೀಶ್ ಶೆಟ್ಟಿ, ಡೊಂಬಯ...

ರಾಜ್ಯದಲ್ಲಿ 60 ಮಂದಿಯ ನಾಮಪತ್ರ ತಿರಸ್ಕೃತ

ಬೆಂಗಳೂರು: ಲೋಕಸಭಾ ಚುನಾವಣೆಗೆ ರಾಜ್ಯದ ಮೊದಲ ಹಂತದ 14 ಕ್ಷೇತ್ರಗಳಲ್ಲಿ 358 ಅಭ್ಯರ್ಥಿಗಳು 492 ನಾಮಪತ್ರ ಸಲ್ಲಿಸಿದ್ದು, ಇದರಲ್ಲಿ 13 ಕ್ಷೇತ್ರದಲ್ಲಿ ಪರಿಶೀಲನೆ ಕಾರ್ಯ ಮುಗಿದಿದೆ. 276 ನಾಮಪತ್ರಗಳು ಕ್ರಮಬದ್ಧವಾಗಿದ್ದು, 60 ನಾಮಪತ್ರಗಳು...

ಮಂಗಳೂರು: ‘ಸ್ವೀಟ್ ಸಿಂಫನಿ ಇನ್ಸ್ಟಿಟ್ಯೂಟ್ ಆಫ್ ಮ್ಯೂಸಿಕ್’ ಸಂಸ್ಥೆಯ ಸಂಗೀತ ಕ್ಷೇತ್ರದಲ್ಲಿ ಸಂಪುಟ 2′ ರ ನೂತನ ಕೃತಿ ಲೋಕಾರ್ಪಣೆ

ಮಂಗಳೂರು: ಮಂಗಳೂರಿನ ಕುಲಶೇಖರದಲ್ಲಿರುವ 'ಸ್ವೀಟ್ ಸಿಂಫನಿ ಇನ್ಸ್ಟಿಟ್ಯೂಟ್ ಆಫ್ ಮ್ಯೂಸಿಕ್' ಸಂಸ್ಥೆಯ ಪ್ರಕಾಶನದಲ್ಲಿ ಇಂಗ್ಲಿಷ್, ಹಿಂದಿ ಮತ್ತು ಕನ್ನಡದ ಜನಪ್ರಿಯ ಹಾಡುಗಳನ್ನು ಪಾಶ್ಚಿಮಾತ್ಯ ನೊಟೇಶನ್ ಮೂಲಕ ವಯಲಿನ್, ಗಿಟಾರ್ ಮತ್ತು ಕೀಬೋರ್ಡ್ ನಲ್ಲಿ...