ಬಂಟ್ವಾಳ: ಅಳವಿನಂಚಿನಲ್ಲಿರುವ ವನ್ಯ ಜೀವಿ ಚಿಪ್ಪ ಹಂದಿಯ ಚಿಪ್ಪುಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಮೂವರು ಆರೋಪಿಗಳನ್ನು ಮಂಗಳೂರು ಸಿ.ಐ.ಡಿ.ಅರಣ್ಯ ಸಂಚಾರಿ ದಳದವರು ಚಿಕ್ಕಮಂಗಳೂರುವಿನಲ್ಲಿ ವಶಕ್ಕೆ ಪಡೆದುಕೊಂಡಿದ್ದಾರೆ.
ಹಾಲ್ದೂರು ನಿವಾಸಿ ಅಪ್ಪುಸ್ವಾಮಿ(36). ಗುಪ್ತಾಶೆಟ್ಟಿಹಳ್ಳಿ ನಿವಾಸಿ
ಕೆ.ವಿ..ಮಣಿ(37), ಮೂಡಿಗೆರೆ ನಿವಾಸಿ ಎಂ.ಎಂ.ರಘ (41)
ಬಂಧಿತ ಆರೋಪಿ ಗಳು.
ಅಂತರಾಷ್ಟ್ರೀಯ ಮಾರುಕಟ್ಟೆ ಯಲ್ಲಿ ಲಕ್ಷಾಂತರ ರೂ ಮೌಲ್ಯದ
ಬಂಧಿತ ರಿಂದ 4.400 ಕೆ.ಜಿ.ಚಿಪ್ಪು ಹಂದಿಯ ಚಿಪ್ಪು, ಒಂದು ಆಟೋ ರಿಕ್ಷಾ ಮತ್ತು ಒಂದು ಮೋಟಾರ್ ಸೈಕಲ್ ನ್ನು ವಶಪಡಿಸಿಕೊಂಡಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬೀಜಿಹಳ್ಳಿ ಸೇತುವೆ ಯ ಬಳಿ ಚಿಪ್ಪು ಮಾರಾಟ ಮಾಡುವ ಉದ್ದೇಶದಿಂದ ಗಿರಾಕಿಗಳಿಗೆ ಕಾಯುತ್ತಿದ್ದ ವೇಳೆ
ಖಚಿತ ಮಾಹಿತಿ ಮೇರೆ ಗೆ ದಾಳಿ ನಡೆಸಿದ ಅರಣ್ಯ ಸಂಚಾರಿ ಪೊಲೀಸರು ಮೂವರು ಆರೋಪಿ ಗಳನ್ನು ವಶಕ್ಕೆ ಪಡೆದುಕೊಂಡು ಬಳಿಕ ಮುಂದಿನ ಕಾನೂನು ಕ್ರಮಕ್ಕಾಗಿ ಮೂಡಿಗೆರೆ ಆರ್.ಎಫ್.ಒ.ಅವರಿಗೆ ಹಸ್ತಾಂತರ ಮಾಡಿದ್ದಾರೆ.
. ಸಿ.ಐ.ಡಿ.ಅರಣ್ಯ ಘಟಕ ಬೆಂಗಳೂರು ಎ.ಡಿ.ಜಿ.ಪಿ ಡಾ! ರವೀಂದ್ರ ನಾಥನ್ ಮತ್ತು ಸಿ.ಐ.ಡಿ.ಅರಣ್ಯ ಮಡಿಕೇರಿ ಘಟಕದ ಪೊಲೀಸ್ ಅದೀಕ್ಷಕರಾದ ಸುರೇಶ್ ಬಾಬು ಅವರ ಮಾರ್ಗದರ್ಶನ ದಲ್ಲಿ, ಮಂಗಳೂರು ಸಿ.ಐ.ಡಿ.ಅರಣ್ಯ ಸಂಚಾರದ ಪಿ.ಎಸ್.ಐ ಪುರುಷೋತ್ತಮ, ಸಿಬ್ಬಂದಿ ಗಳಾದ ಜಗನ್ನಾಥ ಶೆಟ್ಟಿ, ಉದಯ ನಾಯ್ಕ, ಮಹೇಶ್, ದೇವರಾಜ್ ಹಾಗೂ
ಚಿಕ್ಕಮಗಳೂರು ಅರಣ್ಯ ಘಟಕದ ಸಿಬ್ಬಂದಿ ಗಳ ಸಹಕಾರದಲ್ಲಿ ಕಾರ್ಯಚರಣೆ ಮಾಡಲಾಗಿತ್ತು.