ಬೆಳ್ತಂಗಡಿ: ರಾಜಕೀಯವಾಗಿ ಛಿದ್ರವಾಗಿದ್ದ ಬಿಲ್ಲವರು ಇಂದು ಕ್ರೀಡೆ ಮತ್ತು ನಾರಾಯಣ ಗುರು ಜಯಂತಿಯ ಮೂಲಕ ಒಂದಾಗುತ್ತಿರುವುದು ಆಶಾದಾಯಕವಾದ ಬೆಳವಣಿಗೆಯಾಗಿದೆ. ಕ್ರೀಡೆಯಂತಹ ಅವಕಾಶಗಳು ಬಿಲ್ಲವ ಸಮಾಜಕ್ಕೆ ಸಾಧನೆಗೆ ಮಾರ್ಗವಾಗುವ ಜೊತೆಗೆ ತಮ್ಮ ಜಾಗೃತಿಗೆ ವೇದಿಕೆಯಾಗಲಿ ಎಂದು ಬೆಳ್ತಂಗಡಿ ಮಂಜುಶ್ರೀ ಜೀಸಿಐ ಅಧ್ಯಕ್ಷ ಅಭಿನಂದನ್ ಹರೀಶ್ ಕುಮಾರ್‍ ಹೇಳಿದರು.
ಅವರು ಬೆಳ್ತಂಗಡಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ಶ್ರೀ ಗುರುನಾರಯಣ ಸ್ವಾಮಿ ಸೇವಾ ಸಂಘ ಬೆಳ್ತಂಗಡಿ ಇದರ ಆಶ್ರಯದಲ್ಲಿ ಮಹಿಳಾ ಬಿಲ್ಲವ ವೇದಿಕೆ ಬೆಳ್ತಂಗಡಿ, ಯುವವಾಹಿನಿ ಬೆಳ್ತಂಗಡಿ ಘಟಕ ಮತ್ತು ಯುವವಾಹಿನಿ ವೇಣೂರು ಘಟಕ ಇವರ ಸಹಯೋಗದಿಂದ ಯುವ ಬಿಲ್ಲವ ವೇದಿಕೆ ಬೆಳ್ತಂಗಡಿ ಇದರ ನೇತೃತ್ವದಲ್ಲಿ ಕೋಟಿ-ಚೆನ್ನಯ ಕ್ರೀಡಾಕೂಟದ ಅಂಗವಾಗಿ ತಾಲೂಕಿನ ಬಿಲ್ಲವ ಸಮಾಜ ಬಾಂಧವರಿಗಾಗಿ ನಡೆದ ಕ್ರಿಕೆಟ್ ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿದರು.


ಯುವ ಬಿಲ್ಲವ ವೇದಿಕೆ ಅಧ್ಯಕ್ಷ ರಂಜಿತ್ ಹೆಚ್.ಡಿ. ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿದ್ದ ಬೆಳ್ತಂಗಡಿ ಶ್ರೀ ಗುರುನಾರಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಪದ್ಮನಾಭ ಮಾಣಿಂಜ, ಬೆಳ್ತಂಗಡಿ ಶ್ರೀ ಗುರುದೇವ ವಿವಿದೋದ್ಧೇಶ ಸಹಕಾರಿ ಸಂಘದ ನಿರ್ದೇಶಕ ಹೆಚ್.ಧರ್ಣಪ್ಪ ಪೂಜಾರಿ, ಪೆರಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸತೀಶ್ ಕೆ. ಕಾಶಿಪಟ್ಣ, ಬೆಳ್ತಂಗಡಿ ಯುವ ವಾಹಿನಿ ಘಟಕದ ಅಧ್ಯಕ್ಷ ಹರೀಶ್ ಸುವರ್ಣ ಕನ್ಯಾಡಿ, ಬೆಳ್ತಂಗಡಿ ಯುವ ಬಿಲ್ಲವ ವೇದಿಕೆ ನಿಕಟಪೂರ್ವ ಅಧ್ಯಕ್ಷ ಸಂತೋಷ್ ಉಪ್ಪಾರ್‍ ಶುಭ ಹಾರೈಸಿದರು.


ಕೋಟಿ ಚೆನ್ನಯ ಕ್ರೀಡಾಕೂಟದ ಪ್ರಧಾನ ಸಂಚಾಲಕ ಜಗದೀಶ್ ಡಿ. ಸ್ವಾಗತಿಸಿ, ಪ್ರಾಸ್ತವಿಕ ಮಾತುಗಳನ್ನಾಡಿದರು. ಅವಿನಾಶ್ ಬಳಂಜ ಕಾರ್ಯಕ್ರಮ ನಿರೂಪಿಸಿದರು. ಯುವ ಬಿಲ್ಲವ ವೇದಿಕೆ ಕಾರ್ಯದರ್ಶಿ ರೂಪೇಶ್ ಪೂಜಾರಿ ಧರ್ಮಸ್ಥಳ ವಂದಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here