ಬೆಳ್ತಂಗಡಿ: ಲಾೖಲದ ಓಡದಕರಿಯ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಏಪ್ರಿಲ್ ತಿಂಗಳಲ್ಲಿ ನಡೆಯಲಿರುವ ಬ್ರಹ್ಮಕಲಶೋತ್ಸವದ ಪೂರ್ವಬಾವಿ ಸಭೆ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು. ಅಧ್ಯಕ್ಷತೆ ಶ್ರೀಕ್ಷೇತ್ರದ ಮುಖ್ಯಸ್ಥ ಲತೇಶ್ ಬಿ. ಓದದಕರಿಯ ವಹಿಸಿದ್ದರು.
ಶ್ರೀ ಕ್ಷೇತ್ರದಲ್ಲಿರುವ ರಕ್ತೇಶ್ವರಿ ಗುಡಿ ಜೀರ್ಣೋದ್ಧಾರದ ಪ್ರಯುಕ್ತ ಜೀರ್ಣೋದ್ಧಾರ ಸಮಿತಿ ರಚಿಸಲಾಯಿತು. ಅಧ್ಯಕ್ಷರಾಗಿ ಲಕ್ಷ್ಮಣ ಸಪಲ್ಯ ಕನ್ನಾಜೆ, ಉಪಾಧ್ಯಕ್ಷರುಗಳಾಗಿ ಜಯಂತ್ ರಾಘವೇಂದ್ರ ನಗರ, ಅಶೋಕ್ ಶೆಟ್ಟಿ ರಾಘವೇಂದ್ರ ನಗರ, ಎಸ್. ಗೋಪಾಲ್ ಶಂಭುಗ, ಉದಯ್ ಲಾೖಲ, ಇಂದಿರಾ ಪ್ರಿಯದರ್ಶಿನಿ, ಧನಲಕ್ಷ್ಮೀ ಜನಾರ್ದನ ಧರ್ಮಸ್ಥಳ, ಕಾರ್ಯದರ್ಶಿಯಾಗಿ ಸತೀಶ್ ಓಡದಕರಿಯ, ಜೊತೆ ಕಾರ್ಯದರ್ಶಿಗಳಾಗಿ ಸದಾಶಿವ ಸಮಗಾರ ಕಕ್ಕೇನಾ, ಪ್ರಮೋದ್ ಕರ್ಕೇರಾ, ಕೋಶಾಧಿಕಾರಿ ಜಯರಾಮ್ ಓಡದಕರಿಯ, ಗೌರವ ಸಲಹೆಗಾರರು ಮೋಹನ್ ಕುಮಾರ್ ಲಕ್ಷ್ಮೀ ಗ್ರೂಪ್ಸ್ ಉಜಿರೆ, ಸದಾಶಿವ ಧರ್ಮಸ್ಥಳ, ಸಂಜೀವ ಸಪಲ್ಯ ದೊಂಡೋಲೆ, ಕೃಷ್ಣ ಓಡದಕರಿಯ, ನಾರಾಯಣ ಓಡದಕರಿಯ, ಪ್ರಕಾಶ್ ದೊಂಡೋಲೆ, ಸಾಮಾಜಿಕ ಜಾಲತಾಣ ಹಾಗು ಪ್ರಚಾರ ಸಮಿತಿ ನಿರ್ವಾಹಕರಾಗಿ ಕಿಶೋರ್ ಓಡದಕರಿಯ, ಜೀವನ್ ಓಡದಕರಿಯ ಇವರುಗಳನ್ನು ನೇಮಿಸಲಾಯಿತು.
ಜೀರ್ಣೋದ್ಧಾರ ಸಮಿತಿ ಸದಸ್ಯರುಗಳಾಗಿ ಬಿ.ಎಲ್ ಚಂದ್ರ ಅಯೋಧ್ಯೆ ನಗರ, ರಾಜೇಶ್ ಓಡದಕರಿಯ, ಜಯರಾಮ ರಾಘವೇಂದ್ರ ನಗರ, ಬಂಗಾರು ರಾಘವೇಂದ್ರ ನಗರ, ಕುಮುದಾ ರಾಘವೇಂದ್ರ ನಗರ, ಅಶೋಕ್ ಪಂಜಿಕಲ್ಲು, ಉಮೇಶ್ ಓಡದಕರಿಯ, ಆನಂದ ಕೊಂಗುಲ, ಪ್ರಸಾದ್ ಓಡದಕರಿಯ, ಹರ್ಷೀತ್ ಓಡದಕರಿಯ, ಲೋಕೇಶ್ ಧರ್ಮಸ್ಥಳ, ಶಶಿಕುಮಾರ್ ಅಯೋಧ್ಯೆ ನಗರ, ಚಂದ್ರಶೇಖರ್ ಪೂಂಜಿಲ, ಜನಾರ್ದನ ಪುಜಾರಿ ಅಯೋಧ್ಯೆ ನಗರ, ಸತ್ಯವತಿ ಓಡದಕರಿಯ, ಆಶಾಲತ ಓಡದಕರಿಯ, ಸರಸ್ವತಿ ಓಡದಕರಿಯ, ಮಹಾಲಕ್ಷ್ಮಿ ಓಡದಕರಿಯ, ಹರೀಶ್ ಶೆಟ್ಟಿ ಹರ್ಮಾಡಿ, ಶಾರದ ಜಿ.ಕೆರೆ, ಸಂತೋಷ್ ಜಿ.ಕೆರೆ, ಯೋಗೀಶ್ ಜಿ.ಕೆರೆ, ವಿಘ್ನೇಶ್ ಜಿ.ಕೆರೆ, ಸುರೇಶ್ ದರ್ಭೆ, ಉಮೇಶ್ ದರ್ಭೆ,ಗಣೇಶ್ ದರ್ಭೆ, ನಾಗೇಶ್ ದರ್ಭೆ ಮತ್ತಿತರರು ಭಾಗವಹಿಸಿದ್ದರು. ಸತೀಶ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.