ಬಂಟ್ವಾಳ: ಶ್ರೀ ವೆಂಕಟರಮಣ ಸ್ವಾಮಿ ಕಾಲೇಜಿನ ಪ್ರಥಮ ಬಿ.ಕಾಂ ವಿದ್ಯಾರ್ಥಿನಿ ಸಹನಾ ಶೆಟ್ಟಿ ಮತ್ತು ಪ್ರಥಮ ಬಿ.ಸಿ.ಎ ವಿದ್ಯಾರ್ಥಿನಿ ಸೋನಿ ಶೆಟ್ಟಿ ಇವರು ರಾಷ್ಟ್ರಮಟ್ಟದ ಅಂತರ್ ವಿಶ್ವವಿದ್ಯಾನಿಲಯ ಮಹಿಳೆಯರ ಕರಾಟೆ ಟೂರ್‍ನಮೆಂಟ್‌ಗೆ ಆಯ್ಕೆಯಾಗಿರುತ್ತಾರೆ. ಜ. 8 ರಿಂದ 13 ರ ವರೆಗೆ ಚೆನ್ನೈ ಸತ್ಯಭಾಮಾ ವಿಶ್ವವಿದ್ಯಾನಿಲಯದಲ್ಲಿ ಈ ಟೂರ್‍ನಮೆಂಟ್ ನಡೆಯಲಿದ್ದು, ಕಾಲೇಜಿನ ಈ ಇಬ್ಬರು ವಿದ್ಯಾರ್ಥಿನಿಯರು ಮಂಗಳೂರು ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸಲಿದ್ದಾರೆ.