ಬಂಟ್ವಾಳ: ಬಂಟ್ವಾಳ ಭೂ ಅಭಿವೃದ್ಧಿ ಬ್ಯಾಂಕಿನ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಆಡಳಿತ ಮಂಡಳಿ ಅಧಿಕಾರ ಸ್ಥಾನ ಬಿಜೆಪಿ ಬೆಂಬಲಿತ ಸಹಕಾರ ಭಾರತಿ ತೆಕ್ಕೆಗೆ ಲಭಿಸಿದ್ದು, ಶನಿವಾರ ಬ್ಯಾಂಕಿನ 12 ಸ್ಥಾನಗಳಿಗೆ ನಡೆದ ಚುನಾವಣೆ ಸಹಕಾರ ಭಾರತಿ 7 ಸ್ಥಾನಗಳಲ್ಲಿ ಗೆದ್ದಿದೆ. ಈ ವರೆಗೆ ಅಧಿಕಾರದಲ್ಲಿದ್ದ ಕಾಂಗ್ರೆಸ್ ಬೆಂಬಲಿತರು 5 ಸ್ಥಾನಗಳಿಗೆ ತೃಪ್ತಿ ಪಟ್ಟುಕೊಂಡಿದ್ದರು.

ಬ್ಯಾಂಕಿನ ಚುನಾವಣೆಯು ಎರಡೂ ರಾಜಕೀಯ ಪಕ್ಷಗಳಿಗೂ ಪ್ರತಿಷ್ಠೆಯ ವಿಚಾರವಾಗಿದ್ದು, ಹೀಗಾಗಿ ತಮ್ಮ ಪಕ್ಷಗಳ ಬೆಂಬಲಿತ ಅಭ್ಯರ್ಥಿಗಳ ಗೆಲುವಿಗೆ ವಿಶೇಷ ಪ್ರಯತ್ನ ನಡೆಸಿದ್ದರು. ಬಿಜೆಪಿಯು ಶಾಸಕ ರಾಜೇಶ್ ನಾಯ್ಕ್ ಅವರ ನೇತೃತ್ವದಲ್ಲಿ ಚುನಾವಣೆಯನ್ನು ಎದುರಿಸಿತ್ತು.

ಚುನಾವಣೆಯಲ್ಲಿ ಸಹಕಾರಿ ಬೆಂಬಲಿತರಾದ ಲಿಂಗಪ್ಪ ಪೂಜಾರಿ, ಲೋಲಾಕ್ಷಿ, ವಿಜಯಾನಂದ, ಅರುಣ್ ರೋಶನ್ ಡಿಸೋಜ, ಲತಾ, ಸುಂದರ ಪುಜಾರಿ ಹಾಗೂ ಚಂದ್ರಶೇಖರ ಬಂಗೇರ ಗೆಲುವಿನೊಂದಿಗೆ ಸಾಧಿಸಿದ್ದಾರೆ.
ಕಾಂಗ್ರೆಸ್ ಬೆಂಬಲಿತರಾದ ಸುದರ್ಶನ್ ಜೈನ್, ಚಂದ್ರಹಾಸ ಕರ್ಕೇರ, ಹೊನ್ನಪ್ಪ ನಾಯ್ಕ್, ರಾಜೇಶ್ ಕುಮಾರ್ ಹಾಗೂ ಸಂಜೀವ ಪೂಜಾರಿ ಅವರು ಗೆಲುವು ಸಾಧಿಸಿದ್ದಾರೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here