ಬಂಟ್ವಾಳ: ಶಿಥಿಲಾವಸ್ಥೆಯಲ್ಲಿರುವ ಬಂಟ್ವಾಳ ಕಸ್ಬಾ ಗ್ರಾಮದ ಕಾರಂಬಡೆ ಶ್ರೀ ಮಹಮ್ಮಾಯಿ ಕ್ಷೇತ್ರದಲ್ಲಿ ನೂತನ ದೇವಾಲಯ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದ್ದು, ಮೇ ಅಂತ್ಯದ ವೇಳೆಗೆ ಪುನಃ ಪ್ರತಿಷ್ಠೆ ನಡೆಸಲು ಸಿದ್ದತೆ ನಡೆಸುತ್ತಿದ್ದು ಊರ ಪರಊರ ಜನರ ಸಹಕಾರ ಬೇಕು ಎಂದು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಹರೀಶ್ ಕೋಟ್ಯಾನ್ ಮಡಿವಾಳಬೆಟ್ಟು ಹೇಳಿದರು.
ಅವರು ಕ್ಷೇತ್ರದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ಸುಮಾರು 2.5 ಕೋಟಿ ವೆಚ್ಚದಲ್ಲಿ ಕ್ಷೇತ್ರದ ಪುನರ್ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ.
ಕಾಪು ಕ್ಷೇತ್ರದಿಂದ ಬಂದ ಶಕ್ತಿ ಇಲ್ಲಿ ನೆಲೆಯಾಗಿದೆ ಎಂಬುದಕ್ಕೆ ಪ್ರತೀತಿ ಇದೆ. ಜನರ ಸಂಕಷ್ಟಗಳನ್ನು ಪಾರು ಮಾಡಲು ಇಲ್ಲಿ ಪ್ರಾರ್ಥನೆ ಮಾಡಿ ಪೂಜೆ ಸಲ್ಲಿಸಿದರೆ ಸಾಕು, ಇಷ್ಟಾರ್ಥಗಳು ನೆರೆವೆರಿದಕ್ಕೆ ಅನೇಕ ನಿರ್ದೇಶನಗಳಿವೆ. ಸಾಂಕ್ರಾಮಿಕ ರೋಗಗಳ ನಿವಾರಣೆಗೆ ಇಲ್ಲಿ ವಿಶೇಷ ಪೂಜೆ ಸಲ್ಲಿಸುತ್ತಾರೆ.
ನೂರಾರು ವರ್ಷಗಳ ಇತಿಹಾಸವಿರುವ ಈ ಕ್ಷೇತ್ರದಲ್ಲಿ ಮಹಾಮ್ಮಾಯಿ ಜೊತೆಯಲ್ಲಿ ಗಣಪತಿ , ಶ್ರೀ ಗುರು, ಶ್ರೀ ನಾಗಬ್ರಹ್ಮ, ರಕ್ತೇಶ್ವರಿ, ಗುಳಿಗ, ಮಹಮ್ಮಾಯಿ ಗುಳಿಗ, ಕಾಲಭೈರವ, ಕಲ್ಲುರ್ಟಿ, ಪಂಜುರ್ಲಿ, ಧೂಮಾವತಿ ಬಂಟ, ಮಾಡಕೊರತಿ, ಕುಪ್ಪೆಟ್ಟು ಪಂಜುರ್ಲಿ, ಮಂತ್ರದೇವತೆ, ಸತ್ಯದೇವತೆ, ಸಂಕೋಲೆ ಗುಳಿಗ, ರಾಹುಗುಳಿಗ, ಕೊರಗಜ್ಜ ಮೊದಲಾದ ಸಾನಿಧ್ಯವಿದೆ.
ಅನೇಕ ಘಟನೆಗಳು ಕಾರಂಬಡೆ ಕ್ಷೇತ್ರದ ಮಹಿಮೆಯನ್ನು ಸಾರುತ್ತದೆ.
ಅಗ್ನಿಗೆ ಸಮಾನವಾದ ಶಕ್ತಿ ಈ ಕ್ಷೇತ್ರದ ಲ್ಲಿ ಇದೆ ಎಂದು ಅವರು ತಿಳಿಸಿದರು.
ಅನುವಂಶೀಯ ಆಡಳಿತ ಮೊಕ್ತೇಸರ ಅರುಣ್ ಕುಮಾರ್ ಗೌರವಾಧ್ಯಕ್ಷ ಕೇಶವ ಶಾಂತಿ, ಪ್ರಧಾನ ಕಾರ್ಯದರ್ಶಿ ನಾಗೇಶ್, ಕೋಶಾಧಿಕಾರಿ ಜಯಶಂಕರ್ ಕಾನ್ಸಾಲೆ, ಸಂತೋಷ್ ಕುಮಾರ್ ಕೊಟ್ಟಿಂಜ, ಕೊರಗಪ್ಪ ಕೊಲಂಬೆಬೈಲು, ಕೇಶವ ಪಾಲಡ್ಕ, ಸುಮಿತ್ರ ಕಾರಂಬಡೆ ಮತ್ತಿತರರು ಉಪಸ್ಥಿತರಿದ್ದರು.