ಬಂಟ್ವಾಳ: ಪೌರತ್ವ ತಿದ್ದುಪಡಿ ಕಾಯ್ದೆಯ ಬಗ್ಗೆ ಸಮರ್ಥನೆ ಯ ಉದ್ದೇಶದಿಂದ “ಸಮರ್ಥನಾ ಬೃಹತ್ ಸಮಾವೇಶ” ಜ.27 ರಂದು ಮಂಗಳೂರು ಗೋಲ್ಡ್ ಪಿಂಚ್ ಮೈದಾನದಲ್ಲಿ ನಡೆಯಲಿದ್ದು, ರಾಜನಾಥ್ ಸಿಂಗ್ ಭಾಗವಹಿಸಲಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಈ ಸಮಾವೇಶದಲ್ಲಿ ಎಲ್ಲರು ಭಾಗವಹಿಸಿ ಎಂದು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ತಿಳಿಸಿದರು.
ಅವರು ಬಿಸಿರೋಡಿನ ಪಕ್ಷದ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ತಿಳಿಸಿದರು.
ಭಾರತ ಜನತಾ ಪಾರ್ಟಿಯ ಪ್ರಣಾಳಿಕೆಯಲ್ಲಿ ತಿಳಿಸಿತ್ತು. ಜನರಿಗೆ ಈ ಬಗ್ಗೆ ಸಮರ್ಪಕವಾಗಿ ಮಾಹಿತಿ ನೀಡಲಾಗಿತ್ತು. ಈ ಕಾಯ್ದೆಯ ಬಗ್ಗೆ ತಿಳಿದು ತಿಳಿಯದಂತೆ ಕೆಲವೊಂದು ಪಕ್ಷದವರು ವರ್ತಿಸುವುದು ಸರಿಯಲ್ಲ. 2014ರ ಮೊದಲು ನಿರಾಶ್ರಿತರಾಗಿ ಭಾರತಕ್ಕೆ ಬಂದವರಿಗೆ ಮಾತ್ರ ಈ ಕಾಯ್ದೆ ಅನ್ವಯವಾಗುತ್ತದೆ ಎಂಬ ಸ್ಪಷ್ಟವಾಗಿ ನಮೂದಾಗಿದ್ದರು, ಸುಳ್ಳು ಸುದ್ದಿ ಎಬ್ಬಿಸಿ, ಹೆದರಿಕೆ ಹುಟ್ಟಿಸುವ ಕೆಲಸ ರಾಜಕೀಯ ಪಕ್ಷಗಳು ವಿರೋಧ ವ್ಯಕ್ತಪಡಿಸುವುದು ಸಮಂಜಸವಲ್ಲ ಎಂದು ಅವರು ಹೇಳಿದರು.
1 ಲಕ್ಷಕ್ಕಿಂತ ಹೆಚ್ಚು ಈ ಕಾರ್ಯಕ್ರಮದಲ್ಲಿ ಜನರು ಸೇರುವ ನಿರೀಕ್ಷೆ ಇದ್ದು, ಬಂಟ್ವಾಳ ಕ್ಷೇತ್ರದಿಂದ 10,000ಕ್ಕೂ ಅಧಿಕ ಜನ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಬಿಜೆಪಿ ವಕ್ತಾರ ಪದ್ಮನಾಭ ಕೊಟ್ಟಾರಿ ಮಾತನಾಡಿ, ಸೆಂಥಿಲ್ ಪಾಕಿಸ್ತಾನದ ಏಜೆಂಟ್ ಅಗಿ ಕೆಲಸ ಮಾಡುತ್ತಿದ್ದಾರೆ, ಹಾಗಾಗಿ ಅವರು ಪೌರತ್ವವನ್ನು ವಿರೋಧಿಸಿ ಮಾತನಾಡುತ್ತಾರೆ. ಸೆಂಥಿಲ್ ಅವರನ್ನು ಕೂಡಲೇ ಬಂಧಿಸಿ ಕಾನೂನು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಅಸ್ತಿತ್ವ ಕಳೆದುಕೊಂಡ ಕಾಂಗ್ರೆಸ್ ಪಕ್ಷ ಮುಸ್ಲಿಂ ನಾಯಕರನ್ನು ಪೌರತ್ವದ ವಿಷಯದಲ್ಲಿ ಎತ್ತಿ ಕಟ್ಟಿದ್ದಾರೆ. ಮುಸ್ಲಿಂಮರ ಮತ ಪಡೆಯಲು ಈ ತಂತ್ರವನ್ನು ಕಾಂಗ್ರೆಸ್ ಮಾಡುತ್ತಿದೆ.
ಭಾರತದ ಸಂಸ್ಕ್ರತಿ, ಪರಂಪರೆಯನ್ನು ಉಳಿಸುವ ದೃಷ್ಟಿಯಿಂದ ಪೌರತ್ವದ ಸಮರ್ಥನಾ ಸಮಾವೇಶ ಕಾರ್ಯಕ್ರಮದಲ್ಲಿ ಎಲ್ಲಾ ದೇಶ ಪ್ರೇಮಿ ಭಾರತೀಯರು ಭಾಗವಹಿಸಿ ಎಂದು ಅವರು ಕರೆ ನೀಡಿದರು.
ಜಿಲ್ಲಾ ಬಿಜೆಪಿ ಪ್ರಮುಖ ಬೃಜೇಶ್ ಚೌಟ ಮಾತನಾಡಿ, ಸುಳ್ಳು ಹೇಳಿ ಜನರ ದಾರಿ ತಪ್ಪಿಸುವ ಚಾಳಿ ಕಾಂಗ್ರೇಸ್ ಪಕ್ಷ ದ್ದು, ಇದರ ವಿರುದ್ದ ಭಾರತೀಯ ಜನತಾ ಪಾರ್ಟಿಯ ಕೆಲಸ ನಿರಂತರವಾಗಿ ಮಾಡುತ್ತಿದೆ ಎಂದರು.
ಕ್ಷೇತ್ರ ಬಿಜೆಪಿ ಅಧ್ಯಕ್ಷ ದೇವದಾಸ್ ಶೆಟ್ಟಿ, ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ಪ್ರಮುಖರಾದ ಸುಲೋಚನ ಜಿ.ಕೆ.ಭಟ್, ಕಮಲಾಕ್ಷಿ ಕೆ.ಪೂಜಾರಿ, ರಾಮ್ ದಾಸ ಬಂಟ್ವಾಳ, ಮೋನಪ್ಪ ದೇವಶ್ಯ ಉಪಸ್ಥಿತರಿದ್ದರು.