ಬಂಟ್ವಾಳ: ಪಾದಮುರಿತಕ್ಕೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪೊಲೀಸ್ ಸಿಬ್ಬಂದಿಯನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.

ವಾರೆಂಟ್ ಆರೋಪಿ‌ ಬಂಧನಕ್ಕೆ ತೆರಳಿದ ಪೊಲೀಸ್ ಸಿಬ್ಬಂದಿ ಮಹೇಂದ್ರ ಎಂಬವರನ್ನು ಆರೋಪಿಯು ದೂಡಿದ ಪರಿಣಾಮ ಪಾದ ಮುರಿತಕ್ಕೊಳಗಾಗಿ ಮಂಗಳೂರು ಎ.ಜೆ.ಆಸ್ಪತ್ರೆಗೆ ದಾಖಲಾಗಿದ್ದರು.
ಮಂಗಳೂರು ಎ.ಜೆ‌. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಹೇಂದ್ರ ಅವರನ್ನು ಬಂಟ್ವಾಳ ಶಾಸಕ ಅವರು ಆಸ್ಪತ್ರೆಗೆ ಬೇಟಿ ನೀಡಿ ಘಟನೆಯ ವಿವರ ಪಡೆದುದಲ್ಲದೆ, ಆರೋಗ್ಯ ವಿಚಾರಿಸಿದರು. ಜೊತೆಗೆ ಆಸ್ಪತ್ರೆಯ ವೈದ್ಯಾಧಿಕಾರಿಗಳೊಂದಿಗೆ ಮಾತನಾಡಿ ವಿವರ ಪಡೆದರು. ಮಹೇಂದ್ರ ಅವರು ಶೀಘ್ರವಾಗಿ ಗುಣಮುಖವಾಗಿ ಕರ್ತವ್ಯಕ್ಕೆ ಹಾಜರಾಗುವಂತೆಯೂ ಹಾರೈಸಿದರು.

ಘಟನೆಯ ವಿವರ:
ಕೊಲೆಯತ್ನ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯೋರ್ವನನ್ನು ಬಂಧಿಸಲು ಹೋದ ಪೊಲೀಸ್ ಸಿಬ್ಬಂದಿಗೆ ಹಲ್ಲೆ ನಡೆಸಿ, ದೂಡಿದ ಹಿನ್ನೆಲೆಯಲ್ಲಿ ಪಾದ ಮುರಿದು ಆಸ್ಪತ್ರೆಗೆ ದಾಖಲಾದ ಘಟನೆ ಪುಚ್ಚಮುಗೇರು ಎಂಬಲ್ಲಿ ನಿನ್ನೆ (ಗುರುವಾರ) ರಾತ್ರಿ ನಡೆದಿತ್ತು.

ಬಂಟ್ವಾಳ ಗ್ರಾಮಾಂತರ ಠಾಣಾ ಸಿಬ್ಬಂದಿ ಮಹೇಂದ್ರ ಎಂಬವರು ಕಾಲಿನ ಪಾದ ಮುರಿದು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಶುಕ್ರವಾರ ರಾತ್ರಿಯೇ ಆಸ್ಪತ್ರೆಗೆ ಮಂಗಳೂರು ಎಸ್.ಪಿ.ಲಕ್ಮೀಪ್ರಸಾದ್ ಬೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ.
ಮಹೇಂದ್ರ ಅವರ ಕಾಲಿನ ಶಸ್ತ್ರ ಚಿಕಿತ್ಸೆ ನಡೆದಿದ್ದು ಪಾದದ ಜೋಡಣೆ ಕಾರ್ಯ ಯಶಸ್ವಿಯಾಗಿ ನಡೆದಿದೆ.

2015 ರಲ್ಲಿ ಕೊಲೆಯತ್ನ ಪ್ರಕರಣ ವೊಂದರ ಆರೋಪಿ ಪರಂಗಿಪೇಟೆ ಕುಂಪಣಮಜಲು ನಿವಾಸಿ ನವಾಜ್ ಎಂಬಾತ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಲು ಸಿದ್ದಕಟ್ಟೆ ಸಮೀಪದ ಪುಚ್ಚಮುಗೇರು ಆತನ ಮನೆಗೆ ಹೋದ ವೇಳೆ ಆತ ಪೊಲೀಸ್ ಸಿಬ್ಬಂದಿ ಮಹೇಂದ್ರ ಅವರನ್ನು ದೂಡಿ ಹಾಕಿ ಪರಾರಿಯಾಗಲು ಪ್ರಯತ್ನಿಸಿದ್ದ ವೇಳೆ ಪಾದ ಮುರಿದಿತ್ತು.
ಅ ಬಳಿಕ ಅತನನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here