ಬಂಟ್ವಾಳ: ಜಿ.ಪಂ.ಕೈಗಾರಿಕಾ ವಿಭಾಗದ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖಾ ವತಿಯಿಂದ ವೃತ್ತಿಪರ ಕುಶಲಕರ್ಮಿಗಳಿಗೆ ಸ್ವ ಉದ್ಯೋಗ ಸಲಕರಣೆಗಳನ್ನು ತಾಲೂಕು ಪಂಚಾಯತ್ ನ ಎಸ್. ಜಿ.ಆರ್.ಎಸ್.ವೈ.ಸಭಾಂಗಣದಲ್ಲಿ ಇಂದು ನಡೆಯಿತು.
ಜಿ.ಪಂ.ಸ್ಥಾಯಿ ಅಧ್ಯಕ್ಷ ಜಿ.ಪಂ.ಸದಸ್ಯ ರವೀಂದ್ರ ಕಂಬಳಿ ಅವರ ಅಧ್ಯಕ್ಷತೆಯಲ್ಲಿ ಫಲಾನುಭವಿಗಳಿಗೆ ಸಾಮಾಗ್ರಿಗಳನ್ನು ವಿತರಿಸಲಾಯಿತು.
ಒಟ್ಟು 81 ಫಲಾನುಭವಿಗಳು ಅರ್ಜಿ ನೀಡಿದ್ದು, ಅದರಲ್ಲಿ 71 ಫಲಾನುಭವಿಗಳಿಗೆ ವಿತರಣೆ ನೀಡಲಾಯಿತು.
ಈ ಸಂದರ್ಭದಲ್ಲಿ ಜಿ.ಪಂ.ಸದಸ್ಯ ರಾದ ಪದ್ಮಶೇಖರ್ ಜೈನ್, ಚಂದ್ರಪ್ರಕಾಶ್ ಶೆಟ್ಟಿ, ಮಂಜುಳಾ ಮಾದವ ಮಾವೆ, ಜಯಶ್ರೀ ಕೊಡಂದೂರು, ಮಮತಾ ಗಟ್ಟಿ, ಎಂ.ಎಸ್.ಮಹಮ್ಮದ್, ತಾ.ಪಂ.ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಬಾಸ್ ಆಲಿ, ತಾ.ಪಂ.ಕಾರ್ಯನಿರ್ವಣಾಧಿಕಾರಿ ರಾಜಣ್ಣ ಉಪಸ್ಥಿತರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here