ಬಂಟ್ವಾಳ: ತಾಳಿತ್ತಬೆಟ್ಟು ಇರಾ ದ.ಕ.ಜಿ.ಪಂ.ಉ.ಹಿ.ಪ್ರಾ.ಶಾಲೆಯಲ್ಲಿ ‘ಗ್ರೀನ್ ಡೇ’ ಎಂಬ ವಿಭಿನ್ನ ಕಾರ್ಯಕ್ರಮವನ್ನು ಶಾಲಾ ಪರಿಸರ ಕ್ಲಬ್ ವತಿಯಿಂದ ಎಸ್.ಡಿ.ಎಂ.ಸಿ ಸದಸ್ಯರ, ಪೋಷಕರ, ಶಿಕ್ಷಕರ ಮತ್ತು ಎಲ್ಲ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಆಚರಿಸಲಾಯಿತು.

 

‘ಪರಿಸರ ಎಲ್ಲ ಜೀವಿಗೂ ಆಗರ’ ಎಂಬಂತೆ ಪರಿಸರ ಕುರಿತು ಸಮುದಾಯ ಮತ್ತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲು ಎಂಪ್ರಿ ಸಂಸ್ಥೆಯ ಧನ ಸಹಾಯದೊಂದಿಗೆ ಹಾಗೂ ರಾಷ್ಟ್ರೀಯ ಹಸಿರು ಪಡೆ ಯೋಜನೆಯ ಹಾಗೂ ಶಿಕ್ಷಣ ಇಲಾಖೆಯ ನಿರ್ದೇಶನದ ಮೇರೆಗೆ ವಿದ್ಯಾರ್ಥಿಗಳಿಂದ ಜಾಥಾ ನಡೆಸಲಾಯಿತು.

ಸಭಾ ಕಾರ್ಯಕ್ರಮದ ಪೂರ್ವದಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಮೊದಲನೆಯದಾಗಿ ಗ್ರೀನ್ ಡೇ ಸ್ಪೀಚ್ ಕಾರ್ಯಕ್ರಮವನ್ನು ಶಿಕ್ಷಕಿ ಎಚ್. ಸುಮಂಗಲಾ ಶರ್ಮಾ ಅವರು ನಡೆಸಿಕೊಟ್ಟರು. ವಿಶೇಷವೆಂದರೆ ವಿದ್ಯಾರ್ಥಿಗಳೆಲ್ಲರೂ ಹಸಿರು ಬಣ್ಣದ ಉಡುಗೆ ತೊಟ್ಟು ತಾವು ತಂದಿದ್ದ ಹಸಿರು ಬಣ್ಣದ ಪರಿಸರ ಸಂಬಂಧಿತ ವಸ್ತುವಿನ ಬಗ್ಗೆ ಭಾಷಣ ಮಾಡಿದರು.

ಈ ಸಂದರ್ಭದಲ್ಲಿ ಎಲ್ಲ ಶಿಕ್ಷಕರು ಕೂಡ ಹಸಿರು ಬಣ್ಣದ ಉಡುಗೆ ಧರಿಸಿದ್ದರು.

ಎರಡನೆಯದಾಗಿ ಪರಿಸರ ಸಂಬಂಧಿತ ಆಶು ಭಾಷಣ ಸ್ಪರ್ಧೆಯನ್ನು ಶಿಕ್ಷಕಿ ಶಾಂತಕುಮಾರಿ, ಚಿತ್ರಕಲೆಯನ್ನು ಶಿಕ್ಷಕಿ ಸೌಮ್ಯ ಎಚ್., ಪದ್ಯ ರಚನೆಯನ್ನು ಶಿಕ್ಷಕ ಶಂಕರ್ ಮತ್ತು ಪರಿಸರ ಸಂರಕ್ಷಣೆ ಕುರಿತ ನಾಟಕವನ್ನು ಶಿಕ್ಷಕಿ ಮಿನೋರಾ ರೋಸಿ ನೊರೊನ್ಹಾ ಅವರ ಉಸ್ತುವಾರಿಯಲ್ಲಿ ಉತ್ತಮವಾಗಿ ನಡೆಸಲಾಯಿತು.

ನಂತರದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಎಸ್.ಡಿ.ಎಂ.ಸಿ ಉಪಾಧ್ಯಕ್ಷೆ ಚಂದ್ರಿಕಾ ಆರ್. ವಹಿಸಿದ್ದರು. ಕಾರ್ಯಕ್ರಮದ ಉದ್ಘಾಟಕರಾಗಿ ಇರಾ ಗ್ರಾಮ ಪಂಚಾಯತ್ ಅಧ್ಯಕ್ಷ ಅಬ್ದುಲ್ ರಝಾಕ್ ಕುಕ್ಕಾಜೆ ಆಗಮಿಸಿ ಕಾರ್ಯಕ್ರಮದಲ್ಲಿ ಗಿಡಕ್ಕೆ ನೀರು ಹಾಕುವ ಮೂಲಕ ವಿಭಿನ್ನವಾಗಿ ಉದ್ಘಾಟಿಸಲಾಯಿತು. ಅಲ್ಲದೆ, ಪರಿಸರದ ಉಳಿವು ನಮ್ಮೆಲ್ಲರ ಉಳಿವು ಇಲ್ಲದಿದ್ದರೆ ಜೀವ ಸಂಕುಲದ ಅಳಿವು ಎಂಬಂತೆ ನಾವೆಲ್ಲರೂ ಸೇರಿ ಪರಿಸರ ಉಳಿಸುವ ಹಾಗೂ ಪ್ಲಾಸ್ಟಿಕ್ ಬಳಕೆ ನಿಯಂತ್ರಿಸುವ ಎಂದು ಕರೆ ಕೊಟ್ಟರು.

ಅತಿಥಿಯಾಗಿ ಆಗಮಿಸಿದ್ದ ಶಾಲಾ ಮಾಜಿ ಎಸ್.ಡಿ.ಎಂ.ಸಿ ಅಧ್ಯಕ್ಷರು ಹಾಗೂ ಹಾಲಿ ಚಿಣ್ಣರ ಮನೆ ಗೌರವ ಅಧ್ಯಕ್ಷ ಮುರಳೀಧರ ಬಂಡಾರಿಯವರು ಪರಿಸರವನ್ನು ಉಳಿಸಬೇಕಾದ ತುರ್ತು ಪರಿಸ್ಥಿತಿಗೆ ನಾವೆಲ್ಲರೂ ಬಂದು ತಲುಪಿದ್ದೇವೆ ಎಂದು ಎಚ್ಚರಿಸಿ ಪರಿಸರ ಸಂರಕ್ಷಣೆಗೆ ಕರೆ ನೀಡಿದರು.

ಈ ಸಂದರ್ಭದಲ್ಲಿ ವೇದಿಕೆಯಲ್ಲಿದ್ದ ಎಲ್ಲ ಗಣ್ಯ ಅತಿಥಿಗಳು ಮತ್ತು ಶಾಲಾ ಮುಖ್ಯ ಶಿಕ್ಷಕಿ ಸುಜಾತ ಟಿ. ಎಸ್. ಅವರು ವಿವಿಧ ಕಾರ್ಯಕ್ರಮದಲ್ಲಿ ವಿಜೇತರಾಗಿದ್ದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಕವಾಗಿ ವಿವಿಧ ಬಗೆಯ ಸಸ್ಯವನ್ನು ನೀಡುವ ಮೂಲಕ ವಿಭಿನ್ನವಾಗಿ ಕಾರ್ಯಕ್ರಮವನ್ನು ನಡೆಸಲಾಯಿತು. ಈ ಸುಂದರ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿ ಶ್ರೇಯ ಪ್ರಾರ್ಥನೆಗೆ ಪರಿಸರ ಗೀತೆಯನ್ನು ಹಾಡಿದರು, ನಂತರ ಶಿಕ್ಷಕ ಜೋನ್ ಅಂತೋನಿ ಫೆರ್ನಾಂಡಿಸ್ ಅತಿಥಿಗಳನ್ನು ಸ್ವಾಗತಿಸಿದರು, ಬಹುಮಾನ ಪಡೆದ ವಿದ್ಯಾರ್ಥಿಗಳ ಮಾಹಿತಿಯನ್ನು ಪರಿಸರ ಕ್ಲಬ್ ನ ಮಾರ್ಗದರ್ಶಿ ಶಿಕ್ಷಕಿ ಶಶಿ ಬಿ. ವಾಚಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here