Friday, April 5, 2024

ಬಂಟ್ವಾಳ ಜುಮಾ ಮಸೀದಿ: ಸಿಎಎ, ಎನ್ ಆರ್ ಸಿ, ಎನ್ ಪಿಆರ್ ವಿರೋಧಿಸಿ ಸ್ಟಿಕ್ಕರ್ ಅಭಿಯಾನಕ್ಕೆ ಚಾಲನೆ

ಬಂಟ್ವಾಳ: ಪೌರತ್ವ ತಿದ್ದುಪಡಿ ಕಾಯ್ದೆ, ಎನ್ ಆರ್ ಸಿ, ಎನ್ ಪಿ‌ಆರ್ ಸಂವಿಧಾನ ವಿರೋಧಿ ಕಾಯ್ದೆ ವಿರುದ್ಧ ಬಂಟ್ವಾಳ ಜುಮಾ ಮಸೀದಿ ವತಿಯಿಂದ ಬಂಟ್ವಾಳ ಜಮಾಅತ್ ಸದಸ್ಯರಿಗೆ ಮಾಹಿತಿ ಕಾರ್ಯಾಗಾರ ನಿನ್ನೆ ರಾತ್ರಿ ನಡೆಯಿತು.
ಜುಮಾ ಮಸೀದಿ ಅಧ್ಯಕ್ಷ ಹೈದರಾಲಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಎನ್ ಆರ್ ಸಿ, ಸಿಎಎ, ಎನ್ ಪಿ ಆರ್
ಸಂವಿಧಾನ ವಿರೋಧಿ ಎಂಬ ಅರಿವು ನಮಗಿದೆ‌. ಆದ್ದರಿಂದ ಜಮಾಅತಿಗರು ಯಾವುದೇ ಕಾರಣಕ್ಕೂ ದಾಖಲೆಗಳನ್ನು ನೀಡಬಾರದು. ಒಂದು ವೇಳೆ ಒತ್ತಾಯ ಪಡಿಸಿದರೆ ಮಸೀದಿ ಆಡಳಿತವನ್ನು ಸಂಪರ್ಕಿಸುವಂತೆ ತಿಳಿಸಬೇಕು ಎಂದ ಅವರು, ಈ ಕಾಯ್ದೆಗಳ ವಿರುದ್ಧ ಜಮಾಆತ್ ಬದ್ಧವಾಗಿದೆ ಎಂದು ಹೇಳಿದರು.
ಖತೀಬ್ ಉಸ್ಮಾನ್ ದಾರಿಮಿ ದುಆ ಮೂಲಕ ಸಭೆಯನ್ನು ಉದ್ಘಾಟಿಸಿದರು.
ಜುಮಾ ಮಸೀದಿ ಉಪಾಧ್ಯಕ್ಷ ಮುನೀಶ್ ಅಲಿ ಪ್ರಸ್ತಾವಿಕ ಮಾತನಾಡಿ, ಬಿಜೆಪಿಗರು ಸಿಎಎ ಕಾಯ್ದೆ ಪರ ಬಂಟ್ವಾಳ ವ್ಯಾಪ್ತಿಯ ಕೆಲವೊಂದು ಮನೆಗೆ ಭೇಟಿ ನೀಡಿ ಬಳಿಕ ಫೋಟೊ ತೆಗೆದು “ಸಿಎಎಗೆ ಮುಸ್ಲಿಮರ ಬೆಂಬಲ” ಎಂದು ಬರೆದು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟು ಸುಳ್ಳು ಪ್ರಚಾರ ಮಾಡುತ್ತಿದೆ. ಇದು ಮುಗ್ದ ಜನರನ್ನು ದಾರಿ ತಪ್ಪಿಸುವ ಕುತಂತ್ರ. ಈ ಬಗ್ಗೆ ಯಾರೂ ಕೂಡ ಯಾವುದೇ ಕಾರಣಕ್ಕೂ ಮಾಹಿತಿ ನೀಡಬಾರದು ಎಂದರು.
ಕಮ್ಯೂನಿಟಿ ಡೆವಲಪ್ಮೆಂಟ್ ರಾಜ್ಯ ಸಮಿತಿ ಸದಸ್ಯ ಅಯ್ಯೂಬ್ ಅಗ್ನಾಡಿ, ದಾರುಲ್ ಹುದಾ ಪ್ರಾಂಶುಪಾಲ, ವಕೀಲ ಹನೀಫ್ ಹುದವಿ ಅವರು ಕಾಯ್ದೆಗಳ ಬಗ್ಗೆ ಮಾಹಿತಿ ನೀಡಿದರು.
ಸ್ಟಿಕ್ಕರ್ ಬಿಡುಗಡೆ:
ರಾಜ್ಯ ಗೇರು ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಹಾಜಿ ಬಿ.ಎಚ್.ಅಬ್ದುಲ್ ಖಾದರ್ ಅವರು ಕಾಯ್ದೆ ವಿರೋಧಿ  ಮನೆ, ಮನೆ ಸ್ಟಿಕ್ಕರ್ ಅಭಿಯಾನಕ್ಕೆ ಚಾಲನೆ ನೀಡಿದರು.
ವೇದಿಕೆಯಲ್ಲಿ ತೌಹೀದ್ ಆಂಗ್ಲ ಮಾಧ್ಯಮ ಶಾಲೆಯ ಪ್ರಧಾನ ಕಾರ್ಯದರ್ಶಿ ಖಾದರ್ ಮಾಸ್ಟರ್, ಆಡಳಿತ ಸದಸ್ಯರಾದ ಇಸ್ಮಾಯಿಲ್, ಇಲ್ಯಾಸ್, ರಫೀಕ್, ಇಸ್ಮಾಯಿಲ್ ಅರಬಿ, ಮುಜಾಹಿದ್, ಸನಾವುಲ್ಲಾ, ಅಬ್ದುಲ್ ಲತೀಫ್ ಚೆಮ್ಮೋನು ಉಪಸ್ಥಿತರಿದ್ದರು.
ಮಸೀದಿ ಸದಸ್ಯ ಇರ್ಷಾದ್ ನಿರೂಪಿಸಿದರು.

More from the blog

ಸೌಜನ್ಯ ಹೋರಾಟ ಸಮಿತಿಯಿಂದ ನೋಟ ಅಭಿಯಾನ

ಮಂಗಳೂರು: ರಾಜಕೀಯ ಪಕ್ಷಗಳು ಮತ್ತು ನ್ಯಾಯಾಂಗ ವ್ಯವಸ್ಥೆಯ ಗಮನ ಸೆಳೆಯುವ ಉದ್ದೇಶದಿಂದ ಸೌಜನ್ಯ ಪರ ಹೋರಾಟ ಸಮಿತಿ ವತಿಯಿಂದ ಮುಂಬರುವ‌ ಲೋಕಸಭಾ ಚುನಾವಣೆಯಲ್ಲಿ ನೋಟಕ್ಕೆ ಮತ ಚಲಾಯಿಸಲು ಜನ ಸಾಮಾನ್ಯರನ್ನು ಪ್ರೇರೇಪಿಸಲು ನೋಟ...

ಕಲ್ಲಡ್ಕ ಶ್ರೀರಾಮ ಭಜನಾ ಮಂದಿರಕ್ಕೆ ಲೋಕಸಭಾ ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ಭೇಟಿ

ಬಂಟ್ವಾಳ ತಾಲೂಕಿನ ಶಕ್ತಿಕೇಂದ್ರವಾದ ಕಲ್ಲಡ್ಕ ಶ್ರೀರಾಮ ಭಜನಾ ಮಂದಿರಕ್ಕೆ ಲೋಕಸಭಾ ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ಆಗಮಿಸಿ ಪ್ರಾರ್ಥನೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಕಲ್ಲಡ್ಕ ಡಾ| ಪ್ರಭಾಕರ್ ಭಟ್ ಬಿಜೆಪಿ...

ಕುಕ್ಕಾಜೆ ಜಂಕ್ಷನ್ ನ ಬ್ಲೀಸ್ ಫುಲ್ ಆರ್ಕೆಡ್ ನಲ್ಲಿ ನೂತನ ಶುದ್ಧ ಸಸ್ಯಹಾರಿ ಫ್ಯಾಮಿಲಿ ರೆಸ್ಟೋರೆಂಟ್ “ಹೋಟೆಲ್ ಅನ್ನಪೂರ್ಣ” ಶುಭಾರಂಭ

ಬಂಟ್ವಾಳ ತಾಲೂಕಿನ ಕುಕ್ಕಾಜೆ ಜಂಕ್ಷನ್ ನ ಬ್ಲೀಸ್ ಫುಲ್ ಆರ್ಕೆಡ್ ನಲ್ಲಿ ಅರುಣ್ ಕುಮಾರ್, ಮಹೇಶ್ ಕುಮಾರ್, ಜನಾರ್ಧನ್ ಪೊಸೊಳಿಗೆ ಮಾಲಕತ್ವದ ನೂತನ ಶುದ್ಧ ಸಸ್ಯಹಾರಿ ಫ್ಯಾಮಿಲಿ ರೆಸ್ಟೋರೆಂಟ್. "ಹೋಟೆಲ್ ಅನ್ನಪೂರ್ಣ" ಶುಭಾರಂಭಗೊಂಡಿತು. ಶ್ರೀ...

ನಂದನಹಿತ್ಲು ವೈದ್ಯನಾಥ, ಅರಸು, ಜುಮಾದಿ ಬಂಟ ದೈವಸ್ಥಾನದಲ್ಲಿ ಕಾಲಾವಧಿ ನೇಮೋತ್ಸವ

ಬಂಟ್ವಾಳ: ಇಲ್ಲಿನ ಪೇಟಯಲ್ಲಿರುವ ನಂದನಹಿತ್ಲು ವೈದ್ಯನಾಥ,ಅರಸು,ಜುಮಾದಿ ಬಂಟ ದೈವಸ್ಥಾನದಲ್ಲಿ ಕಾಲವಧಿಯ ನೇಮೋತ್ಸವವು ಗುರುವಾರ ಬೆಳಗ್ಗೆ ಸಂಪನ್ನಗೊಂಡಿತು. ಕ್ಷೇತ್ರದ ತಂತ್ರಿಗಳಾದ ಪೊಳಲಿ ಗಿರಿಪ್ರಕಾಶ್ ತಂತ್ರಿವರ ನೇತೃತ್ವದಲ್ಲಿ‌ ನಡೆದ ವಿವಿಧ ವೈಧಿಕ ವಿಧಿವಿಧಾನಗಳ ಬಳಿಕ ಮೊದಲದಿನ ಶ್ರೀ...