ಬಂಟ್ವಾಳ: ಕೋಸ್ಟಲ್ ಕಲಾವಿದರ ಸಮಸ್ಯೆಗಳಿಗೆ ಸ್ಪಂದಿಸುವ ಮತ್ತು ಕಲಾವಿದರ ಭದ್ರತೆಗಾಗಿ ‘ಕರಾವಳಿ ಕರ್ನಾಟಕ ರಂಗಕಲಾವಿದರ ಸೇವಾ ಪರಿಷತ್ತು’ ಎಂಬ ಹೆಸರಿನ ನೂತನ ಸಂಘ ಮಂಗಳೂರು ಪಾದುವ ಕಾಲೇಜಿನಲ್ಲಿ ಉದ್ಘಾಟನೆಗೊಂಡಿತ್ತು.

ಪ್ರಸ್ತಾವಿಕವಾಗಿ ಮಾತನಾಡಿದ ಸುಂದರ ರೈ ಮಂದಾರ ಅವರು ನಾವೆಲ್ಲ ಸಮಾನ ಮನಸ್ಕ ಕಲಾವಿದರು, ನಮಗೆಲ್ಲರಿಗೂ ಭದ್ರತೆ ಬೇಕಾಗಿದೆ, ಆ ನಿಟ್ಟಿನಲ್ಲಿ ಇಂತಹ ಒಂದು ಸಂಸ್ಥೆಯನ್ನು ಹುಟ್ಟುಹಾಕಲು ನಾವೆಲ್ಲ ಒಟ್ಟಾಗಿದ್ದೇವೆ. ಇದು ಎಲ್ಲಾ ಕಲಾವಿದರಿಗೆ ಸದುಪಯೋಗವಾಗುತ್ತದೆ. ಇವತ್ತು ತುಳು ಭಾಷೆಯೂ ಕೂಡಾ ತುಳು ನಾಟಕರಂಗದಿಂದ ಬೆಳೆಯುತ್ತಲೇ ಇದೆ ಎಂದು ಹೇಳಿದರು.
ಶಿವಪ್ರಕಾಶ್ ಪೂಂಜಾ ಅವರು ಕಲಾವಿದರ ಭದ್ರತೆಗಾಗಿ ಸರ್ಕಾರದಿಂದ ಬರುವ ಅನುದಾನಗಳನ್ನು ಎಂ.ಎಲ್.ಎ ಜೊತೆ ಮಾತಾನಾಡಿ ಬರಿಸಬೇಕು ಮತ್ತು ಈ ವಿಚಾರದಲ್ಲಿ ನಾವೆಲ್ಲರೂ ಒಟ್ಟಾಗಬೇಕು ಎಂದು ತಿಳಿಸಿದರು.


ಈ ಸಂದರ್ಭದಲ್ಲಿ ಮಾತನಾಡಿದ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಎಲ್ಲಾ ಕಲಾವಿದರ ಈ ಒಗ್ಗಟ್ಟಿಗೆ ಮೆಚ್ಚಬೇಕು. ತುಳುನಾಡಿನ ಎಲ್ಲಾ ಕಲಾವಿದರು ಇನ್ನಷ್ಟು ಒಟ್ಟು ಸೇರಬೇಕು. ಕಲಾವಿದರಿಗಾಗುವ ಮೋಸಗಳನ್ನು ಮಕ್ತಗೊಳಿಸಿ ಭದ್ರತೆ ಬೇಕಾಗಿದೆ. ಇದು ಒಳ್ಳೆಯ ನಿರ್ಧಾರ. ಇದೊಂದು ಒಳ್ಳೆಯ ಸಂಘಟನೆ ಆಗಬೇಕು. ಈ ಸಂಸ್ಥೆಯ ಜೊತೆ ನಾನು ಸದಾ ಕೈ ಜೋಡಿಸಿ ಇರುತ್ತೇನೆ ಎಂದು ಕಲಾವಿದರಲ್ಲಿ ಭರವಸೆ ಮತ್ತು ಧೈರ್ಯ ತುಂಬುವ ಮಾತು ಆಡಿದರು.


ಕಲಾವಿದರನ್ನು ಕುರಿತು ಮಾತಾಡಿದ ದೇವದಾಸ್ ಕಾಪಿಕಾಡ್ ಅವರು ನಾವೆಲ್ಲ ಒಂದೇ ನಮಗೆ ಈ ಸಂಸ್ಥೆಯ ಅವಶ್ಯಕತೆ ಇದೆ. ಆದರೆ, ನಮ್ಮೆಲ್ಲರಲ್ಲೂ ಒಗ್ಗಟ್ಟು ಬೇಕು, ಗ್ರೂಫಿಸಂ ಮಾಡಬಾರದು, ಕಲಾವಿದ ಚಿಕ್ಕವನಾಗಿರ್ಲಿ ದೊಡ್ಡವನಾಗಿರ್ಲಿ ಒಬ್ಬರ ಮಾತಿಗೆ ಬೆಲೆ ಕೊಡಬೇಕು, ಕಲಾವಿದರನ್ನು ಕಲಾವಿದರೇ ಅಪಹಾಸ್ಯ ಮಾಡುವುದು ಬೇಡ, ಎಲ್ಲರೂ ಒಗ್ಗಟ್ಟು ಕಟ್ಟೋಣ ಎಂದರು.
ನಂತರ ಸಮಿತಿ ರಚನೆ ನಡೆಯಿತು. ರಮೇಶ್ ರೈ ಕುಕ್ಕುವಲ್ಲಿ ಅವರು ಸೇರಿರುವ ನೂರಕ್ಕೂ ಅಧಿಕ ಕಲಾವಿದರ ಒಪ್ಪಿಗೆ ಪಡೆದು ಹೆಸರು ನೇಮಕ ಮಾಡಿದರು.


ಗೌರವಾಧ್ಯಕ್ಷರಾಗಿ ಲ. ದೇವದಾಸ್ ಕಾಪಿಕಾಡ್, ಕಾನೂನು ಸಲಹೆಗಾರರಾಗಿ ಶಶಿರಾಜ್ ಕಾವೂರು ಹಾಗೂ ನವೀನ್ ರೈ, ಗೌರವ ಸಲಹೆಗಾರರಾಗಿ ವಿಜಯ್ ಕುಮಾರ್ ಕೊಡಿಯಾಲ್ ಬೈಲ್, ಗಂಗಾಧರ ಶೆಟ್ಟಿ ಅಳಕೆ ಮತ್ತು ಶಿವಪ್ರಕಾಶ್ ಪೂಂಜ ಹರೇಕಲ.
ಅಧ್ಯಕ್ಷರಾಗಿ ಮೋಹನ್ ದಾಸ್ ಕೊಟ್ಟಾರಿ ಮುನ್ನೂರು, ಉಪಾಧ್ಯಕ್ಷರಾಗಿ ದಯಾನಂದ್ ನೆಲ್ಯಾಡಿ, ಸುನಿತಾ ಎಕ್ಕೂರು ಮತ್ತು ಮಧು ಬಂಗೇರ ಕಲ್ಲಡ್ಕ, ಪ್ರಧಾನ ಕಾರ್ಯದರ್ಶಿಯಾಗಿ ರಾಜೇಶ್ ಕಣ್ಣೂರು, ಜೊತೆ ಕಾರ್ಯದರ್ಶಿಯಾಗಿ ಹಮೀದ್ ಮಿಯಾರ್,  ಕೋಶಾಧಿಕಾರಿಯಾಗಿ ಕೃಷ್ಣ ಜಿ ಮಂಜೇಶ್ವರ, ಸಂಘಟನಾ ಕಾರ್ಯದರ್ಶಿಯಾಗಿ ಸುಂದರ ರೈ ಮಂದಾರ, ಮುಖ್ಯ ಸದಸ್ಯರುಗಳಾಗಿ ರಾಘವೇಂದ್ರ ಕಾರಂತ್ ಮೊಗರ್ನಾಡು, ಸಾಯಿ ದೀಕ್ಷಿತ್ ಪುತ್ತೂರು, ಜಿತೇಶ್ ಕುಮಾರ್ ಉಳಿಯ, ಉಮೇಶ್ ಶೆಟ್ಟಿ ಪಾಣೆಮಂಗಳೂರು, ತುಳಸಿದಾಸ್ ಮಂಜೇಶ್ವರ, ವಿನೋದ್ ಕುಮಾರ್, ಜೆ ಪಿ ತೂಮಿನಾಡು, ಜೀವನ್ ಉಳ್ಳಾಲ್, ಭಗವಾನ್ ದಾಸ್, ರವಿ ಎಂ. ಎಸ್. ವರ್ಕಾಡಿ, ಪ್ರಸಾದ್ ಶೆಟ್ಟಿ ಶಕ್ತಿನಗರ, ಸಂದೀಪ್ ಶೆಟ್ಟಿ ರಾಯಿ, ರಂಜನ್ ಬೋಳೂರು, ತಿಮ್ಮಪ್ಪ ಕುಲಾಲ್ ಬಿಸಿರೋಡ್, ಅನಿಲ್ ರೈ ಪೆರಿಗೇರಿ, ಅನಿಲ್ ರಾಜ್ ಉಪ್ಪಳ, ಉಷಾ ದೇವರಾಜ್, ತಿರುಮಲೇಶ್ವರ, ನಿಷಿತ ವಿನೀತ್, ಪಿಂಕಿ ರಾಣಿ ಇಪ್ಪತ್ತು ಮಂದಿ ಕಾರ್ಯಕಾರಿ ಸಮಿತಿ ಸದಸ್ಯರನ್ನೊಳಗೊಂಡ ಕಮಿಟಿಯನ್ನು ಆಯ್ಕೆ ಮಾಡಲಾಯಿತು.


ನಂತರ ನೂತನವಾಗಿ ಆಯ್ಕೆಯಾದ ಅಧ್ಯಕ್ಷ ಮೋಹನ್ ದಾಸ್ ಕೊಟ್ಟಾರಿ ಮುನ್ನೂರು ಅವರು ಸಂಸ್ಥೆಯ ಬಗ್ಗೆ ಮಾತಾಡುತ್ತಾ, ನಾನು ಈ ಸಂಸ್ಥೆಗೆ ಅಧ್ಯಕ್ಷನಾಗಿರುವುದು ತುಂಬಾ ಖುಷಿಯಾಗಿದೆ ಮತ್ತು ಅಷ್ಟೇ ಭಯನೂ ಶುರುವಾಗಿದೆ. ಯಾಕಂದ್ರೆ ಅಧ್ಯಕ್ಷ ಸ್ಥಾನ ಅನ್ನೋದು ಸುಲಭದ ಕೆಲಸವೇನಲ್ಲ ಅದಕ್ಕೆ ನಿಮ್ಮೆಲ್ಲರ ಸಹಕಾರ ಬೇಕು ಮತ್ತು ಕಲಾವಿದರ ಭದ್ರತೆಗಾಗಿ ದುಡಿಯುವುದು ನನ್ನ ಕನಸು ಕೂಡ ಆಗಿದೆ. ಆದ್ದರಿಂದ ಈ ಎರಡು ವರ್ಷ ಅವಧಿಯಲ್ಲಿ ಆಧ್ಯಕ್ಷ ಸ್ಥಾನಕ್ಕೆ ಚ್ಯುತಿ ಬರದ ರೀತಿಯಲ್ಲಿ ಕೆಲಸ ಮಾಡುವುದಾಗಿ ಭರವಸೆ ನೀಡಿದರು.
ಮುಖ್ಯ ಅತಿಥಿಗಳಾಗಿ ಕಲಾ ಸಂಗಮದ ವಿಜಯ್ ಕುಮಾರ್ ಕೊಡಿಯಾಲ್ ಬೈಲ್, ಬಲೆ ಚಾ ಪರ್ಕ ಲ|| ದೇವದಾಸ್ ಕಾಪಿಕಾಡ್, ಕೃಷ್ಣ ಜಿ. ಮಂಜೇಶ್ವರ, ಗಂಗಾಧರ ಶೆಟ್ಟಿ, ಚಿದಾನಂದ ಆದ್ಯಾಪಾಡಿ, ಸುಂದರ ರೈ ಮಂದಾರ, ರಾಜೇಶ್ ಕಣ್ಣೂರು, ಶಿವಪ್ರಕಾಶ್ ಪೂಂಜಾ ಉಪಸ್ಥಿತರಿದ್ದರು.

ರಮೇಶ್ ರೈ ಕುಕ್ಕುವಲ್ಲಿ ಸ್ವಾಗತಿಸಿ, ಸುಂದರ ರೈ ಮಂದಾರ ವಂದಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here