ಬಂಟ್ವಾಳ: ಪೆರಾಜೆ ಶ್ರೀ ದೇವಿ ಭಜನಾ ಮಂದಿರದ ಮಂಡಳಿ ವತಿಯಿಂದ ಜರಗುವ 3ನೇ ವರ್ಷದ ವಾರ್ಷಿಕ ಭಜನೆ ಮತ್ತು ದುರ್ಗಾ ಪೂಜೆ ಜ.12 (ನಾಳೆ) ರಂದು ಬೊಳ್ಳುಕಲ್ಲು ಪೆರಾಜೆ ಶ್ರೀ ದೇವಿ ಭಜನಾ ಮಂದಿರದಲ್ಲಿ ನಡೆಯಲಿದೆ ಎಂದು ಪೆರಾಜೆ ಶ್ರೀ ದೇವಿ ಭಜನಾ ಮಂದಿರ ಮತ್ತು ಶ್ರೀ ದೇವಿ ಟ್ರಸ್ಟ್ ಅಧ್ಯಕ್ಷರು ತಿಳಿಸಿದ್ದಾರೆ.
ಬೆಳಗ್ಗೆ 10 ಗಂಟೆಗೆ ಗಣಪತಿ ಹೋಮ, ಮಧ್ಯಾಹ್ನ 12.30ಕ್ಕೆ ಮಹಾಮಂಗಳಾರತಿ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ನಂತರ 1 ಗಂಟೆಯಿಂದ 6 ಗಂಟೆವರೆಗೆ ವಿವಿಧ ಮಂಡಳಿಗಳಿಂದ ಭಜನಾ ಸೇವೆ ನಡೆಯಲಿದೆ. ಆ ಬಳಿಕ ದುರ್ಗಾ ಪೂಜೆ ಆರಂಭವಾಗಲಿದ್ದು, ಮಹಾ ಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನ ಸಂತರ್ಪಣೆ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ