ಬಂಟ್ವಾಳ: ಜನರ ಸಮಸ್ಯೆಯಿಂದ ಅಳಿವಿನಂಚಿನಲ್ಲಿರುವ ಭತ್ತದ ಕೃಷಿಯನ್ನು ಯಾಂತ್ರೀಕೃತವಾಗಿ ಬೆಳೆಸುವ ನಿಟ್ಟಿನಲ್ಲಿ ಜ.25 ರಂದು ಶಿವಮೊಗ್ಗದಲ್ಲಿ ಯಂತ್ರ ಶ್ರೀ ಕೃಷಿ ಪದ್ದತಿ ಯೋಜನೆಗೆ ಅಧಿಕೃತವಾಗಿ ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಹಾಗೂ ಸಚಿವರ ಉಪಸ್ಥಿತಿಯಲ್ಲಿ ಚಾಲನೆ ಸಿಗಲಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಉಡುಪಿ ಪ್ರಾದೇಶಿಕ ನಿರ್ದೇಶಕರಾದ ವಸಂತ ಸಾಲಿಯಾನ್ ಹೇಳಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದಿ ಯೋಜನೆ ಬಿ ಸಿ ಟ್ರಸ್ಟ್ (ರಿ )ಬಂಟ್ವಾಳ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಕೃಷಿ ಇಲಾಖೆ ಬಂಟ್ವಾಳ ತಾಲ್ಲೂಕು ಇದರ ಸಂಯುಕ್ತ ಆಶ್ರಯ ದಲ್ಲಿ ಬಿಸಿರೋಡ್ ವಲಯದ ಕೇಳ್ದೋಡಿ ಒಕ್ಕೂಟದ ಪ್ರಗತಿ ಬಂಧು ಸಂಘದ ಸದಸ್ಯರು ಸೇರಿಕೊಂಡು ಬಿಸಿರೋಡ್ ಮಯ್ಯರಬೈಲ್ ನಲ್ಲಿ ಸುಮಾರು ನಾಲ್ಕೂವರೆ ಎಕ್ರೆ ಹಡಿಲು ಬಿದ್ದ ಗದ್ದೆಯನ್ನು ನಾಟಿ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಶ್ರೀ ಪದ್ದತಿಗೆ ಪೂರಕವಾಗಿ ಯಂತ್ರ ಶ್ರೀಕೃಷಿ ಪದ್ದತಿಯನ್ನು ಈ ವರ್ಷದಿಂದ ಕರ್ನಾಟಕದ ಲ್ಲಿ ಜಾರಿಗೆ ತರಲಾಗಿದ್ದು ಯೋಜನೆಗೆ ಅಧಿಕೃತವಾಗಿ ಚಾಲನೆ ಸಿಗುವ ಮೊದಲು ಗ್ರಾಮ, ತಾಲೂಕುಗಳಲ್ಲಿ ಕೃಷಿಯ ಬಗ್ಗೆ ಮಾಹಿತಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ಹೇಳಿದರು.

ಭತ್ತದ ಕೃಷಿ ಇಳಿಮುಖ ಕಾಣುತ್ತಿರುವ ಇಂದಿನ ದಿನಗಳಲ್ಲಿ ಜನರನ್ನು ಬಳಸದೆ ಕೇವಲ ಯಂತ್ರಗಳನ್ನು ಮಾತ್ರ ಬಳಸಿ ಕಡಿಮೆ ಖರ್ಚಿನಲ್ಲಿ ಹೆಚ್ಚು ಇಳುವರಿಯನ್ನು ಪಡೆಯಬಹುದು ಎಂಬ ಉದ್ದೇಶದಿಂದ ಈ ಪದ್ದತಿಯನ್ನು ಜಾರಿಗೆ ತರಲಾಗಿದೆ.
ನೇಜಿ ಹಾಕುವುದರಿಂದ ಹಿಡಿದು ನಾಟಿ ಮಾಡುವುದು, ನೇಜಿನ ಕಲೆ ಕೀಳವುದು ಹಾಗೂ ಭತ್ತದ ಕಟಾವು ಮಾಡಿದ ಬಳಿಕ ಭತ್ತ ಮತ್ತು ಬೈಹುಲ್ಲನ್ನು ಮನೆಗೆ ಸಾಗಿಸುವ ವರೆಗೆ ಎಲ್ಲವನ್ನೂ ಮೆಷಿನ್ ಮೂಲಕ ಮಾಡಿ ಹೆಚ್ಚು ಲಾಭ ಗಳಿಸುವುದು ಇದರ ಉದ್ದೇಶ ವಾಗಿದೆ.
ಯಂತ್ರ ಶ್ರೀ ಕೃಷಿ ಪದ್ದತಿಗೆ ಅನುಕೂಲವಾಗುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಜಂಟಿಯಾಗಿ ಕೃಷಿಗೆ ಬೇಕಾದ ಯಂತ್ರೋಪಕರಣಗಳನ್ನು ಖರೀದಿ ಮಾಡಿದೆ. ಖರೀದಿ ಮಾಡಿದ ಯಂತ್ರಗಳ ಸಮರ್ಪಕವಾದ ನಿರ್ವಹಣೆ  ಯೋಜನೆ ಮಾಡುತ್ತಿದೆ.
ಕೃಷಿಕರಿಗೆ ಲಾಭವಾಗುವ ನಿಟ್ಟಿನಲ್ಲಿ ಕಡಮೆ ಬಾಡಿಗೆಗೆ ಒಟ್ಟು 150 ಕೃಷಿ ಬಾಡಿಗೆ ಸೇವಾ ಕೇಂದ್ರ ಗಳ ಮೂಲಕ ನೀಡಲಾಗುತ್ತಿದೆ ಎಂದು ತಿಳಿಸಿದರು.
ಈ ವರ್ಷದಲ್ಲಿ ಕರ್ನಾಟಕ ರಾಜ್ಯದಲ್ಲಿ ಸಾಗುವಳಿ ಇರುವ ಕಡೆಗಳಲ್ಲಿ ತಾಲೂಕಿನಲ್ಲಿ ಕನಿಷ್ಟ 1 ಸಾವಿರ ಹೆಕ್ಟೇರ್ ಭತ್ತದ ಬೇಸಾಯ ಆಗಬೇಕಾಗಿದೆ ಎಂಬುದು ಹೆಗ್ಗಡೆಯವರ ಚಿಂತನೆ ಎಂದು ಅವರು ತಿಳಿಸಿದರು.
ಭತ್ತದ ಬೇಸಾಯ ಮಾನವ ದಿನಗಳನ್ನು ಅವಲಂಭಿಸಿದ್ದರಿಂದ ಇಳಿಮುಖವಾಗುತ್ತಾ ಬಂತು. ಪ್ರಸ್ತುತ ಕೃಷಿ ಉಳಿಯಬೇಕಾದರೆ ಯಂತ್ರಗಳ ಅವಲಂಬಿಸಿ ಕೃಷಿ ಚಟುವಟಿಕೆಗಳು ನಡೆಯಬೇಕಾಗಿದೆ ಎಂಬ ನಿಟ್ಟಿನಲ್ಲಿ ಗ್ರಾಮಾಭಿವೃದ್ದಿ ಯೋಜನೆ ಎಲ್ಲಾ ಯಂತ್ರಗಳನ್ನು ಖರೀದಿಸಿದೆ .
ಪ್ರಗತಿ ಬಂಧು ಸಂಘದ ಸದಸ್ಯರು ಗುಂಪು ಚಟುವಟಿಕೆಯ ಮೂಲಕ ಹಡಿಲು ಬಿದ್ದಿದ್ದ ಮಯ್ಯರಬೈಲು ಗದ್ದೆಯಲ್ಲಿ ಭತ್ತದ ಬೇಸಾಯ ಮಾಡಿ ಇತರರಿಗೆ ಕೃಷಿಯಲ್ಲಿ ಲಾಭ ಪಡೆಯಲು ಸಾಧ್ಯವಿದೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಪ್ರತಿಯೊಂದು ಗ್ರಾಮದಲ್ಲಿಯೂ ಇಂತಹ ಕೃಷಿ ಚಟುವಟಿಕೆ ಗಳು ನಡೆಯಬೇಕಾಗಿದೆ ಎಂದು ತಿಳಿಸಿದರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಬಿಸಿರೋಡ್ ವಲಯದ ಅಧ್ಯಕ್ಷ ಶೇಖರ ಸಾಮಾನಿ ವಿಸಿದರು ಈ ಕಾರ್ಯಕ್ರಮದಲ್ಲಿ ಬಂಟ್ವಾಳ ತಾಲೂಕು ಯೋಜನಾಧಿಕಾರಿ ಜಯಾನಂದ ಪಿ., ಕೃಷಿ ಅಧಿಕಾರಿ ನಾರಾಯಣ ಸಿ ಎಚ್ ಯಸ್ ಸಿ ಕೇಂದ್ರ ಯೋಜನಾಧಿಕಾರಿ ಅಶೋಕ್ ಆಚಾರಿ, ಆಚಾರಿ ಪಲ್ಕೆ ಒಕ್ಕೂಟದ ಅಧ್ಯಕ್ಷ ರಾಜೇಶ್, ಲೀಲಾವತಿ ಬಾಳೆಹಿತ್ಲು, ವಾಸುದೇವ ಬಾಳೆಹಿತ್ಲು, ಗೀತಾರಾವ್ ಮಯ್ಯರಬೈಲು, ನಾಗೇಶ್ ಬಾಳೆಹಿತ್ಲು, ಒಕ್ಕೂಟಗಳ ಸೇವಾ ಪ್ರತಿನಿಧಿಗಳು, ಅಧ್ಯಕ್ಷರುಗಳು ಉಪಸ್ಥಿತರಿದ್ದರು ಕೃಷಿ ಮೇಲ್ವಿಚಾರಕ ಜನಾರ್ದನ ಕಾರ್ಯಕ್ರಮ ನಿರೂಪಿಸಿದರು. ಸೇವಾ ಪ್ರತಿ ನಿಧಿ ವನಜಾಕ್ಷಿ ಪ್ರಾರ್ಥನೆ ಮಾಡಿ ಕೃಷಿ ಅಧಿಕಾರಿ ಸಂತೋಷ್ ಸ್ವಾಗತಿಸಿ, ವಲಯದ ಮೇಲ್ವಿಚಾರಕ ಕೇಶವ ಕೆ. ವಂದಿಸಿದರು.

ಈ ಕಾರ್ಯಕ್ರಮದಲ್ಲಿ ಪತ್ರಕರ್ತ ಮೌನೇಶ್ ವಿಶ್ವಕರ್ಮ ಅವರ ನೇತ್ರತ್ವದಲ್ಲಿ ಕಲ್ಲಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಂದ ಕೃಷಿ ವಿಚಾರಕ್ಕೆ ಸಂಬಂಧಿಸಿದ ಕಿರು ನಾಟಕ ಪ್ರದರ್ಶನ ನಡೆಯಿತು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here