ಬಂಟ್ವಾಳ: ಗ್ರಾಮದ ಪ್ರತಿಯೊಬ್ಬರು ಕಾಡು ಸಂಪತ್ತು ಉಳಿಸುವ ಸಲುವಾಗಿ ಪಣತೊಡಬೇಕಾಗಿದೆ. ಆರ್ಯುವೇದ ಗುಣವಿರುವ ಪ್ರತಿಯೊಂದು ಜೈವಿಕ ವಸ್ತುಗಳ ಉತ್ಪಾದನೆ ಹೆಚ್ಚಿಸಲು ಗ್ರಾಮ ಗ್ರಾಮಗಳಲ್ಲಿ ಮಾಹಿತಿ ನೀಡಬೇಕು ಎಂದು ತಾ.ಪಂ.ಉಪಾಧ್ಯಕ್ಷ ಅಬ್ಬಾಸ್ ಅಲಿ ಅವರು ಹೇಳಿದರು.
ಅವರು ಬಿಸಿರೋಡಿನ ತಾ.ಪಂ. ನ ಎಸ್.ಜಿ.ಎಸ್.ವೈ ಸಭಾಂಗಣದಲ್ಲಿ ತಾಲೂಕು ಮಟ್ಟದ ಜೀವ ವೈವಿಧ್ಯ ನಿರ್ವಹಣಾ ಸಮಿತಿ ಸಭೆ, ಮಾಹಿತಿ ಕಾರ್ಯಾಗಾರದಲ್ಲಿ ಈ ವಿಷಯ ತಿಳಿಸಿದರು.
ಆರೋಗ್ಯ ರಕ್ಷಣೆಗೆ ಪೂರಕವಾದ ಅಂಶಗಳನ್ನು ಒಳಗೊಂಡಿರುವ ಗಿಡಗಳನ್ನು ಉಳಿಸಲು ಮತ್ತು ಬೆಳೆಸಲು ಇಲಾಖೆಯ ಜೊತೆ ಪ್ರತಿಯೊಬ್ಬರು ಕೈಜೋಡಿಸಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಂಟ್ವಾಳ ವಲಯ ಉಪ ಅರಣ್ಯ ಅಧಿಕಾರಿ ಸುರೇಶ್, ತಾ.ಪಂ.ಇಒ.ರಾಜಣ್ಣ, ತಾ.ಪಂ.ನ ಮ್ಯಾನೇಜರ್ ಶಾಂಭವಿ ರಾವ್, ಸಹಾಯಕ ತೋಟಗಾರಿಕಾ ಅಧಿಕಾರಿ, ದಿನೇಶ್, ಸಾಮಾಜಿಕ ಅರಣ್ಯ ಇಲಾಖಾ ವಲಯ ಅಧಿಕಾರಿ ರಾಜೇಶ್ ಬಳಿಗಾರ್, ಕೃಷಿ ಸಹಾಯಕ ನಿರ್ದೇಶಕ ನಾರಾಯಣ ಶೆಟ್ಟಿ, ನಾಟಿ ವೈದ್ಯ ಮಾಹಾಬಲ ಪೂಜಾರಿ, ಎ.ಎಫ್.ಸಿ.(ಐ) ನ ಸದಸ್ಯ ರಶೀದ್ ಎ.ಬೋಳಾರ್, ವಿಷಯ ನಿರ್ವಾಹಕಿ ಸವಿತಾ, ಸಂಪನ್ನೂಲ ವ್ಯಕ್ತಿ ಡಾ. ವಿನಾಯಕ ಕೆ.ಎಸ್.ಉಪಸ್ಥಿತರಿದ್ದರು.