ಬಂಟ್ವಾಳ: ಕ್ಷೇತ್ರದೊಳಗಿನ ರಾಜಕೀಯ ವಿಚಾರಕ್ಕೆ ಸಂಬಂಧಿಸಿ ಹರಿಕೃಷ್ಣ ಬಂಟ್ವಾಳರಂತಹ ವ್ಯಕ್ತಿಗಳ ಮೂಲಕ ಮಾಜಿ ಸಚಿವರನ್ನು ಹೀನಾಯವಾಗಿ ನಿಂದಿಸುವುದು ಸೌಮ್ಯ ಸ್ವಭಾವದ ಶಾಸಕ ರಾಜೇಶ್ ನಾಯ್ಕ್ ಅವರಿಗೆ ಶೋಭೆ ತರುವುದಿಲ್ಲ ಎಂದು ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್ ತಿಳಿಸಿದ್ದಾರೆ.

ಅವರು ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜೇಶ್ ನಾಯ್ಕ್ ಅವರ ಅಸಹಾಯಕತೆಯನ್ನು ಮುಚ್ಚಿಡಲು ಮಾಜಿ ಸಚಿವ ರಮಾನಾಥ ರೈ ಅವರ ಹೆಸರು ಉಲ್ಲೇಖ ಮಾಡಿ ಸುಳ್ಳು ಅಪಪ್ರಚಾರಗಳನ್ನು ಬಿಜೆಪಿ ವಕ್ತಾರ ಹರಿಕೃಷ್ಣ ಬಂಟ್ವಾಳ್ ಪತ್ರಿಕಾಗೋಷ್ಠಿ ಮೂಲಕ ಹೇಳುತ್ತಿದ್ದಾರೆ ಎಂದರು.

ಬಿಜೆಪಿಯಲ್ಲಿ ಅಸ್ತಿತ್ವಕ್ಕಾಗಿ ಹರಿಕೃಷ್ಣ ಬಂಟ್ವಾಳ  ಜನಾರ್ದನ ಪೂಜಾರಿ ಅವರನ್ನು ರಾಜಕೀಯವಾಗಿ ಮುಗಿಸಿದ ನಳಿನ್ ಕುಮಾರ್ ಜೊತೆಯಲ್ಲಿ ಹರಿಕೃಷ್ಣ ಬಂಟ್ವಾಳ ಅವರು ಕುಳಿತುಕೊಂಡಿದ್ದಾರೆ. ಅಂದರೆ ಸೋಲಿನ‌ ಹಿಂದೆ ಹರಿಕೃಷ್ಣ ಬಂಟ್ವಾಳ ಅವರು ಒಳ ಒಪ್ಪಂದದ ಕೈವಾಡದ ಶಂಕೆ ಇದೆ, ಇದರ ಸತ್ಯಾಸತ್ಯಾತೆ ಹೊರಬರಬೇಕಾಗಿದೆ. ನೀವು ರಾಜಕೀಯ ಮಾಡಿ ಅದರೆ ವೈಯಕ್ತಿಕ ನಿಂದನೆ ಮಾಡುವ ನೀವು ಎಷ್ಟು ಸರಿ ಎಂದು ಅವರು ಪ್ರಶ್ನಿಸಿದರು.

ರಮಾನಾಥ ರೈ ಅವರ ಮತ್ತು ಕಾಂಗ್ರೇಸ್ ಪಕ್ಷದ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ನಿಮಗೆ ಇಲ್ಲ. ಹಾಗಾಗಿ ಇನ್ನು ಮುಂದೆ ವಿನಾಕಾರಣ ಅವಹೇಳನಕಾರಿಯಾಗಿ ಮಾತನಾಡಿದರೆ ನಾವು ಸುಮ್ಮನಿರುವುದಿಲ್ಲ ಎಂಬ ಎಚ್ಚರದ ಸಂದೇಶ ನೀಡುತ್ತಿದ್ದೇವೆ ಎಂದರು.‌

2017-18 ರಲ್ಲಿ 6 ರಸ್ತೆಗಳು ಅಭಿವೃದ್ಧಿ ಕಾಮಗಾರಿಗೆ ಪತ್ರ ಬರೆದಿರುವ ಬಗ್ಗೆ ನಮ್ಮಲ್ಲಿ ದಾಖಲೆಗಳಿವೆ. ಮಾಜಿ ಸಚಿವ ಬಿ.ರಮಾನಾಥ ರೈ ಅವರು 2013ರಿಂದ 2018 ರ ವರೆಗೆ 2 ಸಾವಿರ ಕೋಟಿಗಿಂತಲೂ ಅಧಿಕ ಅನುದಾನ ತಂದು ಅಭಿವೃದ್ಧಿ ಯೋಜನೆ ಮಾಡಿದ ಈ ಕ್ಷೇತ್ರ ಅಭಿವೃದ್ಧಿ ಕಾರ್ಯಗಳಿಲ್ಲದೆ ಬಡವಾಗಿದೆ.

ಶಾಸಕ ರಾಜೇಶ್ ನಾಯ್ಕ್ ಅವರನ್ನು ಬಿಜೆಪಿ ವಕ್ತಾರ ಹರಿಕೃಷ್ಣ ಬಂಟ್ವಾಳ ದಾರಿತಪ್ಪಿಸುವ ಕೆಲಸ ಮಾಡುತ್ತಿದ್ದಾರೆ.

ಮಂಗಳೂರು ಬಂಟ್ವಾಳ ಕಡೆಯ ಪ್ರಯಾಣಿಕರು ಶಾಪ ಹಾಕುತ್ತಿದ್ದರೂ ಕೂಡ ಯಾಕೆ ಮುಲಾರಪಟ್ನ ಸೇತುವೆ ಕಾಮಗಾರಿ ಮಾಡಲು ಶಾಸಕರಿಗೆ ಸಾಧ್ಯವಾಗಿಲ್ಲ. ಬಿಸಿರೋಡು ಸುಂದರೀಕರಣದ ಶಿಲಾನ್ಯಾಸ ನಡೆದು ಇಷ್ಟು ಸಮಯವಾದರೂ ಯಾಕೆ ಕೆಲಸ ಪ್ರಾರಂಭ ವಾಗಿಲ್ಲ? ಎಂದು ಪ್ರಶ್ನಿಸಿದರು.ಕುಗ್ರಾಮವಾಗಿದ್ದ ಪಂಜಿಕಲ್ಲು ಪ್ರದೇಶವನ್ನು ಸುಗ್ರಾಮವಾಗಿ ಪರಿವರ್ತನೆ ಮಾಡಿದ್ದು ರೈ ಅವರು ಎಂಬ ನೆನಪು ಇವರಿಗೆ ಬೇಕಾಗಿದೆ ಎಂದರು.

ಜಿ.ಪಂ.ಸದಸ್ಯ ಪ್ರಕಾಶ್ ಶೆಟ್ಟಿ ತುಂಬೆ ಮಾತನಾಡಿ, ಗ್ರಾಮ ಪಂಚಾಯತ್ ಸದಸ್ಯನಾಗಲು ಸಾಧ್ಯವಿಲ್ಲದೆ, ಹೀಯಾಳಿಸುವುದು, ನಿಂದಿಸುವುದು ಹರಿಕೃಷ್ಣ ರ ಜಾಯಮಾನ. ಆರ್.ಎಸ್.ಎಸ್.ಪ್ರಮುಖ ಪ್ರಭಾಕರ್ ಭಟ್ ಅವರನ್ನು ನಿಂದಿಸಿದಕ್ಕೆ ಬಿಜೆಪಿಯವರು ಪಕ್ಷದಿಂದ ಹೊರಕ್ಕೆ ತಳ್ಳಿಹಾಕಿದ್ದರು. ಪೂಜಾರಿ ಸೋಲಿನ ಹಿಂದೆ ಬಂಟ್ವಾಳ ಅವರ ಕೈವಾಡವಿತ್ತು ಎಂಬ ಸಂಶಯವಿದೆ. ರೈ ಅವರನ್ನು ವೈಯಕ್ತಿಕ ವಾಗಿ ನಿಂದಿಸಿರುವುದು ಬಹಳ ನೋವಾಗಿದೆ. ಪ್ರಧಾನಿ ನರೇಂದ್ರ ಮೋದಿ, ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ಹೆಗ್ಗಡೆ, ನಳಿನ್ ಕುಮಾರ್ ಕಟೀಲು, ನಾಗರಾಜ್ ಶೆಟ್ಟಿ, ರಾಜೇಶ್ ನಾಯ್ಕ್ ಅವರನ್ನು ಕಾಂಗ್ರೆಸ್ ನಲ್ಲಿರುವಾಗ  ವೈಯಕ್ತಿಕವಾಗಿ ನಿಂದನೆ ಮಾಡಿದವರು ಹರಿಕೃಷ್ಣ ಬಂಟ್ವಾಳ ಅವರು.

ಅವರು ರಾಜಕೀಯವಾಗಿ ವೇದಿಕೆಯಲ್ಲಿ ಚರ್ಚೆ ಮಾಡಲು ಬರಲಿ ನಾವು ರೆಡಿಯಾಗಿದ್ದೇವೆ ಆದರೆ ವಿನಾಕಾರಣ ವೈಯಕ್ತಿಕ ನಿಂದನೆ ಸರಿಯಲ್ಲ, ಅದು ಅವರಿಗೆ ಶೋಭೆಯಲ್ಲ ಎಂದು ಅವರು ತಿಳಿಸಿದರು.

ಹರಿಕೃಷ್ಣ ಅವರ ಚರಿತ್ರೆಯನ್ನು ಸಮಯ ಬಂದಾಗ ನಾವು ಬಹಿರಂಗ ಪಡಿಸುತ್ತೇವೆ.ರಾಜಕೀಯದಲ್ಲಿ ಸೋಲು ಗೆಲವು ಶಾಶ್ವತಲ್ಲ ಎಂದು ಹೇಳಿದರು.

ಪಕ್ಷ ಪ್ರಮುಖರಾದ ಚಂದ್ರಪ್ರಕಾಶ್ ಶೆಟ್ಟಿ, ಪದ್ಮಶೇಖರ್ ಜೈನ್, ಎಂ.ಎಸ್.ಮಹಮ್ಮದ್, ಸುದೀಪ್ ಕುಮಾರ್ ಶೆಟ್ಟಿ, ಮಾಯಿಲಪ್ಪ ಸಾಲ್ಯಾನ್, ಸದಾಶಿವ ಬಂಗೇರ, ಮಂಜುಳಾ ಮಾವೆ, ಜಗದೀಶ್ ಕೊಯಿಲ, ಜನಾರ್ದನ ಚಂಡ್ತಿಮಾರ್ ಹಾಜರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here