ವಿಟ್ಲ: ಅನಂತಾಡಿ ಬಾಕಿಲಗುತ್ತು ಕ್ಷೇತ್ರದಲ್ಲಿ ಶ್ರೀ ಉಳ್ಳಾಲ್ತಿ, ವೈದ್ಯನಾಥೇಶ್ವರ, ಹೊಸಮ್ಮ, ಅಣ್ಣಪ್ಪ ಪಂಜುರ್ಲಿ, ಬೆರ್ಮೆರ್ ಬೈದೇರುಗಳು ಹಾಗೂ ಇತರ ಪರಿವಾರ ದೈವಗಳ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಅಂಗವಾಗಿ ಬುಧವಾರ ಶ್ರೀ ಕ್ಷೇತ್ರದಲ್ಲಿ ಅಷ್ಟೋತ್ತರ ಶತ(108) ನಾರಿಕೇಳ ಗಣಪತಿ ಹವನ, ಶತ ಚಂಡಿಕಾ ಯಾಗದ ಪಾರಾಯಣ ನಡೆಯಿತು. ಬ್ರಹ್ಮ ಬೈದೇರುಗಳ ಗರಡಿಯಲ್ಲಿ ವಿಷ್ಣು ಸಹಸ್ರನಾಮ ಪಾರಾಯಣ, ದುರ್ಗಾಹೋಮ ಇನ್ನಿತರ ವೈದಿಕ, ಧಾರ್ಮಿಕ ಪೂಜಾ ಕಾರ್ಯಗಳು ನಡೆದವು. ಮಧ್ಯಾಹ್ನದ ಮಹಾಪೂಜೆಯ ಬಳಿಕ ಅನ್ನ ಸಂತರ್ಪಣೆ ನಡೆಯಿತು.
ಸಂಜೆ ಶ್ರೀ ನಾಗದೇವರು, ರಕ್ತೇಶ್ವರಿ, ಉಳ್ಳಾಲ್ತಿ, ಹೊಸಮ್ಮ, ವೈದ್ಯನಾಥೇಶ್ವರ ಹಾಗೂ ಎಲ್ಲಾ ಪರಿವಾರ ದೈವ ಸಾನ್ನಿಧ್ಯಗಳ ಅಧಿವಾಸ ಹಾಘೂ ನಾಗ ದೇವರಿಗೆ ಕಲಶ ಪೂಜೆ ನಡೆಯಿತು. ಬ್ರಹ್ಮ ಬೈದೇರುಗಳ ಗರಡಿಯಲ್ಲಿ ೧೦೮ ಕಲಶಗಳ ಮಂಡಳ ರಚನೆ, ಮಂಡಲ ಪೂಜೆ ನಡೆಯಿತು.