ವಿಟ್ಲ: ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಮಾಹಿತಿ ಹಾಗೂ ಕೋಮು ಪ್ರಚೋದನೆಯ ಸಂದೇಶಗಳನ್ನು ಹರಡುವ ಅಪ್ರಾಪ್ತ ಸೇರಿ ಮೂರು ವ್ಯಕ್ತಿಗಳನ್ನು ಬಂಧಿಸಿ ಹೆಡೆಮುರಿ ಕಟ್ಟುವಲ್ಲಿ ವಿಟ್ಲ ಪೋಲೀಸರ ತಂಡ ಯಶಸ್ವಿಯಾಗಿದೆ.

ಸುಳ್ಯ ಮೂಲದ ಕಳಂಜ ನಿವಾಸಿ ಸಿದ್ದಿಕ್ (27), ಮಂಚಿಯ ಕುಕ್ಕಾಜೆ ನಿವಾಸಿ
ಮಹಮ್ಮದ್ ಕೆ (19), ಕಂಬ್ರ ಮೂಲದ ಹನೀಫ್ (25) ಸೇರಿ ಸಜುಪನಡು ಮೂಲದ 16ವರ್ಷದ ಅಪ್ರಾಪ್ತನನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ಬೇರೆ ಬೇರೆ ನಂಬರ್ ಮೂಲಕ ಸಂಘಟನೆಯ ಗುರುತು ಇಲ್ಲದಂತೆ ಮಾಡಿ ಧರ್ಮವನ್ನು ನಾಶ ಮಾಡುತ್ತೇವೆ ಎನ್ನು ರೀತಿಯಲ್ಲಿ ಸುಳ್ಳು ಮಾಹಿತಿ ಹಾಗೂ ಕೋಮು ಪ್ರಚೋದನೆ ಮಾಡುವ ರೀತಿಯ ಸಂದೇಶವನ್ನು ಇವರು ಬೇರೆ ಬೇರೆ ವ್ಯಕ್ತಿಗಳಿಗೆ ಪಸರಿಸಿದ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಬಗ್ಗೆ ತನಿಖೆಗೆ ಮುಂದಾದ ಪೋಲೀಸರು ಆರೋಪಿಗಳನ್ನು ವಿವಿಧ ಕಡೆಗಳಿಂದ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಸಂದೇಶವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪಸರಿಸಿದ ಬಗ್ಗೆ ಒಪ್ಪಿಕೊಂಡಿದ್ದಾರೆನ್ನಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಅಪ್ರಾಪ್ತನನ್ನು ಬಾಲನ್ಯಾಯ ಮಂಡಳಿಗೆ ಹಾಜರು ಪಡಿಸಲಾಗಿದೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here