ಬಂಟ್ವಾಳ: ವಾಹನಗಳ ಬ್ಯಾಟರಿ ಕಳವು ಮಾಡುತ್ತಿದ್ದ ಆರೋಪಿಯೋರ್ವನನ್ನು ಬಂಟ್ವಾಳ ಗ್ರಾಮಾಂತರ ಠಾಣಾ ಎಸ್.ಐ.ಪ್ರಸನ್ನ ನೇತ್ರತ್ವದಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಮೂಡಬಿದ್ರೆ ತಾಲೂಕು ಪುಚ್ಚಮುಗೇರು ನಿವಾಸಿ ಹರೀಶ್ ಪೂಜಾರಿ (40) ಬಂಧಿತ ಆರೋಪಿ.
ಬಂಧಿತ ನ ಕೈಯಿಂದ 18 ಬ್ಯಾಟರಿ ಸಹಿತ ಒಂದು ಕಳವು ಮಾಡಿದ ದ್ಬಿಚಕ್ರವಾಹನವನ್ನು ವಶಕ್ಕೆ ಪಡೆದುಕೊಂಡು , ಉಳಿದಂತೆ ಕಳವುಗೈದ ಬ್ಯಾಟರಿಗಳ ಪತ್ತೆಗೆ ಮುಂದಾಗಿದ್ದಾರೆ.
ಈತ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ , ಬಜ್ಪೆ ಪೊಲೀಸ್ ಠಾಣೆ, ಮೂಡಬಿದ್ರೆ ಪೊಲೀಸ್ ಠಾಣೆ, ಕದ್ರಿ ಪೊಲೀಸ್ ಠಾಣೆ ಸಹಿತ ಅನೇಕ ಕಡೆಗಳಲ್ಲಿ ಕಳವು ಪ್ರಕರಣ ಗಳು ದಾಖಲಾದ ಬಗ್ಗೆ ಪೊಲೀಸ್ ಮೂಲಗಳು ತಿಳಿಸಿವೆ.
ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕೊಯಿಲ ಗ್ರಾಮದಲ್ಲಿ 4 ದಿನಗಳ ಹಿಂದೆ ನಿಲ್ಲಿಸಿದ್ದ ಟಿಪ್ಪರ್ ವಾಹನದಿಂದ ಬ್ಯಾಟರಿ ಕಳ್ಳತನವಾಗಿರುವ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಮಂಗಳೂರು ನಗರದ ವೆನ್ಲಾಕ್ ಆಸ್ಪತ್ರೆಯ ಬಳಿ ಈತ ಇತ್ತೀಚಗೆ ಹೊಂಡಾ ದ್ವಿಚಕ್ರವಾಹನ ಕಳವು ಮಾಡಿರುವುದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ.
ಆರೋಪಿತನು ಇನ್ನು ಬೇರೆ ಕಡೆಗಳಲ್ಲಿ ಬ್ಯಾಟರಿ ಕಳ್ಳತನ ಮಾಡಿದ ಬಗ್ಗೆ ಮಾಹಿತಿ ಇದ್ದು, ತನಿಖೆ ಮುಂದುವರಿದಿದೆ.
ಬಂಟ್ವಾಳ ದ ವಿವಿಧ ಕಡೆಗಳಲ್ಲಿ ನಿಲ್ಲಿಸಲಾಗಿದ್ದ ಬಸ್ ಲಾರಿ, ಜೆಸಿಬಿ ಸಹಿತ ಜನರೇಟರ್ ಗಳ ಬ್ಯಾಟರಿ ಗಳು ಕಳವು ನಡೆದಿದ್ದು ಈ ಕಳವು ಕೂಡಾ ಈತನೇ ಮಾಡಿರಬೇಕು ಎಂಬ ಸಂಶಯವಿದ್ದು, ವಿಚಾರಣೆ ನಡೆಯುತ್ತಿದೆ.

ಬಂಟ್ವಾಳ ಉಪವಿಭಾಗದ ಡಿ.ವೈಎಸ್.ಪಿ. ವೆಲೆಂಟೈನ್ ಡಿಸೋಜ ರವರ ಮಾರ್ಗದರ್ಶನದಲ್ಲಿ, ಬಂಟ್ವಾಳ ವೃತ ನಿರೀಕ್ಷಕ ರಾದ ಟಿ.ಡಿ. ನಾಗರಾಜ್ ರವರ ನಿರ್ದೇಶನ ದಲ್ಲಿ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ ಪ್ರಸನ್ನ ಅವರ ನೇತ್ರತ್ವದಲ್ಲಿ ಸಿಬ್ಬಂದಿಯವರಾದ ಜನಾರ್ದನ, ಸುರೇಶ್, ರಾಧ ಕೃಷ್ಣ, ಮನೋಜ್ ಕಾರ್ಯಚರಣೆ ನಡೆಸಿ ಆರೋಪಿಯನ್ನು ಬಂಧಿಸಿ ದ್ದಾರೆ

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here