Sunday, October 22, 2023

ಆರೋಪಿ ಬಂಧನದ ವೇಳೆ ಪೊಲೀಸ್ ಸಿಬ್ಬಿಂದಿಗೆ ಹಲ್ಲೆ, ಪಾದಮುರಿತ ಆಸ್ಪತ್ರೆಗೆ ದಾಖಲು

Must read

ಬಂಟ್ವಾಳ: ಕೊಲೆಯತ್ನ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯೋರ್ವನನ್ನು ಬಂಧಿಸಲು ಹೋದ ಪೊಲೀಸ್ ಸಿಬ್ಬಂದಿಗೆ ಹಲ್ಲೆ ನಡೆಸಿ ದೂಡಿದ ಹಿನ್ನೆಲೆಯಲ್ಲಿ ಪಾದ ಮುರಿದು ಆಸ್ಪತ್ರೆಗೆ ದಾಖಲಾದ ಘಟನೆ ಪುಚ್ಚಮುಗೇರು ಎಂಬಲ್ಲಿ ನಿನ್ನೆ (ಗುರುವಾರ) ರಾತ್ರಿ ನಡೆದಿದೆ.


ಬಂಟ್ವಾಳ ಗ್ರಾಮಾಂತರ ಠಾಣಾ ಸಿಬ್ಬಂದಿ ಮಹೇಂದ್ರ ಎಂಬವರು ಕಾಲಿನ ಪಾದ ಮುರಿದು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಆಸ್ಪತ್ರೆಗೆ ಮಂಗಳೂರು ಎಸ್.ಪಿ.ಲಕ್ಮೀಪ್ರಸಾದ್ ಬೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ.
ಮಹೇಂದ್ರ ಅವರ ಕಾಲಿನ ಶಸ್ತ್ರ ಚಿಕಿತ್ಸೆ ನಡೆದಿದ್ದು ಪಾದದ ಜೋಡಣೆ ಕಾರ್ಯ ನಡೆದಿದೆ.

2015 ರಲ್ಲಿ ಕೊಲೆಯತ್ನ ಪ್ರಕರಣ ವೊಂದರ ಆರೋಪಿ ಪರಂಗಿಪೇಟೆ ಕುಂಪಣಮಜಲು ನಿವಾಸಿ ನವಾಜ್ ಎಂಬಾತ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಲು ಸಿದ್ದಕಟ್ಟೆ ಸಮೀಪದ ಪುಚ್ಚಮುಗೇರು ಆತನ ಮನೆಗೆ ಹೋದ ವೇಳೆ ಆತ ಪೊಲೀಸ್ ಸಿಬ್ಬಂದಿ ಮಹೇಂದ್ರ ಅವರನ್ನು ದೂಡಿ ಹಾಕಿ ಪರಾರಿಯಾಗಲು ಪ್ರಯತ್ನಿಸಿದ್ದ ವೇಳೆ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ.

More articles

Latest article