ಬಂಟ್ವಾಳ : ಅನಂತಾಡಿ ಗ್ರಾಮ ಪಂಚಾಯತ್, ನೀರು ಮತ್ತು ನೈರ್ಮಲ್ಯ ಸಮಿತಿ ಹಾಗೂ ಜನ ಶಿಕ್ಷಣ ಟ್ರಸ್ಟ್ ಮಂಗಳೂರು ಇವರ ಆಶ್ರಯದಲ್ಲಿ ಸ್ವಚ್ಛತಾ ಜಾಥಾ ಮತ್ತು ಸ್ವೀಪ್ ಕಾರ್ಯಕ್ರಮ ಭಾನುವಾರ ಅನಂತಾಡಿಯಲ್ಲಿ ನಡೆಯಿತ

.

ಗೋಳಿಕಟ್ಟೆ ಅಂಗನವಾಡಿ ಕೇಂದ್ರದಿಂದ ಅನಂತಾಡಿ ಶ್ರೀ ದೇವಿ ಭಜನಾ ಮಂದಿರದ ವರೆಗೆ ಜಾಗೃತಿ ಜಾಥಾ ನಡೆಸಲಾಯಿತು. ಬಳಿಕ ನಡೆದ ಜಾಗೃತಿ ಸಭೆಯನ್ನು ಉದ್ದೇಶಿಸಿ ಹಂಗರ್ ಪ್ರಾಜೆಕ್ಟ್ ನ ಸೋಮಶೇಖರ್ ಮಾತನಾಡಿದರು. ಗ್ರಾಮಮಟ್ಟದಲ್ಲಿ ಮತದಾರರು ಜಾಗೃತರಾದಾಗ, ಉತ್ತಮ ಆಡಳಿತ ಸಿಗಲು ಸಾಧ್ಯ. ಈ ನಿಟ್ಟಿನಲ್ಲಿ ಮುಂಬರುವ ಚುನಾವಣೆಯಲ್ಲಿ ನಿರ್ಭೀತಿಯಿಂದ ಮತಚಲಾಯಿಸುವಂತೆ ಹಾಗೂ ಇದಕ್ಕೆ ಪೂರಕವಾಗಿ‌ ಜಾಗೃತಿ ಬೆಳೆಸುವಂತೆ ಕರೆ ನೀಡಿದರು. ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ವೇದಾವತಿ, ಅನಂತಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಸನತ್ ಕುಮಾರ್ ರೈ, ತಾಲೂಕು ಪಂಚಾಯತ್ ಸದಸ್ಯೆ ಗೀತಾ ಚಂದ್ರಶೇಖರ್, ಬಾಬನಕಟ್ಟೆ ಶಾಲಾ ಮುಖ್ಯೋಪಾಧ್ಯಾಯ ದೊಡ್ಡಕೆಂಪಯ್ಯ, ಆರೋಗ್ಯ ಕಾರ್ಯಕರ್ತೆ ಅರುಂಧತಿ, ಅನಂತಾಡಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಜಯರಾಮ್, ಅಂಗನವಾಡಿ ಕಾರ್ಯಕರ್ತೆಯರಾದ ಶೋಭಾ, ಯಶೋಧಾ, ಸಹಾಯಕಿಯರಾದ ವಿಜಯ, ಸವಿತಾ, ಆಶಾ ಕಾರ್ಯಕರ್ತೆಯರು ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಜಾಥಾದಲ್ಲಿ ಬಾಬನಕಟ್ಟೆ ಶಾಲಾ ಮಕ್ಕಳ ಬ್ಯಾಂಡ್ ಸೆಟ್ ಬಳಗ ಗಮನ ಸೆಳೆಯಿತು. ಜನಶಿಕ್ಷಣ ಕೇಂದ್ರದ ಚೇತನ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here