ಅಳಿಕೆ: ಶ್ರೀ ಸ್ಕಂದ ಬಾಲಕಲಾ ವೃಂದ ಇದರ ದ್ವಿತೀಯ ವಾರ್ಷಿಕೋತ್ಸವ ಹಾಗೂ ಯಕ್ಷಗಾನ ತರಬೇತಿ ಪಡೆದ ಬಾಲ ಕಲಾವಿದರಿಗೆ ಗೆಜ್ಜೆ ಪ್ರದಾನ ಹಾಗೂ ರಂಗಪ್ರವೇಶ ಕಾರ್ಯಕ್ರಮವು ಸುದರ್ಶನ ವಿಜಯ-ಗಜೆಂದ್ರ ಮೊಕ್ಷ ಯಕ್ಷಗಾನದೊಂದಿಗೆ ಅಳಿಕೆ ಚೆಂಡುಕಳ ಗಣೇಶೋತ್ಸವ ಸಮಿತಿ ಸಭಾಂಗಣದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಲಾವೃಂದದ ಗೌರವ ಸಲಹೆಗಾರ ಪೂವಪ್ಪ ಶೆಟ್ಟಿ ಅಳಿಕೆ ಅಧ್ಯಕ್ಷತೆಯಲ್ಲಿ ನಡೆಯಿತು. ಅಳಿಕೆ ಶ್ರೀಸತ್ಯಸಾಯಿ ಲೋಕಸೇವಾ ವಿದ್ಯಾಸಂಸ್ಥೆಯ ಹಿರಿಯ ವಿಜ್ಞಾನ ಅಧ್ಯಾಪಕ ರತ್ನಾಕರ ರೈ, ಅಳಿಕೆ ಗ್ರಾಮ ಪಂಚಾಯತ್ ಅಧ್ಯಕ್ಷ ಪದ್ಮನಾಭ ಪೂಜಾರಿ ಸಣ್ಣಗುತ್ತು, ಗಣೇಶೋತ್ಸವ ಸಮಿತಿಯ ಕಿರಣ್ ಪ್ರಸಾದ್ ರೈ, ಡಾ.ರಮೇಶ್.ಬಿ., ಹಿರಿಯ ಯಕ್ಷಗಾನ ಕಲಾವಿದ ಉಮೇಶ್ ಶೆಟ್ಟಿ ಉಬರಡ್ಕ, ಒಡಿಯೂರು ಜೈ ಗುರುದೇವ್ ಕಲಾಕೇಂದ್ರದ ಸಂಚಾಲಕ ಸಂತೋಷ್ ಭಂಡಾರಿ ಒಡಿಯೂರು ಅತಿಥಿಗಳಾಗಿ ಭಾಗವಹಿಸಿದರು. ಕಾರ್ಯಕ್ರಮದಲ್ಲಿ ನಾಟ್ಯ ಗುರು ಗಣೇಶ ಆಚಾರ್ಯ ಕೊಂದಲಕೋಡಿ ಅವರಿಗೆ ವಿಧ್ಯಾರ್ಥಿಗಳಿಂದ ಗುರುವಂದನೆ ನಡೆಯಿತು. ಡಾಕ್ಟರೇಟ್ ಪದವಿ ಪುರಸ್ಕೃತ ಪ್ರಾಧ್ಯಾಪಕ ಡಾ.ರಮೇಶ್.ಬಿ. ಅವರನ್ನು ಸನ್ಮಾನಿಸಲಾಯಿತು. ಸಮಿತಿಯ ನಿರ್ವಾಹಕಿ ಅಂಗನವಾಡಿ ಶಿಕ್ಷಕಿಯಾಗಿದ್ದು, ಮೇಲ್ವಿಚಾರಕಿಯಾಗಿ ಭಡ್ತಿ ಹೊಂದಿದ ಲೀಲಾವತಿ ರಾಮಗೌಡರವರನ್ನು ಗೌರವಿಸಲಾಯಿತು.
ಸಮಿತಿಯ ಸಂಚಾಲಕ ಸದಾಶಿವ ಅಳಿಕೆ ಪ್ರಸ್ತಾವನೆಗೈದರು. ಸಹಸಂಚಾಲಕ ವಿಜಯಶಂಕರ ಆಳ್ವ ಸ್ವಾಗತಿಸಿದರು. ಸಹ ಸಂಚಾಲಕ ಚಂದ್ರಹಾಸ ಶೆಟ್ಟಿ ಪುಳಿತ್ತಡಿ ವಂದಿಸಿದರು.