Thursday, April 18, 2024

ಕಲ್ಲಡ್ಕ: ಆಧಾರ್ ನೋಂದಣಿ ಮತ್ತು ತಿದ್ದುಪಡಿ ಕಾರ್ಯಕ್ರಮ

ಕಲ್ಲಡ್ಕ: ಕಲ್ಲಡ್ಕ ವಲಯದ ಬಿಲ್ಲವ ಸಮಾಜ ಸೇವಾ ಸಂಘ (ರಿ), ಮೈಸ್ (ಎಮ್.ಐ.ಸಿ.ಇ.) ಕಂಪ್ಯೂಟರ್ ಕಲ್ಲಡ್ಕ ಮತ್ತು ಭಾರತೀಯ ಅಂಚೆ ಇಲಾಖೆ ಪುತ್ತೂರು ಸಹಯೋಗದಲ್ಲಿ “ಆಧಾರ್ ನೋಂದಣಿ ಮತ್ತು ತಿದ್ದುಪಡಿ”ಕಾರ್ಯಕ್ರಮ ಕಲ್ಲಡ್ಕ ಮೈಸ್ ನಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಚೈತನ್ಯ ವಾಣಿಜ್ಯ ಸಂಕೀರ್ಣದ ಮಾಲಕ ತಿರುಮಲೇಶ್ವರ ಭಟ್ ಅವರು ಉದ್ಘಾಟಿಸಿದರು.
ಪುತ್ತೂರು ಅಂಚೆ ವಿಭಾಗದ ಉಪ ಅಧೀಕ್ಷಕ ಲೋಕನಾಥ ಎಂ. ಆಧಾರ್ ಕಾರ್ಡ್ ನ ಬಗ್ಗೆ ವಿವರಿಸಿದರು. ಬಳಿಕ ಅವರನ್ನು ಬಿಲ್ಲವ ಸಂಘದ ಪರವಾಗಿ ಸನ್ಮಾನಿಸಲಾಯಿತು. ಮೂರು ದಿನದ ಕಾರ್ಯಕ್ರಮದಲ್ಲಿ ಒಟ್ಟು 700 ಮಂದಿ ಇದರ ಸದುಪಯೋಗ ಪಡೆದುಕೊಂಡರು.
ವೇದಿಕೆಯಲ್ಲಿ ಅತಿಥಿಯಾಗಿ ಕಲ್ಲಡ್ಕ ಲಕ್ಷ್ಮಿ ಗಣೇಶ್ ಹೋಟೆಲ್ ನ ಮಾಲಕ ಎನ್. ರಾಜೇಂದ್ರ ಹೊಳ್ಳ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಚೆನ್ನಪ್ಪ ಕೋಟ್ಯಾನ್, ಪ್ರಕಾಶ್ ಪಿ. ಕುರ್ಮಾನ್, ಬಿ ಕೆ. ಅಣ್ಣು ಪೂಜಾರಿ, ನಾರಾಯಣ ಪೂಜಾರಿ ಬೊಳಂತೂರು, ಬಿಲ್ಲವ ಸಮಾಜ ಸೇವಾ ಸಂಘ (ರಿ )ಕಲ್ಲಡ್ಕ ವಲಯದ ಅಧ್ಯಕ್ಷ ಕೃಷ್ಣಪ್ಪ ಪೂಜಾರಿ ಕೇಪುಳಕೋಡಿ, ಕಾರ್ಯದರ್ಶಿ ರಮೇಶ್ ಪೂಜಾರಿ ಹೊಸಕಟ್ಟ ಉಪಸ್ಥಿತರಿದ್ದರು.
ವಸಂತ ಪೂಜಾರಿ ಬಟ್ಟೆಹಿತ್ಲು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು, ಬಿಲ್ಲವ ಮಹಿಳಾ ಸಮಾಜ ಸೇವಾ ಸಂಘ (ರಿ)ಕಲ್ಲಡ್ಕ ವಲಯದ ಅಧ್ಯಕ್ಷ ಪುಷ್ಪ ಸತೀಶ್ ದೇವಸ್ಯ ವಂದಿಸಿದರು .

More from the blog

ಜೀಪ್ ಬೈಕ್ ಗೆ ಡಿಕ್ಕಿ… ಬೈಕ್ ಸವಾರ ಸಾವು : ಇಬ್ಬರು ಮಕ್ಕಳು ಗಂಭೀರ

ಪುತ್ತೂರು: ಜೀಪೊಂದು ಬೈಕ್ ಗೆ ಡಿಕ್ಕಿ ಯಾಗಿ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಕಣಿಯೂರು- ಮಂಜೇಶ್ವರ ಅಂತರಾಜ್ಯ ರಸ್ತೆಯ ನರಿಮೊಗರು ಗ್ರಾಮದ ಪಾಪೆತ್ತಡ್ಕ ಎಂಬಲ್ಲಿ ನಡೆದಿದೆ. ಪುತ್ತೂರು ತಾಲೂಕಿನ ಬಡಕ್ಕೋಡಿ ಕಡ್ಯ ನಿವಾಸಿ...

ರಾಜ್ಯದಲ್ಲಿ ಮತ್ತೆ ಏರಿದ ತಾಪಮಾನ

ಬೆಂಗಳೂರು: ಕಳೆದೊಂದು ವಾರದಿಂದ ತಗ್ಗಿದ್ದ ತಾಪಮಾನ ಮತ್ತೆ ಏರಿಕೆಯಾಗಿದ್ದು, ಮುಂದಿನ 5 ದಿನಗಳ ಕಾಲ ಕರ್ನಾಟಕದ ಬಹುತೇಕ ಕಡೆಗಳಲ್ಲಿ ಗರಿಷ್ಠ ಉಷ್ಣಾಂಶವು 2ರಿಂದ 3 ಡಿಗ್ರಿ ಏರಿಕೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ...

ನರಿಕೊಂಬು: ನವಜೀವನ ವ್ಯಾಯಾಮ ಶಾಲೆ: ಏ.21ರಂದು ಹನುಮಾನ್ ಮಂದಿರ ಲೋಕಾರ್ಪಣೆ

ಬಂಟ್ವಾಳ: ಇಲ್ಲಿನ ನರಿಕೊಂಬು ಗ್ರಾಮದ ನವಜೀವನ ವ್ಯಾಯಾಮ ಶಾಲೆ ವತಿಯಿಂದ ರೂ 1 ಕೋಟಿ ವೆಚ್ಚದಲ್ಲಿ ಪುನರ್ ನಿರ್ಮಾಣಗೊಂಡ ಶ್ರೀ ಹನುಮಾನ್ ಮಂದಿರ ಲೋಕಾರ್ಪಣೆ ಮತ್ತು ಶ್ರೀ ಆಂಜನೇಯ ಬಿಂಬ ಪುನರ್ ಪ್ರತಿಷ್ಠೆ...

ಹಿಂದೂ ಸಂಘಟನೆ ಮುಖಂಡನಿಗೆ ಚೂರಿ ಇರಿದ ಪ್ರಕರಣ : ಆರೋಪಿ ಅರೆಸ್ಟ್

ಬಂಟ್ವಾಳ: ಹಿಂದೂ ಸಂಘಟನೆಯ ಮುಖಂಡನೋರ್ವನಿಗೆ ಚೂರಿ ಇರಿದು ಪರಾರಿಯಾಗಿದ್ದ ಆರೋಪಿಯನ್ನು ಬಂಟ್ವಾಳ ನಗರ ಠಾಣೆಯ ಪೋಲೀಸರು ಬಂಧಿಸಿದ ಘಟನೆ ಇಂದು ನಡೆದಿದೆ. ಬಂಟ್ವಾಳ ನಿವಾಸಿ ರವಿ ಯಾನೆ ರವೀಂದ್ರ ಬಂಧಿತ ಆರೋಪಿಯಾಗಿದ್ದಾನೆ. ಎ.14 ರಂದು ಆದಿತ್ಯವಾರ...