Tuesday, October 31, 2023

ಕಲ್ಲಡ್ಕ: ಆಧಾರ್ ತಿದ್ದುಪಡಿ ಮೇಳ

Must read

ಕಲ್ಲಡ್ಕ: ಶ್ರೀ ಶಾರದ ಸೇವಾ ಪ್ರತಿಷ್ಠಾನ (ರಿ) ಕಲ್ಲಡ್ಕ ಇದರ ಆಶ್ರಯದಲ್ಲಿ ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗದ ಸಹಯೋಗದೊಂದಿಗೆ ಎರಡು ದಿನಗಳ ಆಧಾರ್ ಮೇಳ ಕಲ್ಲಡ್ಕ ಪಂಚವಟಿ ವಾಣಿಜ್ಯ ಸಂಕೀರ್ಣದ ಪದ್ಮಾವತಿ ಕಲ್ಯಾಣ ಮಂಟಪದಲ್ಲಿ ಜರುಗಿತು.

ಆಧಾರ್ ಮೇಳವನ್ನು ಹೋಟೇಲ್ ಲಕ್ಷ್ಮಿ ನಿವಾಸದ ಮಾಲಕ ಎನ್. ಶಿವರಾಮ ಹೊಳ್ಳ ಮತ್ತು ಶಿವಪ್ಪ ಸಾಲಿಯಾನ್ ರಾಯಪ್ಪಕೋಡಿ, ಹಾಗೂ ಜಯಾನಂದ ಆಚಾರ್ಯ ಹನುಮಾನ್ ನಗರ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಎಸ್.ಬಿ.ಐ. ನ ನಿವೃತ್ತ ಡೆಪ್ಯೂಟಿ ಮ್ಯಾನೇಜರ್ ನಾರಾಯಣ ನಾಯ್ಕ ಕೊಳಕೀರು, ಉದ್ಯಮಿ ಶೈಲೇಶ್ ಶೆಟ್ಟಿ ಕೊಳಕೀರು ಶುಭ ಹಾರೈಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಮಾಜಿ ಶಾಸಕ ಎ. ರುಕ್ಮಯ ಪೂಜಾರಿ ಅವರು ಜನಸಾಮಾನ್ಯರ ಅತೀ ಅಗತ್ಯದ ದಾಖಲೆಯಾದ ಆಧಾರ್ ತಿದ್ದುಪಡಿ ಮತ್ತು ನೋಂದಾವಣೆಯು ಗ್ರಾಮೀಣ ಭಾಗದ ಜನರಿಗೆ ಗೊಂದಲದ ಗೂಡಾಗಿದೆ ಈ ಕಷ್ಟವನ್ನು ಮನಗಂಡ ಪ್ರತಿಷ್ಠಾನವು ಜನ ಸಾಮಾನ್ಯರಿಗೆ ತಮ್ಮ ಊರಿನಲ್ಲಿಯೇ ಈ ವ್ಯವಸ್ಥೆಯನ್ನು ಒದಗಿಸಿ ಜನ ಮಾನಸದಲ್ಲಿ ಪ್ರೀತಿಯನ್ನು ಗಳಿಸಿದ್ದಾರೆ. ಈ ರೀತಿಯ ಜನೋಪಯೋಗಿ ಕಾರ್ಯಗಳು ನಿರಂತರವಾಗಿ ನಡೆಯಲಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಪುತ್ತೂರು ಅಂಚೆ ವಿಭಾಗದ ಹಿರಿಯ ಅಧಿಕಾರಿ ಲೋಕನಾಥ್ ಮತ್ತು ಮಾಣಿ ಅಂಚೆ ಇಲಾಖೆಯ ನೌಕರ ಬೋಜರಾಜ್ ಕುದ್ರೆಬೆಟ್ಟು ಇವರನ್ನು ಗೌರವಿಸಲಾಯಿತು. ಸಮಾರಂಭದಲ್ಲಿ ಪ್ರತಿಷ್ಠಾನದ ಅಧ್ಯಕ್ಷ ನರಸಿಂಹ ಮಡಿವಾಳ, ಕಾರ್ಯದರ್ಶಿ ಚಿ. ರಮೇಶ್ ಕಲ್ಲಡ್ಕ, ಉತ್ಸವ ಸಮಿತಿಯ ಅದ್ಯಕ್ಷ ಚಿದಾನಂದ ಆಚಾರ್ಯ ಉಪಸ್ಥಿತರಿದ್ದರು.

ಪ್ರತಿಷ್ಠಾನದ ಉಪಾಧ್ಯಕ್ಷ ಯತೀನ್ ಕುಮಾರ್ ಸ್ವಾಗತಿಸಿ, ಕೋಶಾದಿಕಾರಿ ವಜ್ರನಾಥ ಕಲ್ಲಡ್ಕ ವಂದಿಸಿದರು. ಗೋಪಾಲ್ ಕಲ್ಲಡ್ಕ ಕಾರ್ಯಕ್ರಮ ನಿರೂಪಿಸಿದರು..
ಎರಡು ದಿನಗಳಲ್ಲಿ ಒಟ್ಟು 484 ಆಧಾರ್ ತಿದ್ದುಪಡಿ ಮತ್ತು ನೋಂದಾವಣೆ ನಡೆಸಿದ್ದು, ಸ್ಥಳಕ್ಕೆ ಭೇಟಿ ನೀಡಿದ ಮಾಜಿ ಶಾಸಕ ಕೆ. ಪದ್ಮನಾಭ ಕೊಟ್ಟಾರಿ ಮತ್ತು ತಾ.ಪಂ. ಮಾಜಿ ಉಪಾಧ್ಯಕ್ಷ ದಿನೇಶ್ ಅಮ್ಟೂರು ಭೇಟಿ ನೀಡಿ ಜನ ಮೆಚ್ಚುವ ಕೆಲಸಕ್ಕೆ ಅಭಿನಂದನೆ ಸಲ್ಲಿಸಿದರು.

More articles

Latest article