ವಿಟ್ಲ: ವಿಟ್ಲದ ಮೇಗಿನಪೇಟೆ ಅಲ್‌ಖೈರ್ ಮಹಿಳಾ ಶರೀಯತ್ ಕಾಲೇಜಿನ ವತಿಯಿಂದ ಮೀಲಾದ್ ಮೆಹಫಿಲ್-೨೦೧೯ ವಿಟ್ಲದ ಕೇಂದ್ರ ಜುಮಾ ಮಸೀದಿ ವಠಾರದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕಾಲೇಜಿನ ಪ್ರಿನ್ಸಿಪಾಲ್ ಅಬ್ದುಲ್ ರಹಿಮಾನ್ ಫೈಝಿ ಪರ್ತಿಪ್ಪಾಡಿ ಮಾತನಾಡಿ ಒಂದು ಕುಟುಂಬ ನೆಮ್ಮದಿಯಿಂದ ಇರಲು ತಾಯಿ ಪಾತ್ರ ಮಹತ್ವದ ಪಾತ್ರ ವಹಿಸುತ್ತದೆ. ತಾಯಿ ಶಿಕ್ಷಣ ಪಡೆದಾಗ ಮನೆಯಲ್ಲಿರುವ ಪ್ರತಿಯೊಬ್ಬರ ನಡವಳಿಕೆ ಉತ್ತಮವಾಗಿರುತ್ತದೆ. ಶಿಕ್ಷಣ ಕೇವಲ ರ್‍ಯಾಂಕ್ ಪಡೆಯಲು ಮಾತ್ರ ಸೀಮಿತವಲ್ಲ. ಪಡೆದ ಶಿಕ್ಷಣವನ್ನು ಜೀವನದಲ್ಲಿ ಅಳವಡಿಸಿಕೊಂಡು ಮುಂದೆ ಸಾಗಬೇಕು. ಶರೀಯತ್ ಕಾಲೇಜುಗಳ ಮೂಲಕ ಪ್ರತಿಯೊಬ್ಬರು ಧಾರ್ಮಿಕ ಚೌಕಟ್ಟಿನಲ್ಲಿ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಕೇಂದ್ರ ಜುಮಾ ಮಸೀದಿ ಖತೀಬು ಮೊಹಮ್ಮದಾಲಿ ಫೈಝಿ ಇರ್ಫಾನಿ ದುರ್ವಾ ಆಶೀರ್ವಚನ ನೀಡಿದರು. ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಇಬ್ರಾಹಿಂ ಏರ್‌ಸೌಂಡ್ಸ್ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭ ಕಾಲೇಜು ಉಪನ್ಯಾಸ ಅಬ್ಬಾಸ್ ದಾರಿಮಿ ಕೆಲಿಂಜ, ಕೇಂದ್ರ ಜುಮಾ ಮಸೀದಿ ಆಡಳಿತ ಸಮಿತಿ ಕಾರ್ಯದರ್ಶಿ ಇಬ್ರಾಹಿಂ ಕೊಳ್ನಾಡು, ರಿಯಾಝ್ ವಿ.ಎಚ್, ಕಾಲೇಜು ಆಡಳಿತ ಸಮಿತಿ ಟ್ರಸ್ಟಿಗಳಾದ ಇಕ್ಬಾಲ್ ಶೀತಲ್, ಶರೀಫ್ ಮೂಸಾ ಕುದ್ದುಪದವು, ಝುಬೈರ್ ಮಾಸ್ಟರ್, ಕರೀಂ ಕೆಲಿಂಜ, ಹಮೀದ್ ಕುದ್ದುಪದವು, ರಫೀಕ್ ಪೊನ್ನೋಟ್ಟು, ಮಹಮ್ಮದ್ ಆಲಿ ವಿಟ್ಲ, ಇಸಾಕ್ ವಿಟ್ಲ, ಉಪಸ್ಥಿತರಿದ್ದರು.
ಕಾರ್ಯದರ್ಶಿ ಸಫ್ವಾನ್ ಮೊಹಮ್ಮದ್ ವಿಟ್ಲ ಸ್ವಾಗತಿಸಿದರು. ಇಬ್ರಾಹಿಂ ಹುದವಿ ವಂದಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here