ವಿಟ್ಲ: ವಿಟ್ಲ ಲಯನ್ಸ್ ಕ್ಲಬ್ ಇದರ ಸೇವಾ ಚಟುವಟಿಕೆ ಕಾರ್ಯಕ್ರಮದ ಅಂಗವಾಗಿ ಕ್ಲಬ್ ಸದಸ್ಯ ವಿಟ್ಲದ ಉದ್ಯಮಿ ಸುಭಾಶ್‌ಚಂದ್ರ ನಾಯಕ್ ಅವರು ತಮ್ಮ ಜನ್ಮದಿನದಂದು ತೀರಾ ಬಡತನದಲ್ಲಿರುವ 3 ಮನೆಯವರಾದ ಅಳಿಕೆ ಗ್ರಾಮದ ದಿ| ಚನಿಯ ಇವರ ಪತ್ನಿ ಸುಂದರಿ, ೮ ವರ್ಷದ ಹಿಂದೆ ಮರದಿಂದ ಬಿದ್ದು ಸೊಂಟದಿಂದ ಕೆಳಗೆ ಸ್ವಾದೀನ ಕಳಕೊಂಡು ಹಾಸಿಗೆಯಲ್ಲಿ ದಿನ ಕಳೆಯುತ್ತಿರುವ ರವಿ ನಾಯ್ಕ ವಿಟ್ಲ ಹಾಗೂ ಕುಡ್ತಮುಗೇರಿನ ಕುಂಟುಕುಡೇಲು ನಿವಾಸಿ ಚಿನ್ನು ನಾಯ್ಕ ಇವರುಗಳ ಮನೆಗೆ ತೆರಳಿ ಒಂದು ತಿಂಗಳ ದಿನಸಿ ಸಾಮಾನುಗಳನ್ನು ನೀಡಿದರು.
ಈ ಸಂದರ್ಭದಲ್ಲಿ ವಿಟ್ಲ ಲಯನ್ಸ್ ಕ್ಲಬ್ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ, ಕಾರ್ಯದರ್ಶಿ ಮನೋಜ್ ಕುಮಾರ್ ರೈ, ಸದಸ್ಯರುಗಳಾದ ಇಕ್ಬಾಲ್ ಹಾನೆಸ್ಟ್,ಮೋದ್ ಕುಮಾರ್ ರೈ, ರಜಿತ್ ಆಳ್ವ ಮತ್ತು ಗಂಗಾಧರ್, ನಿತ್ಯಾನಂದ ನಾಯಕ್ ಹಾಗೂ ಗೋಕುಲ್‌ದಾಸ್ ಶೆಣೈ ಉಪಸ್ಥಿತರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here