Sunday, October 22, 2023

ಬೋಳಂತೂರು: ತಾಜುಲ್ ಉಲಮಾ ಅನುಸ್ಮರಣಾ ಸಮ್ಮೇಳನ

Must read

ವಿಟ್ಲ: ಬೋಳಂತೂರು ಎನ್.ಸಿ.ರೋಡ್ ತಾಜುಲ್ ಉಲಮಾ ಮೆಮೋರಿಯಲ್ ಸುನ್ನೀ ಸೆಂಟರ್ ಇದರ 6ನೇ ವಾರ್ಷಿಕೋತ್ಸವ, ತಾಜುಲ್ ಉಲಮಾ ಅನುಸ್ಮರಣಾ ಸಮ್ಮೇಳನ ಹಾಗೂ ಮೌಲಿದ್ ಮಜ್ಲಿಸ್ ಕಾರ್ಯಕ್ರಮ ಬೋಳಂತೂರು ಎನ್.ಸಿ.ರೋಡ್ ಎಸ್ಸೆಸ್ಸೆಫ್ ನಗರದಲ್ಲಿ ನಡೆಯಿತು.
ಮುಖ್ಯ ಭಾಷಣ ಮಾಡಿದ ಪೇರೋಡ್ ಮುಹಮ್ಮದ್ ಅಝ್ಝರಿ ಅವರು ಮಾತನಾಡಿ,  ನಮ್ಮ ಉಲಮಾಗಳು ಎಂದಿಗೂ ಉಗ್ರವಾದವನ್ನು ಕಲಿಸಿಲ್ಲ. ಸಹಭಾಳ್ವೆ ಸಹೋದರತ್ವವನ್ನು ಕಲಿಸಿಕೊಟ್ಟಿದ್ದಾರೆ. ಉಲಮಾಗಳ ಸೇವೆ ಶ್ಲಾಘನೀಯವಾಗಿದೆ. ಜೀವಿಸುವುದು ಮರಣ ಹೊಂದುವ ಬಗ್ಗೆ ದೇವರು ಮಾತ್ರ ತೀರ್ಮಾನಿಸಲು ಸಾಧ್ಯ. ಮರಣ ಯಾವಾಗ? ಅದರ ಸಮಯ ಯಾರಿಗೂ ಗೊತ್ತಿಲ್ಲ. ಜೀವಿತಾವಧಿಯಲ್ಲಿ ಸತ್ಕರ್ಮ ಮಾಡಿದಾಗ ಮಾತ್ರ ದೇವರು ಅನುಗ್ರಹ ಪ್ರಾಪ್ತಿಯಾಗುತ್ತದೆ ಎಂದು ಹೇಳಿದರು.

ಅಸ್ಸಯ್ಯಿದ್ ನೂರುಸಾದಾತ್ ಬಾಯಾರು ತಂಙಳ್ ದುವಾಃ ಆಶೀರ್ವಚನ ನೀಡಿದರು. ಎಸ್‌ವೈಎಸ್ ಅಧ್ಯಕ್ಷ ಮಹಮ್ಮದಾಲಿ ಸಖಾಫಿ ಉದ್ಘಾಟಿಸಿದರು. ಶೈಖುನಾ ಮಂಚಿ ಉಸ್ತಾದ್ ಅಧ್ಯಕ್ಷತೆ ವಹಿಸಿದ್ದರು. ಮುಹಿಯ್ಯದ್ದೀನ್ ರಾತೀಬು ಮಜ್ಲಿಸ್, ತಾಜುಲ್ ಉಲಮಾ ಮೌಲಿದ್ ಮಜ್ಲಿಸ್, ಅಸ್ಸಯ್ಯದ್ ಶಿಹಾಬುದ್ದೀನ್ ತಂಙಳ್ ಮದಕ ಅವರ ನೇತೃತ್ವದಲ್ಲಿ ಬದ್ರಿಯಾ ಮಜ್ಲಿಸ್ ನಡೆಯಿತು.
ಈ ಸಂದರ್ಭದಲ್ಲಿ ಜುನೈದ್ ಮುಸ್ಲಿಯಾರ್ ಬಂಟ್ವಾಳ, ಖತೀಬು ಅಬ್ದುಲ್ ಖಾದರ್ ಖಾಮಿಲ್ ಸಖಾಫಿ, ಅಬ್ಬಾಸ್ ಮುಸ್ಲಿಯಾರ್ ಎನ್.ಸಿ ರೋಡ್ ಮೊದಲಾದವರು ಉಪಸ್ಥಿತರಿದ್ದರು.

More articles

Latest article