ವಿಟ್ಲ: ವಿಟ್ಲ ಕಾಶೀಮಠ ಕಾಶೀ ಮಹಿಳಾ ಮಂಡಲದ ಅಧ್ಯಕ್ಷೆಯಾಗಿ ವನಿತಾ ಚಂದ್ರಹಾಸ ಸುವರ್ಣ ಅವರು ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ನಡೆದ ಮಹಾಸಭೆಯಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆಯಿತು. ವನಿತಾ ಚಂದ್ರಹಾಸ ಅವರು ವಿಟ್ಲ ಬ್ರಹ್ಮಶ್ರೀ ವಿವಿಧೋದ್ದೇಶ ಸಹಕಾರಿ ಸಂಘದ ನಿರ್ದೇಶಕಿಯಾಗಿ, ವಿಟ್ಲ ಬಿಲ್ಲವ ಸಂಘದ ಕ್ರೀಡಾಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಗೌರವಾಧ್ಯಕ್ಷೆಯಾಗಿ ಮೀರಾ ಭಟ್, ಉಪಾಧ್ಯಕ್ಷೆಯಾಗಿ ಪುಷ್ಪಾಲತಾ ವಿ.ಕೆ, ಕಾರ್ಯದರ್ಶಿಯಾಗಿ ರಮ್ಯ ನವೀನ, ಜತೆ ಕಾರ್ಯದರ್ಶಿಯಾಗಿ ಸುನೀತಾ ಜಗದೀಶ, ಕೋಶಾಧಿಕಾರಿಯಾಗಿ ರೇಷ್ಮಾ ರಾಜೇಶ್ ಆಯ್ಕೆಗೊಂಡರು.