ವಿಟ್ಲ: ವಿಟ್ಲ ಬೊಳಂತಿಮೊಗರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಮೃತ ಮಹೋತ್ಸವದ ಆಮಂತ್ರಣ ಪತ್ರಿಕೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರು ಬಿಡುಗಡೆಗೊಳಿಸಿದರು.
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೊಳಂತಿಮೊಗರು ಇದರ ಮುಖ್ಯ ಶಿಕ್ಷಕರಾದ ಎಚ್. ಸಂಜೀವ ನಾಯಕ್, ಸಹ ಶಿಕ್ಷಕರಾದ ವಿಠಲ್ ನಾಯಕ್, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಪುರಂದರ ಅಂಚನ್, ನೂತನ ಕಟ್ಟಡ ರಚನಾ ಸಮಿತಿಯ ಅಧ್ಯಕ್ಷ ವಿಶ್ವನಾಥ ನಾಯ್ತೊಟ್ಟು ಮತ್ತು ಪ್ರೌಢಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಜಗದೀಶ್ಚಂದ್ರ ನಾಯ್ತೊಟ್ಟು ಅವರು ಬಿಡುಗಡೆ ವೇಳೆ ಉಪಸ್ಥಿತರಿದ್ದರು.