ವಿಟ್ಲ: ಯುವ ಸಮುದಾಯ ಯಾಂತ್ರೀಕೃತ ಬದುಕಿನಿಂದಾಗಿ ಧಾರ್ಮಿಕ ಆಚರಣೆಗಳಿಂದ ದೂರವಾಗುತ್ತಿದೆ. ಕಟೀಲಿನಲ್ಲಿ ಬ್ರಹ್ಮಕಲಶೋತ್ಸವದ ಶ್ರಮ ಸೇವೆಯಲ್ಲೂ ಪ್ರತಿಯೊಬ್ಬರೂ ಭಾಗವಹಿಸುವ ಕಾರ್ಯವಾಗಬೇಕು. ವಿಟ್ಲ ಸೀಮೆಯ ಪ್ರತಿಯೊಂದು ಮನೆಯ ಮಂದಿಯೂ ಕೋಟಿ ಜಪ ಯಾಗದಲ್ಲಿ ಭಾಗವಹಿಸಬೇಕು ಎಂದು ಮಾಣಿಲ ಶ್ರೀಧಾಮ ಶ್ರೀಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು.
ವಿಟ್ಲ ಪಂಚಲಿಂಗೇಶ್ವರ ಸಭಾಭವನದಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ 2020 ರ ಜನವರಿ -ಫೆಬ್ರವರಿಯಲ್ಲಿ ನಡೆಯಲಿರುವ ಬ್ರಹ್ಮಕಲಶೋತ್ಸವ ಹಾಗೂ ಕೋಟಿ ಜಪ ಯಜ್ಞ ಕಾರ್ಯಕ್ರಮದ ಸಮಾಲೋಚನಾ ಸಭೆಯಲ್ಲಿ ಆಶೀರ್ವಚನ ನೀಡಿದರು.
ಶ್ರೀ ಕ್ಷೇತ್ರ ಕಟೀಲಿನ ಅನುವಂಶಿಕ ಅರ್ಚಕರಾದ ಅನಂತಪದ್ಮನಾಭ ಅಸ್ರಣ್ಣ ಮಾತನಾಡಿ ತಾಯಿಯ ಸಮನಾಗಿ ಕಾಣುವ ಕಟೀಲು ಕ್ಷೇತ್ರದಲ್ಲಿ 13 ದಿನದ ಬ್ರಹ್ಮಕಲಶೋತ್ಸವದ ಕಾರ್ಯಕ್ರಮಗಳು ನಡೆಯಲಿದ್ದು, ಸ್ವರ್ಣ ಧ್ವಜ ಸಮರ್ಪಣೆ ಸಂದರ್ಭದಲ್ಲಿ ನಡೆಯಲಿದೆ. ಮಕ್ಕಳೆಲ್ಲರೂ ಭಾಗವಹಿಸಿದಾಗ ತಾಯಿಗೆ ಸಂತೋಷವುಂಟಾಗುತ್ತದೆ. ಎಲ್ಲರೂ ಧರ್ಮ ಮಾರ್ಗದಲ್ಲಿ ನಡೆದಾಗ ಶ್ರೇಯಸ್ಸು ಲಭಿಸುತ್ತದೆ. ದೇವರ ಮೂಲ ಸ್ಥಳದಲ್ಲಿ ಪ್ರಾರ್ಥಿಸಿದಾಗ ಅನಂತ ಫಲ ಲಭಿಸುತ್ತದೆ ಎಂದರು.

ಈ ಸಂದರ್ಭದಲ್ಲಿ ವಿಟ್ಲ ಸಮಿತಿಯ ಆಯ್ಕೆ ನಡೆಯಿತು.ಕೋಟಿ ಜಪ ಯಜ್ಞದ ಮಾಹಿತಿ ಪತ್ರ ಹಾಗೂ ರಶೀದಿ ಪುಸ್ತಕವನ್ನು ಸಮಿತಿ ಅಧ್ಯಕ್ಷರಿಗೆ ಹಸ್ತಾಂತರಿಸಲಾಯಿತು.

ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎಲ್. ಎನ್. ಕೂಡೂರು, ವಿಟ್ಲ ಶ್ರೀ ಪಂಚಲಿಂಗೇಶ್ವರ ಭಜನಾ ಪರಿಷತ್ ಅಧ್ಯಕ್ಷ ಕೃಷ್ಣಯ್ಯ ಕೆ., ವಿಟ್ಲ ಸಮಿತಿಯ ಅಧ್ಯಕ್ಷ ಸತೀಶ್ ಕುಮಾರ್ ಆಳ್ವ, ಪ್ರಧಾನ ಕಾರ್ಯದರ್ಶಿ ಅನಂತ ಪ್ರಸಾದ್ ಉಪಸ್ಥಿತರಿದ್ದರು. ಅರುಣ್ ಎಂ. ವಿಟ್ಲ ಸ್ವಾಗತಿಸಿದರು. ದಯಾನಂದ ಶೆಟ್ಟಿ ಉಜಿರೆಮಾರು ವಂದಿಸಿದರು.

 

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here