ವಿಟ್ಲ: ಮಕ್ಕಳಿಗೆ ತನ್ನದೇ ಆದಂತಹ ಹಕ್ಕುನ್ನು ಸಂವಿಧಾನತ್ಮಾಕವಾಗಿ ಸರಕಾರ ನೀಡಿದೆ. ಅದರ ಜೊತೆಗೆ ರಕ್ಷಣೆಯನ್ನು ಕೊಡುವಂತಹದ್ದು ಸಂಬಂಧಪಟ್ಟ ಇಲಾಖಾ ಜವಾಬ್ದಾರಿ ಇದರಲ್ಲಿ ಯಾವುದೇ ಸಮಸ್ಯೆಗಳು ಬಂದಾಗ ಶಿಕ್ಷಕರ ಮೂಲಕ ಗ್ರಾಮ ಪಂಚಾಯತ್ ಅಥವಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಧೈರ್ಯವಾಗಿ ದೂರು ನೀಡಿ ಎಂದು ಕೊಳ್ನಾಡು ಗ್ರಾಮ ಪಂಚಾಯತ್ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಕುಳಾಲು ಹೇಳಿದರು.
ಅವರು ಕೊಳ್ನಾಡು ಗ್ರಾಮ ಪಂಚಾಯತ್ ನಲ್ಲಿ ನಡೆದ ಮಕ್ಕಳ ಗ್ರಾಮ ಸಭೆಯನ್ನು ಉದ್ಫಾಟಿಸಿ ಮಾತನಾಡಿದರು. ಮಕ್ಕಳ ಆರೋಗ್ಯ, ಶಿಕ್ಷಣ, ಅಂಗನವಾಡಿ ಹಾಗೂ ಪೋಲಿಸ್ ಇಲಾಖೆಗಳು ಮಕ್ಕಳ ಶ್ರೇಯೋಭಿವೃದ್ಧಿಗೆ ದುಡಿಯುತ್ತಿವೆ ಇವುಗಳ ಮಾಹಿತಿಯನ್ನು ಪಡೆದು ದುಶ್ಚಟಕ್ಕೆ ಬಲಿಯಾಗದೇ ಗುಣಮಟ್ಟದ ಶಿಕ್ಷಣ ಪಡೆದು ಆರೋಗ್ಯವಂತ ಸಮಾಜ ನಿರ್ಮಾಣ ಮಾಡುವ ದೇಶದ ಸಂಪನ್ಮೂಲ ವ್ಯಕ್ತಿಗಳಾಗಿ ಬೆಳೆಯಿರಿ ಎಂದು ಹೇಳಿದರು.
ಸಭೆಯ ಅಧ್ಯಕ್ಷತೆಯನ್ನು ಕಾಡುಮಠ ಪ್ರೌಢಶಾಲೆಯ ವಿದ್ಯಾರ್ಥಿನಿ ಶಬಾನ ರವರು ವಹಿಸಿದ್ದರು. ಸಭೆಯಲ್ಲಿ ಮಕ್ಕಳು ಶಾಲೆ ಬಿಟ್ಟ ಮಕ್ಕಳ ಬಗ್ಗೆ ಮಾಹಿತಿ ನೀಡಿದರು. ಕಟ್ಟತ್ತಿಲ, ನಾರ್ಶ ,ಸುರಿಬೈಲು, ಕಾಡುಮಠ, ನೂಜಿಬೈಲು ಶಾಲೆಯ ಮಕ್ಕಳು ಮೂಲ ಸೌಕರ್ಯಗಳ ಬಗ್ಗೆ ಗ್ರಾಮ ಪಂಚಾಯತ್ ನ ಗಮನ ಸೆಳೆದರು. ಹೆಚ್ಚಿನ ಬೇಡಿಕೆಗಳನ್ನು ಈಡೇರಿಸುವುದಾಗಿ ಗ್ರಾಮ ಪಂಚಾಯತ್ ಅಧ್ಯಕ್ಷರು ಭರವಸೆ ನೀಡಿದರು.
ಶಿಕ್ಷಣಾ ಇಲಾಖಾ ಸಂಯೋಜಕಿ ಇಂದಿರಾ, ಅಂಗನವಾಡಿ ಮೇಲ್ವಿಚಾರಕಿ ರೇಣುಕಾ, ಆರೋಗ್ಯ ಸಹಾಯಕಿ ಹರಿಣಾಕ್ಷಿ ತಮ್ಮ ಇಲಾಖಾ ಮಾಹಿತಿ ನೀಡಿದರು. ಗ್ರಾ. ಪಂ. ಸದಸ್ಯರಾದ ಜಯಂತಿ ಎಸ್.ಪೂಜಾರಿ, ಟಿ ಯೂಸುಫ್, ಐರಿನ್ ಡಿ,ಸೋಜ, ಗುರುವಪ್ಪ ಮುಗೇರ, ಇಂದ್ರಾವತಿ ಉಪಸ್ಥಿತರಿದ್ದರು. ಪಿಡಿಒ ರೋಹಿಣಿ ಬಿ ಸ್ವಾಗತಿಸಿ, ವಂದಿಸಿದರು.