ವಿಟ್ಲ: ರಾಜ್ಯ ಮಟ್ಟದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಯುನೈಟೆಡ್ ಎಂಪವರ್‌ಮೆಂಟ್ ಅಸೋಸಿಯೇಶನ್‌ನ ವಿಟ್ಲ ಜಿಲ್ಲಾ ಸಮಿತಿಯ ಜಿಲ್ಲಾಧ್ಯಕ್ಷರಾಗಿ ಶಫೀಕ್ ಎಂ.ಎಸ್ ಪುಣಚ ಅವರು ಆಯ್ಕೆಯಾಗಿದ್ದಾರೆ.
ವಿಟ್ಲದ ನೀರಕಣಿಯ ಜೆಎಲ್ ಅಡಿಟೋರಿಯಂನಲ್ಲಿ ನಡೆದ ಸಭೆಯಲ್ಲಿ ರಾಜ್ಯ ಸಮಿತಿಯ ಪದಾಧಿಕಾರಿಗಳು ಈ ಆಯ್ಕೆ ಪ್ರಕ್ರಿಯೆ ನಡೆಸಿದರು.
ಉಪಾಧ್ಯಕ್ಷರಾಗಿ ರಿಯಾಝ್ ವಿ.ಎಚ್, ದಾವೂದು ಒಕ್ಕೆತ್ತೂರು, ಇಕ್ಬಾಲ್ ಶೀತಲ್, ಮಜೀದ್ ಕನ್ಯಾನ, ಪ್ರಧಾನ ಕಾರ್ಯದರ್ಶಿಯಾಗಿ ಹರ್ಷದ್ ಇಸ್ಮಾಯಿಲ್ ಚಂದಳಿಕೆ, ಜತೆ ಕಾರ್ಯದರ್ಶಿಯಾಗಿ ಇಝಾದ್ ಒಕ್ಕೆತ್ತೂರು, ರಫೀಕ್ ಪೊನ್ನೋಟ್ಟು, ಖಜಾಂಜಿಯಾಗಿ ಕೌಸರ್, ಕ್ರೀಡಾ ಕಾರ್ಯದರ್ಶಿಯಾಗಿ ನಝೀರ್ ಪುಣಚ, ಕ್ರೀಡಾಕೂಟ ಕಾರ್ಯದರ್ಶಿಯಾಗಿ ಇಮ್ತಿಯಾಝ್ ಬೊಬ್ಬೆಕೇರಿ, ಅಝರ್ ಒಕ್ಕೆತ್ತೂರು, ಮಾಧ್ಯಮ ಕಾರ್ಯದರ್ಶಿಯಾಗಿ ಮಹಮ್ಮದ್ ಆಲಿ ವಿಟ್ಲ ಅವರನ್ನು ಆಯ್ಕೆ ಮಾಡಲಾಯಿತು.
ಕ್ರಿಕೆಟ್ ಉಸ್ತುವಾರಿಯಾಗಿ ಬಶೀರ್, ಸಿರಾಜ್ ಕಡಂಬು, ಫುಟ್‌ಬಾಲ್ ಉಸ್ತುವಾರಿಯಾಗಿ ನಾಸೀರ್ ವಿಟ್ಲ, ಕಬಡ್ಡಿ ಉಸ್ತುವಾರಿಯಾಗಿ ಸುಲೈಮಾನ್ ಒಕ್ಕೆತ್ತೂರು, ವಾಲಿಬಾಲ್ ಉಸ್ತುವಾರಿಯಾಗಿ ರಾಝಿಕ್ ಒಕ್ಕೆತ್ತೂರು, ಇತರ ಕ್ರೀಡಾ ಉಸ್ತುವಾರಿಯಾಗಿ ರಶೀದ್ ಎಂ.ಎಸ್, ಅವರನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭ ರಾಜ್ಯಾಧ್ಯಕ್ಷ ಸಿರಾಜುದ್ದೀನ್, ರಾಜ್ಯ ಪ್ರಧಾನ ಕಾರ್ಯದರ್ಶಿ ಇಮ್ತಿಯಾಝ್, ರಾಜ್ಯ ಸಮಿತಿ ಸದಸ್ಯರಾದ ಇಬ್ರಾಹಿಂ ಗೋಳಿಕಟ್ಟೆ, ಇಕ್ಬಾಲ್ ಹಸನ್, ಸಿರಾಜ್ ಪುತ್ತೂರು, ಶರೀಫ್ ಸಾಲ್ಮರ, ಫಾರೂಕ್ ಪುತ್ತೂರು ಭಾಗವಹಿಸಿದ್ದರು.
ಸದಸ್ಯರಾದ ಶಾಕೀರ್ ಸ್ವಾಗತಿಸಿದರು. ಉಬೈದ್ ವಿಟ್ಲ ಬಜಾರ್ ವಂದಿಸಿದರು.