ಬಂಟ್ವಾಳ: ಕ್ರಿಸ್ಮಸ್ ಕಾರ್ಯಕ್ರಮದಲ್ಲಿ ನಡೆದಿದೆ ಎನ್ನಲಾಗಿರುವ ರಾಮಾಯಣದ ಕತೆಯನ್ನು ಆಧಾರಿಸಿ ಶ್ರೀರಾಮ, ಸೀತಾಮಾತೆ, ಆಂಜನೇಯ ದೇವರನ್ನು ಅವಹೇಳನ ಮಾಡಿರುವ ಸ್ಕಿಟ್ ಒಂದರ ವೀಡಿಯೋ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಇದರಿಂದ ಕೋಟ್ಯಂತರ ಹಿಂದೂಗಳ ಧಾರ್ಮಿಕ ನಂಬಿಕೆ ಮತ್ತು ಭಾವನೆಗಳಿಗೆ ಧಕ್ಕೆ ಉಂಟಾಗಿರುತ್ತದೆ. ಹಾಗೂ ಕ್ರೈಸ್ತರ ಹಬ್ಬದ ಸಂದರ್ಭದಲ್ಲಿ ಕೋಮು ಭಾವನೆಗಳನ್ನು ಕೆರಳಿಸಿ ಕೋಮು ಸಾಮರಸ್ಯ, ಸೌಹಾರ್ದತೆಗೆ ಧಕ್ಕೆಯುಂಟು ಮಾಡಿ ಕೋಮುಗಲಭೆ ಎಬ್ಬಿಸಿ ‌ಸಮಾಜದಲ್ಲಿ ಅಶಾಂತಿ ಉಂಟುಮಾಡುವ ಹುನ್ನಾರವೂ ದುಷ್ಕೃತ್ಯದಲ್ಲಿ ಅಡಗಿರುವಂತಿದೆ.
ಹಾಗಾಗಿ ಸಮಾಜದ ಶಾಂತಿ ಸುವ್ಯವಸ್ಥೆಗೆ ಭಂಗ ತರುವಂತಹ ಇಂತಹ ಸ್ಕಿಟ್ ಮಾಡಿರುವ ಮತ್ತು ಅದನ್ನು ವೀಡಿಯೋ ಮಾಡಿರುವ ಕಿಡಿಗೇಡಿಗಳನ್ನು ತಕ್ಷಣ ಬಂಧಿಸಿ ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕೆಂದು ವಿಶ್ವ ಹಿಂದೂ ಪರಿಷತ್  ಭಜರಂಗದಳ ವಿಟ್ಲ ಪ್ರಖಂಡದ ವತಿಯಿಂದ ಬಂಟ್ವಾಳ ನಗರ ಠಾಣೆಯಲ್ಲಿ ದೂರು ನೀಡಲಾಯಿತು.

ಈ ಸಂದರ್ಭದಲ್ಲಿ ವಿಶ್ವಹಿಂದೂ ಪರಿಷತ್ ಮುಖಂಡ ಲೋಹಿತ್ ಪಣೋಲಿಬೈಲು, ವಿಶ್ವಹಿಂದೂ ಪರಿಷತ್ ವಿಟ್ಲ ಪ್ರಖಂಡ ಸಹಕಾರ್ಯದರ್ಶಿ ದೀಪಕ್ ಕೋಟ್ಯಾನ್ ಸಜೀಪ, ಭಜರಂಗದಳ ಪುತ್ತೂರು ಜಿಲ್ಲಾ ಸಹ ಸಂಯೋಜಕ ಗುರುರಾಜ್ ಬಿ.ಸಿರೋಡ್, ಪ್ರದೀಪ್ ಅಜ್ಜಿಬೆಟ್ಟು, ರತನ್ ಬೊಳ್ಳಾಯಿ, ಪ್ರದೀಪ್ ಮೆಲ್ಕಾರ್, ಅಶೋಕ್ ಮಿತ್ತಮಜಲ್, ಪ್ರಸನ್ನ ಮೆಲ್ಕಾರ್, ಕಿಶೋರ್ ಸಜೀಪ, ಅಭಿ ಬೊಳ್ಳಾಯಿ ಧನುಷ್ ಬಿ.ಸಿ.ರೋಡ್ ಮತ್ತು ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here