ಬಂಟ್ವಾಳ: ವಾಮದಪದವು ಸ.ಪ್ರ.ದ. ಕಾಲೇಜ್ ನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ ದ.ಕ.ಜಿ.ಪ.ಹಿ.ಪ್ರಾ.ಶಾಲೆ ಕುಕ್ಕೇಡಿಯಲ್ಲಿ ಶನಿವಾರ ಡಿ.7 ರಂದು ಆರಂಭವಾಯಿತು. ದ.ಕ. ಜಿ.ಪಂ. ಸದಸ್ಯ  ಶೇಖರ ಕುಕ್ಕೇಡಿ ಅಳದಂಗಡಿ ಅವರು ಕಾರ್ಯಕ್ರಮ ಉದ್ಘಾಟಿಸಿ, ಸಮಾಜದಲ್ಲಿನ ಅಸಮಾನತೆಯನ್ನು ಹೋಗಲಾಡಿಸಿ ಸಾಮರಸ್ಯದ ಬದುಕನ್ನು ಕಟ್ಟಿಕೊಳ್ಳಲು ರಾಷ್ಟ್ರೀಯ ಸೇವಾ ಯೋಜನೆಯು ಸಹಾಯಕವಾಗುತ್ತದೆ ಎಂದರು. ರಾಷ್ಟ್ರೀಯತೆ ಅಥವಾ ದೇಶಪ್ರೇಮ ಎಂದರೆ ದೇಶದ ನಕಾಶೆಯನ್ನುಪ್ರೀತಿಸುವುದಲ್ಲ ಬದಲಾಗಿ ದೇಶದಲ್ಲಿರುವ ವಿವಿಧ ಜಾತಿಧರ್ಮ ವರ್ಗದ ಜನರನ್ನು ಪ್ರೀತಿಸುವುದು, ಸಾಮಾಜಿಕ ನ್ಯಾಯದ ಮೂಲಕ ಸಾಮರಸ್ಯ ಸಾಧ್ಯ ಎಂದರು.

ಕಾಲೇಜಿನ ಪ್ರಾಂಶುಪಾಲರಾದ ಪ್ರೊ ಹರಿಪ್ರಸಾದ್ ಶೆಟ್ಟಿ ಅಧ್ಯಕ್ಷತೆಯನ್ನು ವಹಿಸಿದ್ದರು. ಜಿ. ಪಂ. ಸದಸ್ಯರಾದ ತುಂಗಪ್ಪ ಬಂಗೇರ ಮಾತನಾಡಿ, ವ್ಯಕ್ತಿತ್ವ ವಿಕಸನ ಹೊಂದಲು ಹಾಗೂ ಬದುಕನ್ನು ಕಟ್ಟಿಕೊಳ್ಳಲು ಎನ್.ಎಸ್.ಎಸ್ ಸಹಕಾರಿ ಎಂದರು. ಕುಕ್ಕೇಡಿ ಗ್ರಾ.ಪಂ. ಅಧ್ಯಕ್ಷೆ ತೇಜಾಕ್ಷಿ ಮಾತನಾಡಿ, ಜೀವನದಲ್ಲಿ ಪರಿಪೂರ್ಣ ಹೊಂದಲು ಎನ್.ಎಸ್.ಎಸ್ ಪೂರಕ ಎಂದರು. ವಿಜಯ ರೈ ಆಲದಪದವು ಅವರು ಮಾತನಾಡಿ, ವಿದ್ಯಾರ್ಥಿಗಳ ಸರ್ವೋತೋಮುಖ ಅಭಿವೃದ್ಧಿಗೆ ಎನ್.ಎಸ್.ಎಸ್ ಪೂರಕ ಎಂದರು. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪರಷೋತ್ತಮ ಶೆಟ್ಟಿ ಶಿಬಿರಕ್ಕೆ ಶುಭಕೋರಿದರು. ಕುಕ್ಕೇಡಿ ಗ್ರಾ.ಪಂ. ಉಪಾಧ್ಯಕ್ಷ ಅಶೋಕ್ ಪಾಣೂರು ಅವರು ಎನ್.ಎಸ್.ಎಸ್‌ ನಿಂದ ಜೀವನದಲ್ಲಿ ಪರಿಪೂರ್ಣತೆ ಹೊಂದಲು ಸಾಧ್ಯ ಎಂದರು.

ಕುಕ್ಕೇಡಿ ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ನಾಗೇಶ್ ಹೆಗ್ಡೆ  ಶಿಬಿರಾರ್ಥಿಗಳನ್ನು ಅಭಿನಂದಿಸಿದರು. ಶಾಲೆಯ ಪ್ರಭಾರ ಮುಖ್ಯೋಪಾಧ್ಯಾಯರಾದ ಗೀತಾ ಜೂಡಿತ್ ಸಲ್ದಾನ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಿದರು. ಕುಕ್ಕೇಡಿ ಗ್ರಾ.ಪಂ. ಸದಸ್ಯೆ ಸರೋಜ ಶಿಬಿರಕ್ಕೆ ಶುಭಕೋರಿದರು. ಚೆನ್ನೈತ್ತೋಡಿ ಗ್ರಾ.ಪಂ. ಸದಸ್ಯ ಜಯರಾಮ ಶೆಟ್ಟಿ ಕಾಪು ಶಿಬಿರಕ್ಕೆ ಪ್ರಾಯೋಜಿಸಿ, ಶುಭಕೋರಿದರು.  ವಾಮದಪದವು ಸ.ಪ್ರ.ದ.ಕಾಲೇಜ್ ನ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಮೋಹನದಾಸಗಟ್ಟಿ ಶುಭಕೋರಿದರು.

ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ರೊನಾಲ್ಡ್ ಪ್ರವೀಣ್‌ ಕೊರೆಯ ಸ್ವಾಗತಿಸಿ, ವಿದ್ಯಾರ್ಥಿಗಳಾದ ದೀಕ್ಷಿತಾ, ಬೇಬಿ ದ್ವಿತೀಯ ಬಿಕಾಂ ಪ್ರಾರ್ಥಿಸಿದರು. ವಿದ್ಯಾ ಜೆ. ದ್ವಿತೀಯ ಬಿಕಾಂ ನಿರೂಪಿಸಿದರು. ರೋಹಿತ್ ದ್ವಿತೀಯ ಬಿ.ಎ. ವಂದಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here