ಉಜಿರೆ: ಜಿನ ಮಂದಿರಗಳಲ್ಲಿ (ಬಸದಿಗಳಲ್ಲಿ) ದೇವರ ದರ್ಶನಕ್ಕೆ ಹೋಗುವಾಗ ಬಸದಿಗಳ ಎದುರು ಇರುವ ಮಾನಸ್ತಂಭಗಳನ್ನು ದಾಟಿ ಹೋಗಬೇಕಾಗುತ್ತದೆ. ನಮ್ಮ ಮನದಲ್ಲಿರುವ ಅಹಂ, ಕಾಮ, ಕ್ರೋಧ, ಲೋಭ ಮೊದಲಾದ ಮಾನ ಕಷಾಯಗಳನ್ನು ಕಳೆದುಕೊಂಡು ಬಸದಿಗೆ ಹೋಗಿ ದೇವರ ದರ್ಶನ ಪಡೆಯಬೇಕೆಂದು ಎಲ್ಲಾ ಬಸದಿಗಳ ಎದುರು ಮಾನಸ್ತಂಭ ನಿರ್ಮಿಸಲಾಗುತ್ತದೆ ಎಂದು ಉಜಿರೆ ಎಸ್.ಡಿ.ಎಂ. ಕಾಲೇಜಿನ ನಿವೃತ್ತ ಪ್ರಾಧ್ಯಾಪಕಿ ಡಾ.ಜಯಮಾಲ ಎನ್. ಹೇಳಿದರು.
ಅವರು ಬೆಳಾಲು ಗ್ರಾಮದ ಬೈಪಾಡಿಯಲ್ಲಿರುವ ಭಗವಾನ್ ಶ್ರೀ ಶಾಂತಿನಾಥ ಸ್ವಾಮಿ ಬಸದಿಯಲ್ಲಿ ಸೋಮವಾರ ನೂತನ ಮಾನಸ್ತಂಭ ನಿರ್ಮಾಣಕ್ಕೆ ಚಾಲನೆ ನೀಡುವ ಸಮಾರಂಭದಲ್ಲಿ ಶುಭ ಹಾರೈಸಿ ಮಾತನಾಡಿದರು.
ಸಹೃದಯ ದಾನಿಗಳು ಹಾಗೂ ಭಕ್ತಾದಿಗಳ ಸಹಕಾರದೊಂದಿಗೆ ಆದಷ್ಟು ಶೀಘ್ರ ಕಾಮಗಾರಿ ಪೂರ್ಣಗೊಳ್ಳಲೆಂದು ಅವರು ಆಶಿಸಿದರು.
ಬೆಳಾಲು ಶಾಂತೀಶ ನಿವಾಸಿಗಳಾದ ಭರತ್‌ಕುಮಾರ್, ಉದಿತ್‌ ಜೈನ್ ಮತ್ತು ಕುಟುಂಬಸ್ತರು ಉಪಸ್ಥಿತರಿದ್ದರು. ಬಸದಿಯಲ್ಲಿ ಭಗವಾನ್ ಶ್ರೀ ಶಾಂತಿನಾಥ ಸ್ವಾಮಿಗೆ ಕ್ಷೀರಾಭಿಷೇಕ ಮತ್ತು ವಿಶೇಷ ಪೂಜೆ ನಡೆಯಿತು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here