ಉಜಿರೆ: ವ್ಯಾಪಾರ ವ್ಯವಹಾರದಲ್ಲಿ ಲೆಕ್ಕಾಚಾರ ಸುವ್ಯವಸ್ಥಿತವಾಗಿ ನಡೆಯಬೇಕು. ವ್ಯವಹಾರದಲ್ಲಿ ಹಣ ಸಂಪಾದನೆಗಿಂತಲೂ ಹಣದ ಯಶಸ್ವಿ ನಿರ್ವಹಣೆ ಮುಖ್ಯವಾಗಿದೆ ಎಂದು ಎಸ್.ಡಿ.ಎಂ.ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಿ. ಹರ್ಷೆಂದ್ರಕುಮಾರ್ ಹೇಳಿದರು. ಅವರು ಬುಧವಾರ ವೇಣೂರಿನಲ್ಲಿ ನಿರ್ಮಿಸಿದ ನೂತನ ವಾಣಿಜ್ಯ ಸಂಕೀರ್ಣ ಮಂಜುಶ್ರೀ ಯನ್ನು ಉದ್ಘಾಟಿಸಿ ಮಾತನಾಡಿದರು.
ಯಾವುದೇ ವ್ಯವಹಾರ ಹಾಗೂ ಉದ್ಯಮದಲ್ಲಿ ಬಂಡವಾಳ ಹಾಕುವಾಗ ದೂರಾಲೋಚನೆಯಿಂದ ಎಚ್ಚರಿಕೆ ವಹಿಸಬೇಕು.ಇಂದು ಎಲ್ಲರಿಗೂ ಹಣ ಸಂಪಾದನೆ ಬಗ್ಗೆ ಬಹಳಷ್ಟು ಮಾಹಿತಿ ಹಾಗೂ ತಿಳುವಳಿಕೆ ಇದೆ. ಆದರೆ ಹಣದ ಸಂಪಾದನೆಯನ್ನು ವ್ಯವಸ್ಥಿತವಾಗಿ ನಿರ್ವಹಿಸುವ ಕಲೆ ಹಾಗೂ ಜಾಣ್ಮೆ ತಿಳಿದಿರಬೇಕು ಎಂದು ಅವರು ಸಲಹೆ ನೀಡಿದರು.
ಆಶೀರ್ವಚನ ನೀಡಿದ ಮೂಡಬಿದ್ರೆ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, ಕೃಷಿ ಮತ್ತು ವ್ಯಾಪಾರ ಒಂದೇ ನಾಣ್ಯದ ಎರಡು ಮುಖಗಳಂತೆ ಇವೆ. ಕೃಷಿಕರು ಉತ್ತಮ ಆದಾಯ ಗಳಿಸಿದರೆ ವ್ಯಾಪಾರವೂ ಚೆನ್ನಾಗಿ ನಡೆಯುತ್ತದೆ. ಕೀಳರಿಮೆ ಬಿಟ್ಟು ಬರಡು ಭೂಮಿಯನ್ನು ಬಳಸಿ ರೈತರು ಆದಾಯ ಹೆಚ್ಚಿಸಿಕೊಳ್ಳಬೇಕು. ಜೀವನವೇ ಒಂದು ಹೋರಾಟವಾಗಿದ್ದು ಸುಂದರ ಪ್ರಕೃತಿ ಹಾಗೂ ಪಂಚಭೂತಗಳನ್ನು ನಾವು ಹಿತ-ಮಿತವಾಗಿ ಬಳಸಬೇಕು ಎಂದು ಸಲಹೆ ನೀಡಿದರು.
ವ್ಯಾಪಾರ-ವ್ಯವಹಾರದಲ್ಲಿ ದೊರಕಿದ ಲಾಭದಲ್ಲಿ ಕೊಂಚ ಭಾಗವನ್ನುದಾನ-ಧರ್ಮಾದಿ ಸತ್ಕಾರ್ಯಗಳಿಗೆ ಬಳಸಬೇಕು ಎಂದು ಸ್ವಾಮೀಜಿ ಸಲಹೆ ನೀಡಿದರು ಹಾಗೂ ವೇಣೂರಿನ ಬಾಹುಬಲಿ ಮೂರ್ತಿ ಸುಸ್ಥಿತಿಯಲ್ಲಿ ಉಳಿಯಬೇಕಾದರೆ ವೇಣೂರಿಗೆ ಬೈಪಾಸ್‌ರಸ್ತೆ ನಿರ್ಮಿಸಬೇಕೆಂದು ಸ್ವಾಮೀಜಿ ಸರ್ಕಾರವನ್ನು ಒತ್ತಾಯಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕಟ್ಟಡದ ಮಾಲಕ ಉದಯಕುಮಾರ್ ಕಂಬಳಿ, ತನ್ನ ಹಿರಿಯರ ಹಾಗೂ ಕುಟುಂಬ ವರ್ಗದವರ ಸಹಕಾರದಿಂದ ವಾಣಿಜ್ಯ ಸಂಕೀರ್ಣದ ಕನಸು ಇಂದು ನನಸಾದ ಬಗ್ಗೆ ಸಂತಸ ವ್ಯಕ್ತಪಡಿಸಿದರು.
ವೇಣೂರು ದಿಗಂಬರ ಜೈನ ತೀರ್ಥ ಕ್ಷೇತ್ರ ಸಮಿತಿ ಕಾರ್ಯದರ್ಶಿ ಎಂ. ವಿಜಯರಾಜ ಅಧಿಕಾರಿ ಶುಭಾಶಂಸನೆ ಮಾಡಿದರು.
ಎಸ್.ಡಿ.ಎಂ.ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷರಾದ ಪ್ರೊ.ಎಸ್. ಪ್ರಭಾಕರ್ ಮತ್ತು ಮಂಗಳೂರಿನ ಎಸ್.ಡಿ.ಎಂ ಕಾನೂನು ಕಾಲೇಜಿನ ಸ್ಥಾಪಕ ಪ್ರಾಂಶುಪಾಲ ಪ್ರಿ. ಎನ್.ಜೆ.ಕಡಂಬ ಉಪಸ್ಥಿತರಿದ್ದರು.
ಎಸ್.ಡಿ.ಎಂ.ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಕ್ಷೇಮಪಾಲನಾಧಿಕಾರಿ ಬಿ.ಸೋಮಶೇಖರ ಶೆಟ್ಟಿ ಸ್ವಾಗತಿಸಿದರು. ಉಲ್ಲೇಖ ಜೈನ್‌ ವಂದಿಸಿದರು.ಶಿಕ್ಷಕ ಧರಣೇಂದ್ರ ಕುಮಾರ್‌ ಕಾರ್ಯಕ್ರಮ ನಿರೂಪಿಸಿದರು.

ರಜತ ಮಹೋತ್ಸವ ಸಂಭ್ರಮದಲ್ಲಿ ಬೆಳ್ತಂಗಡಿ ಜೈನ್ ಮಿಲನ್
ಉಜಿರೆ: ರಜತ ಮಹೋತ್ಸವ ಸಂಭ್ರಮದಲ್ಲಿರುವ ಬೆಳ್ತಂಗಡಿ ಜೈನ್ ಮಿಲನ್ ಆಶ್ರಯದಲ್ಲಿಇದೇ ೧೫ ರಂದು ಭಾನುವಾರ ಬೆಳ್ತಂಗಡಿಯಲ್ಲಿ ಶ್ರೀ ಮಂಜುನಾಥ ಸ್ವಾಮಿ ಕಲಾ ಭವನದಲ್ಲಿ ಮಂಗಳೂರು ವಿಭಾಗ ಮಟ್ಟದಜಿನ ಭಜನಾ ಸ್ಪರ್ಧೆಆಯೋಜಿಸಲಾಗಿದೆಎಂದು ಸಂಘಟಕರು ತಿಳಿಸಿದ್ದಾರೆ.
ಧರ್ಮಸ್ಥಳದ ಹೇಮಾವತಿ ವಿ. ಹೆಗ್ಗಡೆ ಸ್ಪರ್ಧಾಕಾರ್ಯಕ್ರಮವನ್ನುಉದ್ಘಾಟಿಸುವರು.
ಭಾರತೀಯಜೈನ್ ಮಿಲನ್ ಮಹಿಳಾ ವಿಭಾಗದಅಧ್ಯಕ್ಷರಾದಅನಿತಾ ಸುರೇಂದ್ರಕುಮಾರ್ ಶುಭಾಶಂಸನೆ ಮಾಡುವರು.
ಮಂಗಳೂರಿನ ಉದ್ಯಮಿ ಪುಷ್ಪರಾಜ್‌ಜೈನ್, ಉಡುಪಿಯ ಪ್ರಸನ್ನಕುಮಾರ್, ಬಂಟ್ವಾಳದ ಸುದರ್ಶನ್‌ಜೈನ್ ಮತ್ತು ಬೆಳ್ತಂಗಡಿ ಜೈನ್ ಮಿಲನ್ ಸ್ಥಾಪಕಾಧ್ಯಕ್ಷ ಪಡಂಗಡಿ ಭೋಜರಾಜ ಹೆಗ್ಡೆ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.

 

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here