ತುಂಬೆ: ವಿದ್ಯಾರ್ಥಿಗಳು ದಂತ ಸಂರಕ್ಷಣೆ ಮಾಡಿ, ಆರೋಗ್ಯವನ್ನುಕಾಪಾಡಿಕೊಂಡು ಬಂದಾಗ ಓದಿನಲ್ಲಿ ಏಕಾಗ್ರತೆ ಗಳಿಸಬಹುದು. ಇವತ್ತಿನ ವಿದ್ಯಾರ್ಥಿಗಳು ಸಣ್ಣ ಪ್ರಾಯದಲ್ಲೆ ದಂತಚಿಕಿತ್ಸೆಗೆ ಒಳಗಾಗುತ್ತಿರುವುದು ವಿಷಾದ ವಿಷಯವೆಂದು ತುಂಬೆ ಕಾಲೇಜಿನ ಪ್ರಾಂಶುಪಾಲ ಕೆ.ಎನ್. ಗಂಗಾಧರ ಆಳ್ವ ಅಭಿಪ್ರಾಯಪಟ್ಟರು.ಅವರು ತುಂಬೆ ಕಾಲೇಜಿನಲ್ಲಿ ಎ.ಬಿ.ಶೆಟ್ಟಿ ಡೆಂಟಲ್‌ ಕಾಲೇಜು ವತಿಯಿಂದ ಸಂಸ್ಥೆಯ ವಿದ್ಯಾರ್ಥಿಗಳಿಗೆ ನಡೆಸಿದ ಉಚಿತ ದಂತ ಶಿಬಿರದ ಅಧ್ಯಕ್ಷತೆ ವಹಿಸಿದ್ದರು. ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ ಇದರ ಸಹಯೋಗದೊಂದಿಗೆ ನಡೆದ ಈ ಶಿಬಿರದಲ್ಲಿ ಸೇವಾರತ್ನ ಕೃಷ್ಣಕುಮಾರ್ ಪೂಂಜಾ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಡಾ| ರಂಜಿತ್ ಶೆಟ್ಟಿ, ಡಾ| ವೆಂಕಟರಮಣ, ಸಮಾಜ ಸೇವಕಿ ಸುಜಾತ ಅವರು ಭಾಗವಹಿಸಿದ್ದರು. ಸುಮಾರು 500 ವಿದ್ಯಾರ್ಥಿಗಳ ದಂತ ಪರಿಶೀಲನೆ ನಡೆಸಲಾಯಿತು. ಉಪನ್ಯಾಸಕ ದಿನೇಶ್ ಶೆಟ್ಟಿ ಅಳಿಕೆ ಸ್ವಾಗತಿಸಿ, ದೈಹಿಕ ಶಿಕ್ಷಕ ಸಾಯಿರಾಂ ನಾಯಕ್ ನಿರೂಪಿಸಿದರು. ಡಾ| ವಿಶ್ವನಾಥ ಪೂಜಾರಿ ಉಪಸ್ಥಿತರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here