ಬಂಟ್ವಾಳ: ಶ್ರೀರಾಮ ಪ್ರಥಮ ದರ್ಜೆ ಕಾಲೇಜು ಕಲ್ಲಡ್ಕದಲ್ಲಿ ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ಡಾಮೀಜಿಗಳಿಗೆ ನುಡಿನಮನವನ್ನು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ಅವರು ಸಲ್ಲಿಸುತ್ತಾ, ಸ್ಡಾಮೀಜಿಯವರು ಸಮಾಜದಲ್ಲಿ ದೀನ ದಲಿತರಿಗಾಗಿ ಮಾಡಿದ ಸೇವೆ ಅಗಾಧವಾದುದು. ಪ್ರತಿ ಜೀವಿಯಲ್ಲೂ ದೇವರನ್ನು ಕಂಡ ಮಹಾನ್ ಕೃಷ್ಣಭಕ್ತ ಮರೆಯಾಗಿರುವುದು ದುಃಖದ ಸಂಗತಿ. ಅವರ ಲಕ್ಷಾಂತರ ಸಾಮಾಜಿಕ ಪರಿವರ್ತನೆಗಳು ಹಾಗೂ ರಾಷ್ಟ್ರದ ಬಗೆಗಿನ ಚಿಂತನೆಗಳನ್ನು ನಾವು ಸದಾ ನೆನಪಿಟ್ಟುಕೊಳ್ಳುವಂತಾಗಬೇಕು ಎಂದರು. ಈ ಸಂಧರ್ಭದಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮತ್ತು ಶ್ರದ್ಧಾಂಜಲಿ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಕೃಷ್ಣಪ್ರಸಾದ ಕಾಯರ್‌ಕಟ್ಟೆ, ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.