ಬಂಟ್ವಾಳ: ಶ್ರೀರಾಮ ಪದವಿ ಮಹಾವಿದ್ಯಾಲಯದಲ್ಲಿ ಕಂಕಣ ಸೂರ್ಯಗ್ರಹಣ ವೀಕ್ಷಣೆಯ ಕಾರ್ಯಗಾರವು ಡಿ.26 ರಂದು ಬೆಳಗ್ಗೆ 8 ಗಂಟೆಯಿಂದ 11.15 ರವರೆಗೆ ನಡೆಯಲಿದೆ. ಗ್ರಹಣದ ಗರಿಷ್ಠ ಪ್ರಮಾಣವು ಭಾರತೀಯ ಕಾಲಮಾನ 9:23:50 ರಿಂದ 9:26:22ರ (2 ನಿಮಿಷ 32 ಸೆಕೆಂಡುಗಳು) ಸಮಯದಲ್ಲಿ ಸಂಭವಿಸಲಿದೆ. ಸಾರ್ವಜನಿಕರಿಗೆ ಈ ಸೂರ್ಯಗ್ರಹಣ ವೀಕ್ಷಣೆಯನ್ನು ಪಿನ್‌ಹೋಲ್ ಉಪಕರಣದ ಮೂಲಕ ಪರದೆಯ ಮೇಲೆ ಸೂರ್ಯನ ಪ್ರತಿಬಿಂಬ ಹಾಯಿಸಿ ಗ್ರಹಣವನ್ನು ವೀಕ್ಷಿಸುವ ಅವಕಾಶವನ್ನು ಕಲ್ಪಿಸಿಕೊಡಲಾಗುವುದು ಎಂದು ಕಾಲೇಜಿನ ಪ್ರಾಂಶುಪಾಲ ಕೃಷ್ಣಪ್ರಸಾದ ಕಾಯರ್‌ಕಟ್ಟೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.